ಮಲಬಾರ್ ಮಾಪಿಳ್ಳೆ ಬಂಡಾಯಗಳು: ಧರ್ಮ, ಭೂಮಿ ಮತ್ತು ಹಕ್ಕುಗಳಿಗಾಗಿ ಹೋರಾಟ

Authors

  • ದಿನೇಶ ಎನ್.ಎನ್. ಸಂಶೋಧನಾರ್ಥಿ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ.

Keywords:

ಭೂಹಂಚಿಕೆ ವ್ಯವಸ್ಥೆ, ಭೂಸ್ವಾಮ್ಯದ ಹಕ್ಕುಗಳು, ಮಲಬಾರ್‌ನಲ್ಲಿ ರೈತ ಸಂಘರ್ಷಗಳು

Abstract

19ನೆಯ ಶತಮಾನದಾದ್ಯಂತ ಸ್ಫೋಟಗೊಂಡು 20ನೇಯ ಶತಮಾನದ ಮೊದಲ ಭಾಗವು ಉಗ್ರ ಹೋರಾಟದೊಂದಿಗೆ ಅಳಿದುಹೋದವು. ಕೇರಳದ ಮಲಬಾರ್ ಪ್ರದೇಶದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಪ್ರತಿರೋಧವಾಗಿ ಪ್ರಾರಂಭವಾಯಿತು. ಮಲೆಯಾಳಿ ಸಮಾಜದ ಜೊತೆಗಿನ ಅರಬರ ವ್ಯಾಪಾರೀ ಸಂಬಂಧದ ಚರಿತ್ರೆ ಸುಮಾರು 9ನೇ ಶತಮಾನದಷ್ಟು ಹಿಂದಿನಿಂದ ಪ್ರಾರಂಭವಾಗುತ್ತದೆ. ಕರಾವಳಿ ಪ್ರಾಂತ್ಯದಲ್ಲಿದ್ದ ಹಿಂದೂ ಮುಖಂಡರುಗಳಿಗೆ ಶ್ರೀಮಂತ ಅರಬ ವ್ಯಾಪಾರಿಗಳ ಬೆಂಬಲ ಯಾವಾಗಲೂ ಬೇಕಾಗುತ್ತಿತ್ತು. ಮಲಬಾರಿನಲ್ಲೇ ಕ್ರಮೇಣ ಉಳಿದುಕೊಂಡ ಅರಬ ವ್ಯಾಪಾರಿಗಳು ಪ್ರಮುಖವಾಗಿ ನಾಯರ್ ಮತ್ತು ತಿಯಾ ಜಾತಿಯ ಹೆಂಗಸರನ್ನೇ ಮದುವೆಯಾದರು. ಕಾಲಾಂತರದಲ್ಲಿ ಇವರೇ ಮಾಪಿಳ್ಳೆಗಳಾದರು. ಮತಾಂತರಗೊಂಡು ಹೊಸದಾಗಿ ಸೇರ್ಪಡೆಗೊಳ್ಳುವ ಪ್ರತಿಯೊಬ್ಬ ಸದಸ್ಯನನ್ನು ಮಾಪಿಳ್ಳೆಗಳು ಸಂತೋಷದಿಂದ ಸ್ವೀಕರಿಸಿದರೂ ಮೇಲ್ವಾತಿಯ ಹಿಂದೂಗಳು ಮಾತ್ರ ಅವರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳುತ್ತಿದ್ದರು. ತಮ್ಮ ಆರ್ಥಿಕ ಹಿತಾಸಕ್ತಿಗಳನ್ನು ಬಲಪಡಿಸಿಕೊಳ್ಳಲು ಕೆಲವು ಮಾಪಿಳ್ಳೆ ರೈತರು 1785ರಲ್ಲಿ ಭೂಕಂದಾಯ ಹೇರಿಕೆಯನ್ನು ಪ್ರತಿಭಟಿಸಿ ಟಿಪ್ಪುವಿನ ವಿರುದ್ಧದ ದಂಗೆಯಾಗಿರುವುದು. ಬ್ರಿಟೀಷರು ಮಲಬಾರ್ ಪ್ರಾಂತದಲ್ಲಿದ್ದ ಭೂಸ್ವಾಮ್ಯದ ಹಕ್ಕುಗಳನ್ನು ಅರ್ಥೈಸಿಕೊಂಡ ರೀತಿ ಮತ್ತು ಹೊಸ ಕಾನೂನುಗಳನ್ನು ಜಾರಿಗೊಳಿಸಿದ ಕ್ರಮಗಳೇ ಮಾಪಿಳ್ಳೆಗಳು ದಂಗೆಯೇಳಲು ಕಾರಣವಾಗಿವೆ. ಹಕ್ಕುಗಳ ಪುನರ್ ಸ್ಥಾಪನೆಯ ಈ ಬ್ರಿಟಿಷ್ ನೀತಿಯನ್ನು ʼಒಳ್ಳೆಯ ಸರಕಾರದ ಉನ್ನತ ಸಾಧನೆ ಹಾಗೂ ಉತ್ತಮ ಭವಿಷ್ಯಕ್ಕೆ ಭರವಸೆ’ ಎಂಬುದಾಗಿ ಪ್ರಚಾರ ಮಾಡಲಾಯಿತು. ಸಾಮಾಜಿಕ ವ್ಯವಸ್ಥೆಗೆ ಖಿಲಾಫತ್ ಎನ್ನುವ ಶಬ್ದ ಆಗ ಅನ್ವಯವಾದ ನೆಲೆಯಲ್ಲಿ ಭಾವನಾತ್ಮಕ, ಆವೇಶಯುಕ್ತ ಮತ್ತು ಕ್ರಾಂತಿಕಾರೀಯಾಗಿತ್ತು. ಮಲಬಾರ್‌ನಲ್ಲಿ ದೀರ್ಘಕಾಲೀನ ರೈತ ಸಂಘರ್ಷಗಳು ನಡೀತಿದ್ದರೂ ಕೂಡಾ, ದಮನಿತ ಮೋಪ್ಲಾ ರೈತರು ಪ್ರವಾದಿಯ ಮನವಿಯ ಹೊರತು ಬಂಡೇಳುವುದು ಅಸಾಧ್ಯವಾಗಿತ್ತು.

