ಹೆಚ್. ನಾಗವೇಣಿಯವರ ಕಸಬರಿಕೆ ಕತೆಯಲ್ಲಿ: ಪ್ರೀತಿ ಮತ್ತು ಜಾತಿ ರಾಜಕಾರಣ
Abstract
ಚಂದು ಮತ್ತು ಮಂಜಪ್ಪನ ಪ್ರೀತಿ ನಿನ್ನೆ ಮೊನ್ನೆಯದಲ್ಲ, ಅದು ಅವರ ತಾಯಿ ಕೆಮ್ಮಣ್ಣು ತೀರಿ ಹೋದ ದಿನದಿಂದ ಹುಟ್ಟಿದ್ದು. ಆಗ ಚಂದುವಿಗೆ ಹದಿನಾರು ವರ್ಷ ಮಂಜಪ್ಪನಿಗೆ ಇಪ್ಪತ್ತೊಂದು ವರ್ಷ ಆಗಿಂದಲೂ ಮಂಜಪ್ಪ ಮತ್ತು ಚಂದುವಿನ ಪ್ರೀತಿಯ ಬಗ್ಗೆ ಸ್ವತಃ ಅವರ ಕೇರಿ ಜನರೇ ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲ್ಲಿಲ. ಅದೇ ರೀತಿ ಮಂಜಪ್ಪನ ತಾಯಿಯೂ ಕೂಡ ಇವರ ಪ್ರೀತಿಯ ಬಗ್ಗೆ ತಾತ್ಸಾರ ಮನೋಭಾವದೊಂದಿಗೆ ಬೊಂಞ್ಞಕ್ಕೆಯು ತನ್ನ ಮಗನ ಬಗ್ಗೆ “ಒಳ್ಳೇ ದುಡ್ಡು ಕೊಡುವ ಸಂಬಂಧ ಬಂದರೆ ತನ್ನ ಮಂಜಪ್ಪ ಜಾತಿ ಹುಡುಗಿಯನ್ನು ಮದುವೆಯಾಗದೆ ಎಲ್ಲಿ ಹೋಗುತ್ತಾನೆ?” (ನಾಕನೇ ನೀರುಪು. ಸಂ. ೬೨)ಎಂಬ ನಂಬಿಕೆಯಿಂದ ಸುಮ್ಮನೆ ತಲೆಕೆಡಿಸಿಕೊಳ್ಳದೆ ಇದ್ದದ್ದು, ಅವರ ಪ್ರೀತಿ ಬಲವಾಗಿ ನಿಲ್ಲಲೂ ಸಹಾಯವಾಗಿತ್ತು. ಆದರೆ ಮಂಜಪ್ಪ ಮತ್ತು ಚಂದುವಿನ ಪ್ರೀತಿಯ ಬಗ್ಗೆ ಪ್ರಸ್ತಾಪಿಸಿದ ಲೇಖಕರು ಎಲ್ಲೂ ಕೂಡ ಮಂಜಪ್ಪನ ಮೂಲಕ ಮದುವೆಯ ವಿಷಯದ ಪ್ರಸ್ತಾಪವೇ ಇಲ್ಲದಿರುವುದನ್ನು ಗಮನಿಸಿದ್ದಾರೆ ಎಲ್ಲೋ ಒಂದು ಕಡೆ ಈ ಸಮಾಜದ ಕಟ್ಟುಪಾಡುಗಳನ್ನು ಮೀರುವ ಪ್ರಯತ್ನವಿದ್ದರೂ ಮೀರಾಲಾಗದ ಅಸಹಾಯಕತೆಯನ್ನು ಎತ್ತಿಹಿಡಿದಿದೆ. ಪ್ರೀತಿಸಲು ಯಾವುದೇ ಜಾತಿ ಅಡ್ಡಿ ಬರುವುದಿಲ್ಲ ಆದರೆ ಅದೇ ಪ್ರೀತಿ ಮದುವೆ ಎಂಬ ಸಾಮಾಜಿಕ ಸಂಸ್ಥೆಗೆ ಒಳಪಡುವ ಹೊತ್ತಿಗೆ ಜಾತಿ ಮುಖ್ಯವಾಗುವುದನ್ನು ನೋಡಿದಾಗ ಸಮಾಜದಲ್ಲಿ ಜಾತಿಯನ್ನು ಮೀರಿ ಬೆಳೆಯುತ್ತಿದೀವಿ ಎಂಬುವ ಹೊತ್ತಿನಲ್ಲಿಯೂ ನಮ್ಮ ಪರಂಪರೆ, ಸಂಪ್ರದಾಯ ನಮಗೆ ಗೊತ್ತಿಲ್ಲದೆ ನಮ್ಮನ್ನು ನಿಯಂತ್ರಿಸುತ್ತಿರುತ್ತವೆ ಎಂಬುದು ಸತ್ಯ. ಒಟ್ಟಾರೆಯಾಗಿ ಈ ಕಥೆಯಲ್ಲಿ ಜಾತಿಯನ್ನು ಮೀರುವ ಶಕ್ತಿ ಪ್ರೀತಿಗೆ ಮಾತ್ರ ಸಾಧ್ಯ ಎಂಬುದನ್ನು ವ್ಯಕ್ತವಾಗಿದೆ. ಅಲ್ಲದೆ ಅದನ್ನು ಮೀರುವಲ್ಲಿ ಇರುವ ಕೆಲವು ಮೀತಿಗಳನ್ನು ಗುರುತಿಸಲಾಗಿದೆ. ಅಲ್ಲದೆ ಸಮಕಾಲೀನ ಸಂದರ್ಭದಲ್ಲಿ ಅವಸರದಲ್ಲಿ ಕೆಲವು ಸಾರಿ ಮುಂದಿನ ಪರಿಣಾಮಗಳ ಬಗ್ಗೆಯೂ ಯೋಚಿಸದೆ ತೆಗೆದುಕೊಂಡ ನಿರ್ಧಾರಗಳಿಗೆ ತಳಸಮುದಾಯಗಳು ಕಟ್ಟಿದ ಬೆಲೆ ಆಗಾಧವಾದ್ದದು ಎಂಬುದನ್ನು ಮರೆಯುವಂತಿಲ್ಲ.
References
ಸಂ. ರಾಮಚಂದ್ರ ಶರ್ಮ, ಸಮಕಾಲೀನ ಕನ್ನಡ ಸಣ್ಣ ಕತೆಗಳು, ೧೯೯೯, ನ್ಯಾಷನಲ್ ಬುಕ್ಟ್ರಸ್ಟ್, ಹೊಸ ದೆಹಲಿ.
ಟಿ. ಆರ್. ಚಂದ್ರಶೇಖರ್, ಮಹಿಳಾ ಅಧ್ಯಯನ ಪರಿಭಾಷೆ, ೨೦೧೬, ಕುವೆಂಪು ಭಾಷಾ ಭಾರತೀಯ ಪ್ರಾಧಿಕಾರಿ ,ಕಲಾಗ್ರಾಮ, ಬೆಂಗಳೂರು.
ಚಂದ್ರಶೇಖರ ಪಾಟೀಲ, ಕೃತಿಕೇಂದ್ರಿತ ವಿಮರ್ಶಾ ಬರಹಗಳ ಸಂಕಲನ, ೨೦೧೭, ಸಪ್ನ ಬುಕ್ ಹೌಸ್, ಬೆಂಗಳೂರು.
ಬಿ. ಎನ್. ಸುಮಿತ್ರಾ ಬಾಯಿ, ಪಶ್ಚಿಮದ ಸ್ತ್ರೀವಾದಿ ವಿಮರ್ಶಾ ಪಂಥಗಳು, ೨೦೧೦, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ.