ಜೋಕುಮಾರ ಸ್ವಾಮಿ: ಹೆಣ್ಣುತನದ ಸಾರ್ಥಕತೆಯ ನೀರಿಕ್ಷೆಯಲ್ಲಿ

Authors

  • ಶಿವಾನಂದ ಹಂಚಿನಾಳ ಸಹ ಪ್ರಾಧ್ಯಪಕರು, ಕನ್ನಡ ವಿಭಾಗ, ನ್ಯೂ ಹೊರೈಜನ್ ಕಾಲೇಜು, ಕಸ್ತೂರಿನಗರ, ಬೆಂಗಳೂರು.

Keywords:

ಹೆಣ್ಣುತನ, ಸಂವೇದನೆ, ಸ್ತ್ರೀ ಶೋಷಣೆ, ಜೋಕುಮಾರಸ್ವಾಮಿ, ಲೈಂಗಿಕತೆ

Abstract

ಚಂದ್ರಶೇಖರ ಕಂಬಾರರು ನವ್ಯ ಸಾಹಿತ್ಯ ಸಂದರ್ಭದಲ್ಲಿ ಒಬ್ಬ ಮುಖ್ಯ ಕವಿಯಾಗಿ, ನಾಟಕಕಾರರಾಗಿ ಒಟ್ಟಿನಲ್ಲಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡವರು. ಕನ್ನಡಕ್ಕೆ 8ನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಮೆ ಇವರದು. ಸಿರಿಸಂಪಿಗೆ ನಾಟಕಕ್ಕೆ 1990ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಇವರು ಕರಿಮಾಯಿ, ಜಿಕೆ ಮಾಸ್ತರ್ ಅವರ ಪ್ರಣಯ ಪ್ರಸಂಗ, ಸಿಂಗಾರವ ಮತ್ತು ಅರಮನೆ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ಚಾಳೇಶ್, ನಾಯಿಕತೆ, ಕಾಡು ಕುದುರೆ ಇದು ಚಲನಚಿತ್ರವಾಗಿ ಪ್ರಸಿದ್ಧಿ ಪಡೆದಿದೆ. ಜೋಕುಮಾರಸ್ವಾಮಿ ಇದು ಕಂಬಾರರ ಸಾಂಸ್ಕೃತಿಕ ಮುಖಮುಖಿಯಾಗಿಸುವ ಈ ಮಣ್ಣಿನ ಸೊಗಡನ್ನು ಚರ್ಚಿಸುವ ಮಹತ್ವದ ಕೃತಿಯಾಗಿದೆ. ಹೆಣ್ಣಿನ ಸಾರ್ಥಕತೆ ಅವಳ ಲೈಂಗಿಕ ಆಸೆ ಆಕಾಂಕ್ಷೆಗಳು ಈಡೇರಿಸುವಲ್ಲಿ ಸಾಂಪ್ರದಾಯಿಕ ಚೌಕಟ್ಟಿನ ಬಂಧಿಯಾಗುವುದು. ಪ್ರಾಕೃತಿಕವಾಗಿ ಸಾಂಪ್ರದಾಯಿಕ ಚೌಕಟ್ಟನ್ನು ದಾಟುವ ಪ್ರಕ್ರಿಯೆಯಲ್ಲಿ ಸಾಂಸ್ಕೃತಿಕ ಸಂವರ್ಷವನ್ನು ಕಾಣಬಹುದಾಗಿದೆ. ಕಂಬಾರರು ಪೌರಾಣಿಕ ಹಿನ್ನೆಲುಳ್ಳ ಜೋಕಮುನಿಯ ಮಗನೇ ಜೋಕುಮಾರಸ್ವಾಮಿಯ ಕತೆಯ ಆಶಯ ಈ ನಾಟಕದಲ್ಲಿ ಎದ್ದು ಕಾಣುತ್ತದೆ. ಉತ್ತರ ಕರ್ನಾಟಕದಲ್ಲಿ ವಿಶಿಷ್ಟ ಆಚರಣೆಯಲ್ಲಿರುವ ಈ ಪೌರಾಣಿಕ ಕಥೆಯು ವಿಶಿಷ್ಟತೆದಿಂದ ಕೂಡಿದೆ. ಏಳು ದಿನಗಳಲ್ಲಿ ಅವನ ಜನನ ಬಾಲ್ಯ ಯೌವನ ಸಾವು ಎಲ್ಲವೂ ಮುಗಿಯುತ್ತದೆ ಎನ್ನುವುದು ನಂಬಿಕೆ. ಇದರ ಆಚರಣೆಯನ್ನು ಜೋಕುಮಾರನ ಹಬ್ಬದಲ್ಲಿ ಕಾಣಬಹುದು. ಜೋಕುಮಾರ ಒಬ್ಬ ದೇವತೆಯ ಮಗ ಮಾರಿಯ ಮಗ ಅವನು ಅಲ್ಪಾಯುಷ್ಯವಾಗಿ ಏಳು ದಿನಗಳಲ್ಲಿ ಮೆರೆದು ಪುಂಡಾಡಿಕೆ ಮಾಡಿ ತೀರಿಹೋದವನು ಎಂದು ಹೇಳುತ್ತಾರೆ. ಅವನ ತಾಯಿಯು ದೇವತಸ್ತ್ರೀ ಆಗಿದ್ದರೂ ಅವನನ್ನು ಕಾಪಾಡದೆ ಹೋದಳೆಂದು ಪ್ರತೀತಿ. ಕ್ಷುದ್ರ ದೇವತೆಗಳಲ್ಲಿ ಜೋಕುಮಾರಸ್ವಾಮಿ ಒಬ್ಬ. ಇಂತಹ ಕಥೆಯನ್ನು ಕಂಬಾರರು ಸಮಕಾಲಿನ ಜೀವನಕ್ಕೆ ಹೆಣ್ಣು ಮತ್ತು ಭೂಮಿ ಮುಖಮುಖಿಯಾಗಿಸುವ ಸಾಮಾಜಿಕ ನ್ಯಾಯ ಪಥದಲ್ಲಿ ಮುನ್ನಡಿಸುವ ಧೋರಣೆಯ ಮಹತ್ವದ ಸ೦ಗತಿಯಾಗಿದೆ. ಕಂಬಾರರ `ಜೋಕುಮಾರ ಸ್ವಾಮಿʼ ನಾಟಕವನ್ನು; ಸಮಕಾಲೀನ ವಸ್ತುವಾದ ಉಳುವವನೇ ನೆಲದ ಒಡೆಯ ಎಂಬ ವಸ್ತುವನ್ನು ತೆಗೆದುಕೊಂಡು ಅದನ್ನು ಲೈಂಗಿಕ ಫಲವಂತಿಕೆಯೊಂದಿಗೆ ಹೊಂದಿಸಿ ಕಟ್ಟಲಾಗಿದೆ.

