ಕುವೆಂಪುರವರ ಜಲಗಾರ ನಾಟಕ
Keywords:
ಕಾಯಕ, ಜಾತಿ, ಬಡತನ, ಮೌಢ್ಯತೆ, ಆಧುನಿಕತೆ, ದೇವರು, ರೈತ, ಉಳ್ಳವರು, ಸಮಾಜ, ಶೋಷಣೆ, ಶ್ರಮಿಕವರ್ಗAbstract
ರಾಷ್ಟ್ರಕವಿ ಕುವೆಂಪುರವರು ಕನ್ನಡದ ಮೇರು ಕವಿ, ಅಗ್ರಮಾನ್ಯ ಕವಿ, ಕಾದಂಬರಿಕಾರ, ವಿಮರ್ಶಕ, ಉತ್ತಮ ಚಿಂತಕರೂ ಆಗಿದ್ದರು. ಇವರು ಅನೇಕ ನಾಟಕಗಳನ್ನು ಬರೆದಿದ್ದಾರೆ. 20ನೇಯ ಶತಮಾನದ ಶ್ರೇಷ್ಠಕವಿ, ವರಕವಿ ಬೇಂದ್ರೆಯವರಿಂದ “ಯುಗದಕವಿ ಜಗದಕವಿ” ಎನಿಸಿಕೊಂಡವರು. ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದವರು ಕುವೆಂಪುರವರು.
ಜಲಗಾರ ನಾಟಕ ಆರಂಭಗೊಳ್ಳುವುದು ಆಗಷ್ಟೇ ಸೂರ್ಯ ಮೂಡುವ ಹೊತ್ತಿನಲ್ಲಿ ಇನ್ನೂ ರಂಗದ ಮೇಲೆಲ್ಲಾ ಮಬ್ಬು ಮಬ್ಬು ಕತ್ತಲು, “ಮೂಡಿ ಬಾ, ಮೂಡಿ ಬಾ, ಜಗದ ಕಣ್ಣೆ ಬಾ, ಬಾ” ಎಂದು ಬೆಳಗನ್ನು ಸ್ವಾಗತಿಸುವ ಹಾಡಿನ ಮೂಲಕ ನಾಟಕ ಆರಂಭಗೊಳ್ಳುತ್ತದೆ. ಜಲಗಾರ ನಾಟಕದಲ್ಲಿ ಇರುವುದು ಎರಡು ದೃಶ್ಯಗಳು. ಮೊದಲನೆಯದು “ದೇವಸ್ಥಾನಕ್ಕೆ ಜನರು ಹೋಗುತ್ತಿರುವುದು” ಎರಡನೆಯದು “ದೇವಸ್ಥಾನದಿಂದ ಹಿಂತಿರುಗುತ್ತಿರುವುದು”. ಜಲಗಾರ ಕಸಗುಡಿಸುವ ಕಾಯಕದಲ್ಲಿರುತ್ತಾನೆ. ಜನರು ಜಾತ್ರೆ, ಉತ್ಸವ ಎಂದೆಲ್ಲಾ ದೇವಸ್ಥಾನಕ್ಕೆ ಹೊರಟಿದ್ದಾರೆ. ಇಲ್ಲಿ ದೇವಸ್ಥಾನ ಉಳ್ಳವರ ಪಾಲಿಗೆ ಇರುವಂತದ್ದು, ಇಲ್ಲದವರ ಪಾಲಿಗೆ ದೇವರು ಅವರ ನಿತ್ಯದ ಕಾಯಕದಲ್ಲಿ ಕಾಣಬೇಕಾದ ಸತ್ಯ.
ಹೀಗೆ ಕುವೆಂಪುರವರು ಬರೆದ ಅನೇಕ ನಾಟಕಗಳಲ್ಲಿ “ಜಲಗಾರ” ನಾಟಕವು ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದಿದೆ. ಈ ನಾಟಕ ರಂಗಪ್ರದರ್ಶನವನ್ನು ಕಂಡಿದ್ದೇ ಅಲ್ಲದೆ ಅನೇಕ ಬಾರಿ ಚರ್ಚೆಗೆ, ಜಿಜ್ಞಾಸೆಗೆ ಒಳಗಾಗಿ ಓದುಗರಲ್ಲಿ ನಮ್ಮ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಕಾಯಕದ ಮಹತ್ವವನ್ನು ಸಾರಿದೆ.
References
ಶಿವಾರೆಡ್ಡಿ ಕೆ.ಸಿ. (ಸಂ), (2004), ಕುವೆಂಪು ಸಮಗ್ರ ನಾಟಕ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ರವಿಶಂಕರ ಎ.ಕೆ. & ಅನಿತ ಕೆ.ವಿ. (ಸಂ), (2019), ಬೇರು ತೇರು, ಸಾಧನ ಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರು.
ಸುಜಾತ ಲಕ್ಷ್ಮೀಪುರ, (2021), ವಿಚಾರವಾದಿ ಕುವೆಂಪು, ಸಿವಿಜಿ ಪಬ್ಲಿಕೇಷನ್ಸ್, ಬೆಂಗಳೂರು.
ಚಕ್ಕರೆ ಶಿವಶಂಕರ್ (ಸಂ), (2004), ಸಹ್ಯಾದ್ರಿಯ ಸೂರ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಶಿವರುದ್ರಪ್ಪ ಜಿ.ಎಸ್. (ಸಂ), (2003), ಶ್ರೀ ಕುವೆಂಪು, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.
Downloads
Published
How to Cite
Issue
Section
License
Copyright (c) 2025 AKSHARASURYA

This work is licensed under a Creative Commons Attribution 4.0 International License.