ಅಂಬೇಡ್ಕರ್‌ರವರ ಸಾಮಾಜಿಕ ಚಿಂತನೆಗಳು
Keywords:
ಮಾನವತಾವಾದಿ, ನೇತಾರ, ಶ್ರೇಣಿಕೃತ, ಸಂವಿಧಾನ, ಧೀಮಂತ, ಶೋಚನೀಯ, ಚೌಡಾರ್‌ಕೆರೆ, ಮಹಾಮನೆಯ, ಆಲವೆAbstract
ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿ ಎಂದು ಕರೆಸಿಕೊಂಡ ಮಹಾನ್ ವ್ಯಕ್ತಿ. ಇವರು ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಇವರು ದೇಶಕ್ಕಾಗಿ ಮಾಡಿದ ಹೋರಾಟಗಳು ಎಂತಹ ದುರ್ಬಲ ವ್ಯಕ್ತಿಗಳನ್ನೂ ಸಹ ಎಚ್ಚರಿಸುತ್ತದೆ. ಇವರ ಕೊಡುಗೆಯನ್ನು ಭಾರತೀಯ ಜನತೆ ಎಂದಿಗೂ ಮರೆಯುವುದಿಲ್ಲ. ಸಂವಿಧಾನ ರಚನೆಗೆ ಮಾತ್ರವಲ್ಲದೇ ಅವರ ಸೇವೆ ಜನತೆಯನ್ನು ಜಾಗೃತರಾಗಿ ಮಾಡುವ ಸಾಧನವಾಗಿದೆ ಎನ್ನಬಹುದು.
ಅಂಬೇಡ್ಕರ್ ಅವರು ವೈಚಾರಿಕತೆಯ ನೆಲೆಯಲ್ಲಿ ಈ ದೇಶವನ್ನು ಮುಂದೆ ತೆಗೆದುಕೊಂಡು ಹೋಗಬೇಕೆಂಬ ಮಹದಾಶಯವನ್ನು ಹೊಂದಿರುವ ಅಪರೂಪ ವ್ಯಕ್ತಿ. ಈ ಹಿನ್ನಲೆಯಲ್ಲಿಯೇ ಅವರು “ಈ ದೇಶದಲ್ಲಿ ಗುಡಿ-ಗೋಪುರಗಳಿಗಿಂತ ಶಾಲೆಗಳು ತೆರೆದರೆ, ಆ ದೇಶ ಉದ್ದಾರವಾಗುತ್ತದೆ” ಎಂಬ ನಿಲುವನ್ನು ತಾಳಿದ್ದರು. ಅಂಬೇಡ್ಕರ್ ಅವರ ಆಲೋಚನೆಗಳು, ಜೀವನ ಮೌಲ್ಯಗಳು ಸಾಹಿತ್ಯ ಕ್ಷೇತ್ರದಲ್ಲೂ ವಸ್ತುವಾಗುತ್ತಿದೆ ಎಂದರೆ; ಆ ವ್ಯಕ್ತಿಯ ಅನನ್ಯತೆಯ ಬಗ್ಗೆ ಅವಲೋಕನ ಮಾಡಬೇಕಾದದ್ದೇ ಸರಿ. ಅವರ ನಡೆ, ನುಡಿಗಳ ಜಾಡನ್ನಿಡಿದರೆ ನಾವು ಎಂತಹ ಅಸಮಾನತೆಯನ್ನಾಗಲೀ, ಕಷ್ಟಕರವಾದ ಯಾವುದೇ ಕೆಲಸವಾಗಲೀ ಅಂತಹವುಗಳಿಂದ ನಾವು ಸುಲಭವಾಗಿ ತಪ್ಪಿಸಿಕೊಳ್ಳಬಹುದೆಂಬ ಅರಿವು ಮನದಟ್ಟಾಗುತ್ತದೆ.
References
ಅಂಬೇಡ್ಕರ್ ಬಿ.ಆರ್., (1951 ಮೇ 20), ಬುದ್ಧಿಸಂ ಕೆನ್‌ಎಂಡ್ ಇಂಡಿಯಾಸ್ ಇಲ್ಸ್ (ಬುದ್ಧ ಜಯಂತಿಯದಂದು ಮಾಡಿದ ಭಾಷಣ), ನ್ಯೂಡೆಲ್ಲಿ, ಇಂಡಿಯಾ.
ಅಂಬೇಡ್ಕರ್ ಬಿ.ಆರ್., (1956 ನವೆಂಬರ್ 15-21), ಬುದ್ಧಿಸಂ ಅಂಡ್ ಕಮ್ಯೂನಿಸಂ (ನಾಲ್ಕನೇ ವಿಶ್ವ ಬೌದ್ಧ ಸಮ್ಮೇಳನದಲ್ಲಿ ಮಾಡಿದ ಭಾಷಣ), ಕಠ್ಮಂಡು, ನೇಪಾಳ.
ಜವರಯ್ಯ ಮ.ನ., (1995), ಅಂಬೇಡ್ಕರ್ ಮತ್ತು ಸಾಮಾಜಿಕ ನ್ಯಾಯ, ಸಿದ್ಧಾರ್ಥ ಗ್ರಂಥಮಾಲೆ, ಮೈಸೂರು.
ಅಂಬೇಡ್ಕರ್ ಬಿ.ಆರ್., (2015), ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
Downloads
Published
How to Cite
Issue
Section
License
Copyright (c) 2025 AKSHARASURYA

This work is licensed under a Creative Commons Attribution 4.0 International License.