References

ಚಂದ್ರಶೇಖರ ಕಂಬಾರ, (2009), ಜೋಕುಮಾರಸ್ವಾಮಿ, ಅಂಕಿತ ಪುಸ್ತಕ, ಬೆಂಗಳೂರು.

ನಾಗಭೂಷಣ ಸ್ವಾಮಿ ಓ.ಎಲ್., (1998), ವಿರ್ಶೆಯ ಪರಿಭಾಷೆ, ಅಭಿನವ ಪ್ರಕಾಶನ, ಬೆಂಗಳೂರು.

ಚಂದ್ರಶೇಖರ ಕಂಬಾರ, (2018), ಚಂದ್ರಶೇಖರ ಕಂಬಾರರ ಸಮಗ್ರ ಸಾಹಿತ್ಯ, ಸಪ್ನ ಬುಕ್‌ ಹೌಸ್‌, ಬೆಂಗಳೂರು.

Downloads

Published

02.02.2025

How to Cite

ಶಿವಾನಂದ ಹಂಚಿನಾಳ. (2025). ಜೋಕುಮಾರ ಸ್ವಾಮಿ: ಹೆಣ್ಣುತನದ ಸಾರ್ಥಕತೆಯ ನೀರಿಕ್ಷೆಯಲ್ಲಿ. ಅಕ್ಷರಸೂರ್ಯ (AKSHARASURYA), 5(06), 105 to 109. Retrieved from https://aksharasurya.com/index.php/latest/article/view/597

Issue

Section

ಪುಸ್ತಕ ವಿಮರ್ಶೆ. | BOOK REVIEW.