ಸರ್ವಜ್ಞನ ವಚನಗಳಲ್ಲಿ ಕೃಷಿವಿಜ್ಞಾನ
Keywords:
ವಚನ, ಕೃಷಿ ತಂತ್ರಜ್ಞಾನ, ಕೃಷಿ ವಿಜ್ಞಾನ, ಪಾರಂಪರಿಕ ಜ್ಞಾನ, ಬೇಸಾಯ ವಿಜ್ಞಾನ, ಕೀಟ ವಿಜ್ಞಾನAbstract
ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ಸನ್ನಿವೇಶದ ಪ್ರಭಾವದಿಂದಾಗಿ ಗ್ರಾಮೀಣ ಜನತೆ ಮತ್ತು ಯುವಕರು ಕೃಷಿಯಿಂದ ವಿಮುಖರಾಗಿ ನಗರ ಬದುಕಿಗೆ ಆಕರ್ಷಿತರಾಗಿ ನಗರಗಳನ್ನು ಸೇರುತ್ತಿದ್ದಾರೆ. ಇನ್ನೂ ಕೆಲ ಪ್ರಯೋಗಶೀಲ ಯುವ ಮನಸ್ಸುಗಳು, ಇಂಜಿನಿಯರ್‌ಗಳು ಕೃಷಿಗೆ ಆಕರ್ಷಿತರಾಗಿ ಹಳ್ಳಿಗಳಿಗೆ ಬಂದು ನೆಲೆಸಿ, ಕೃಷಿಯಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗುತ್ತಿದ್ದಾರೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ನಮ್ಮ ಯುವಕರು ಮತ್ತು ಗ್ರಾಮೀಣ ಜನತೆ ಹೆಜ್ಜೆಹಾಕುತ್ತಿದ್ದಾರೆ. ನಮ್ಮ ಹಳ್ಳಿಗಳಲ್ಲಿ ಬಹುಪಾಲು ಕೂಲಿಕಾರ್ಮಿಕರಿಲ್ಲದೆ, ಕೆಲ ಕುಟುಂಬದಲ್ಲಿ ಸದಸ್ಯರೂ ಇಲ್ಲದೆ ಇಂದು ನಮ್ಮ ಹಳ್ಳಿಗಳು ವೃದ್ಧರ ಆಶ್ರಯ ತಾಣಗಳಾಗಿ ಮಾರ್ಪಡುತ್ತಿವೆ. ಇಂದು ಕೃಷಿಯನ್ನು ಉಳಿಸಿಕೊಳ್ಳುವುದು ನಮ್ಮ ಹಳ್ಳಿಗಳ ಅಸ್ತಿತ್ವದ ಪ್ರಶ್ನೆಯಾಗಿ ಕಾಡುತ್ತಿದೆ. ನಮ್ಮ ಜನಪದರ, ವಚನಕಾರರ ದೇಸಿ ಕೃಷಿ ಜ್ಞಾನ ಮತ್ತು ಪರಂಪರೆಯ ಕೃಷಿ ಇಂದಿಗೂ ನಮಗೆ ಪ್ರಜ್ಞೆಯಾಗಿ ಮತ್ತೆ ಮತ್ತೆ ಕಾಡುತ್ತಿದೆ.
ನಾಡಿನೆಲ್ಲೆಡೆ ಏಕ ಬೆಳೆ ಪದ್ಧತಿ ಅನುಸರಿಸುತ್ತಿರುವುದು, ಹೆಚ್ಚಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾ, ಲಾಭದಾಯಕ ಬೆಳೆಗಳನ್ನಷ್ಟೆ ಬೆಳೆದು ಹೆಚ್ಚಿನ ಆದಾಯವನ್ನು ಗಳಿಸಬೇಕೆಂಬ ಆಸೆಯು ನಮ್ಮ ನೆಲದ ಆಹಾರ ಸಂಸ್ಕೃತಿಯ ಬೆಳೆಗಳು ಮರೆಯಾಗುವಂತೆ ಮಾಡುತ್ತಿದೆ. ನಮ್ಮ ಜನಪದರು ಕೃಷಿಯನ್ನು ಎಂದೂ ಲಾಭದಾಯಕವಾಗಿ ನೋಡಿದವರಲ್ಲ. ಕೃಷಿಯನ್ನು ನಮ್ಮ ಆಹಾರದ ಭಾಗವಾಗಿ, ಸಂಸ್ಕೃತಿಯ ಭಾಗವಾಗಿ ನೋಡಿದವರು. ಇಂದು ಅಧಿಕ ಇಳುವರಿ ಪಡೆಯಲು ಬೆಳೆಗಳಿಗೆ ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು, ಕೀಟ-ಪೀಡೆನಾಶಕಗಳನ್ನು ಬಳಸಿಕೊಂಡು ನೆಲಜಲವನ್ನು ಕಲುಷಿತಗೊಳಿಸಲಾಗುತ್ತಿದೆ. ಇಂದು ಯಂತ್ರ-ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿಯಲ್ಲಿ ಪ್ರಗತಿಯನ್ನು ಸಾಧಿಸಲಾಗುತ್ತಿದೆ. ಕೃಷಿಗೆ ಇಂತಹ ಆಧುನಿಕತೆ ಬೇಕು. ಆದರೆ ಇದನ್ನು ಎಷ್ಟು ಬೇಕೊ ಅಷ್ಟನ್ನು ಮಾತ್ರ ಬಳಕೆ ಮಾಡಿಕೊಂಡರೆ ಅನುಕೂಲವಾಗುತ್ತದೆ. ನಮ್ಮ ಹಳ್ಳಿಗಳಲ್ಲಿ ಅನೇಕ ಪ್ರಗತಿಪರ ರೈತರು, ಯುವ ರೈತರು ಇಂದಿಗೂ ದುಡಿಮೆಗೆ ಬದ್ದರಾಗಿ ನಮ್ಮ ಹಳ್ಳಿಗಳಲ್ಲಿ ದುಡಿಯುತ್ತಿರುವುದರಿಂದ, ನಮ್ಮ ರೈತರು ದೇಶಕ್ಕೆ ಅನ್ನ ಕೊಡುವ ಅನ್ನದಾತರಾಗಿದ್ದಾರೆ.
References
ವಿದ್ಯಾಶಂಕರ್ ಎಸ್. (ಸಂ), (1974), ಸರ್ವಜ್ಞ ವಚನ ಸಂಗ್ರಹ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ವಿದ್ಯಾಶಂಕರ್ ಎಸ್. (ಸಂ), (1993), ಸಂಕೀರ್ಣ ವಚನ: ಸಂಪುಟ-2, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು.
ಚನ್ನಪ್ಪ ಉತ್ತಂಗಿ (ಸಂ), (2005), ಸರ್ವಜ್ಞ ವಚನಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
Downloads
Published
How to Cite
Issue
Section
License
Copyright (c) 2025 ಅಕ್ಷರಸೂರ್ಯ (AKSHARASURYA)

This work is licensed under a Creative Commons Attribution 4.0 International License.