References

ಧನಗೆರೆ ಡಿ.ಎನ್., ರಾಮಚಂದ್ರ ಉಡುಪ & ಅನಂತಕೃಷ್ಣ ಹೆಬ್ಬಾರ (ಅನು), (2012), ಭಾರತದಲ್ಲಿ ರೈತ ಚಳುವಳಿಗಳು 1920-1950, ಕ್ರಿಯಾ ಪ್ರಕಾಶನ, ಬೆಂಗಳೂರು.

ಶಿವಪ್ಪ ಬಿ.ಸಿ., (2010), ಐತಿಹಾಸಿಕ ಇಣುಕು ನೋಟ, ಕೆ.ಕೆ. ಪ್ರಿಂಟರ್ಸ್‌ ಅಂಡ್ ಪಬ್ಲಿಷರ್ಸ್‌, ಬೆಂಗಳೂರು.

ಗಣೇಶ್ ಕೆ.ಎನ್., (2021), ಮಲಬಾರ್ ಬಂಡಾಯ-1921: ವಸಾಹತುಶಾಹಿ ಮತ್ತು ಭೂಮಾಲಿಕರ ವಿರುದ್ಧದ ಹೋರಾಟ, ಜನಶಕ್ತಿ, ಬೆಂಗಳೂರು.

ಶೈಲಜಾ ಜಿ.ಪಿ., (2022), ಮೈಸೂರು, ಕೆನರಾ ಮತ್ತು ಮಲಬಾರ್ ಪ್ರಾಂತ್ಯಗಳ ಮೂಲಕ ʼಮದ್ರಾಸಿನಿಂದ ಒಂದು ಪಯಣ’: ಸಂಪುಟ-1, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು.

https://www.drishtiias.com/daily-news-analysis/malabar-rebellion

Variankunnath, “Malabar rebellion leaders’ exclusion from ICHR book triggers controversy”, new Indian express, 24 Aug 2021.

Amrith Lal, “The Malabar rebellion is a layered story with multiple strands that defy simplistic narrations”, new Indian express, Jul 5, 2020.

R.H. Hitchcock, “Peasant Revolt in Malabar: A History of the Malabar Rebellion-1921”, 1 January 2019.

Biju Achuthan, “Malabar Rebellion: A Gandhian Oversight in Retrospect”, 28 July 2021.

Roland E. Miller, Mappila Muslims of Kerala: A Study in Islamic Trends”, Orient Longman, Madras, 1976.

K. K. N. Kurup, “Malabar Rebellion 1921”, Yuvatha Book House, 2020.

Bipan Chandra, Mridula Mukherjee, Aditya Mukherjee, “India’s Struggle for Independence”, Penguin UK, 2016.

Hussain Randathani, “Mappila Muslims: A Study on their Political and Social Life”, Other Books, 2007.

Downloads

Published

02.04.2025

How to Cite

ದಿನೇಶ ಎನ್.ಎನ್. (2025). ಮಲಬಾರ್ ಮಾಪಿಳ್ಳೆ ಬಂಡಾಯಗಳು: ಧರ್ಮ, ಭೂಮಿ ಮತ್ತು ಹಕ್ಕುಗಳಿಗಾಗಿ ಹೋರಾಟ. ಅಕ್ಷರಸೂರ್ಯ (AKSHARASURYA), 6(02), 105 TO 116. Retrieved from https://aksharasurya.com/index.php/latest/article/view/613

Issue

Section

ಸಂಶೋಧನಾ ಲೇಖನಗಳು. | RESEARCH ARTICLE.