ಮಾತೃ ಭಾಷಾ ಮಾಧ್ಯಮವೇ ಅರಿವಿನ ಮೂಲ ಬೇರು
Keywords:
ರಾಷ್ಟ್ರೀಯ ಶಿಕ್ಷಣ ನೀತಿ, ಪ್ರಾದೇಶಿಕ ಭಾಷೆಗಳು, ವಿಶ್ವವಿದ್ಯಾನಿಲಯ, ರಾಷ್ಟ್ರ ಭಾಷೆ, ಕುಲಪತಿAbstract
ಇತ್ತೀಚೆಗೆ ಬಹು ಚರ್ಚೆಯಾಗುತ್ತಿರುವ ವಿಷಯವೆಂದರೆ ಭಾಷೆ ಮತ್ತು ಮಾಧ್ಯಮ ಕುರಿತದ್ದು. ಭಾಷೆ ಬೌದ್ಧಿಕ ಸಾಧನೆಗೆ ಒಂದು ಅಡಿಗಲ್ಲು. ಹಾಗೆಂದ ಮಾತ್ರಕ್ಕೆ ಇಂತದ್ದೇ ಭಾಷೆ ಅದಕ್ಕೆ ಸಾಧನವೆಂದನ್ನು ಒಪ್ಪಲಾಗದು. ಜಾಗತಿಕ ಭಾಷೆ ಎಂದು ಗುರುತಾಗಿರುವ ಇಂಗ್ಲಿಷ್ ಭಾಷೆ ಹುಟ್ಟುವ ಮೊದಲೇ ಜಗತ್ತನ್ನು ಬಹು ಭಾಷೆಗಳು ಆಳಿವೆ. ಸಾಂಸ್ಕೃತಿಕ ರಾಯಭಾರಿಗಳಾಗಿಯೂ ಮೆರೆದಿವೆ. ನಾಗರೀಕತೆಯ ಕಟ್ಟುವಿಕೆಯಲ್ಲಿ ಭಾಷೆಯ ಮಹತ್ತು ದೊಡ್ಡದು. ಅದನ್ನು ಗ್ರೀಕ್, ಲ್ಯಾಟಿನ್, ಹೀಬ್ರೂ, ಸಂಸ್ಕೃತ ಮೊದಲಾದ ಭಾಷೆಗಳು ಮಂಚೂಣಿಯಲ್ಲಿನಿಂತು ನಡೆಸಿವೆ. ಹಾಗಾಗಿ ಭಾಷೆ ಒಂದು ಅರಿವಿನ ಸಾದನವೇ ಹೊರತು ಇಂತದ್ದೇ ಭಾಷೆ ಅರಿವಿಗೆ ಮೂಲಾಧಾರ ಎಂದು ಹೇರುವುದು ತಪ್ಪಾಗುತ್ತದೆ. ಮಾಧ್ಯಮ ಆ ನಿಟ್ಟಿನಲ್ಲಿ ಒಂದು ಉಪಕ್ರಮವಷ್ಟೇ. ಸಮಕಾಲೀನ ಜಾಗತಿಕ ಶ್ರೇಷ್ಠ ಭಾಷಾ ವಿಜ್ಞಾನಿಯಾದ ನೋಮ್ ಚೋಮಸ್ಕಿ “ಭಾಷೆಯ ಕಲಿಕೆ ತಾಯಿಯ ಗರ್ಭದಿಂದಲೇ ಪ್ರಾರಂಭವಾಗುತ್ತದೆ” ಎನ್ನುತ್ತಾರೆ. ಅದು ಆಯಾ ಪರಿಸರಕ್ಕೆ ತಕ್ಕಂತೆ ತೆರೆದುಕೊಂಡು ಪ್ರೌಢಿಮೆ ಮೆರೆಯುತ್ತದೆ. ಆಮೂಲಕ ಬೌದ್ಧಿಕ ಶಕ್ತಿ ವೃದ್ಧಿಯಾಗುತ್ತದೆ. ಇದು ಪ್ರತಿಯೊಂದು ಭಾಷೆಗೂ ಅನ್ವಯವಾಗುವ ಸರ್ವತ್ರಿಕ ನಿಯಮ. ಆದ್ದರಿಂದ ಯಾವುದೇ ಭಾಷೆಯಲ್ಲಿ ಪರಿಣತಿ ಪಡೆದ ವ್ಯಕ್ತಿ ತನ್ನ ಜ್ಞಾನ ವಿಸ್ತಾರತೆಯನ್ನು ಹೆಚ್ಚಿಸಿಕೊಂಡು ವ್ಯವಹಾರಿಕವಾಗಿ ತತ್ಕಾಲೀನ ಭಾಷೆಯನ್ನು ಬಳಸತೊಡಗಿದಾಗ ಪ್ರಾದೇಶಿಕ ಮತ್ತು ದೇಶಿಯ ಹಾಗೂ ಜಾಗತಿಕ ಭಾಷೆಗಳೆಲ್ಲವನ್ನು ಸಮನಾಗಿ ನೋಡುವ ಭಾವನೆ ಮೂಡುವುದು. ಬದಲಾಗಿ ಈ ಭಾಷೆಯನ್ನೇ ಓದಬೇಕೆಂದು ಹೇರಿಕೆಗೆ ಹೊರಟರೆ ಭಾಷಾ ವೈಷ್ಯಮ್ಯ ಮೂಡುವುದು. ಇದು ಅಳಿಯಬೇಕೆಂದರೆ ಭಾಷೆಯನ್ನು ಸಹ-ಸಂಬಂಧದ ನೆಲೆಯಲ್ಲಿಯೇ ಮಾಧ್ಯಮವನ್ನಾಗಿ ಪರಿಗಣಿಸಬೇಕು. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಶಿಕ್ಷಣದ ನೀತಿ ಜಾರಿಯಾದಾಗಲೂ ಸರ್ಕಾರವು ಭಾಷೆಯ ಕುರಿತ ಬಲವಂತ ಹೇರಿಕೆಗೆ ಮುಂದಾದಾಗಲೂ ಏಳುವ ಪ್ರಶ್ನೆ ಭಾಷೆ ಮತ್ತು ಮಾಧ್ಯಮದ ನಡುವಿನ ದ್ವಂದ್ವ ನಿಲುವು. ಇದು ಆಯಾ ಭಾಷಾ ಪ್ರೇಮಿಗಳ ನಡುವೆ ನಡೆಯುವ ಒಂದು ಚರ್ಚೆಯೆ ಹೊರತು ಸಮಸ್ಯೆಗೆ ಪರಿಹಾರವಲ್ಲ. ಅದ್ದರಿಂದ ಅರಿವಿಗೆ ಭಾಷೆ ಸಾಧನವೇ ಹೊರತು ಮಾಧ್ಯಮವಲ್ಲ ಹಾಗಾಗಿ ಜಗತ್ತಿನ ದರ್ಶನಿಕರಾದಿಯಾಗಿ ಈ ವರೆಗಿನ ಎಲ್ಲಾ ಶಿಕ್ಷಣ ಕುರಿತ ನೀತಿಗಳು ಕೂಡ ಆಯಾ ಪ್ರಾದೇಶಿಕ ಭಾಷೆಗೆ ಮನ್ನಣೆ ಕೊಟ್ಟಿವೆ ಎಂಬುದನ್ನು ಸಂಶೋಧನಾತ್ಮಕವಾಗಿ ನಿರೂಪಿಸುವುದು ಈ ಲೇಖನದ ಮುಖ್ಯ ಆಶಯ.
References
ಲೋಕೇಶ ಆರ್., (2020), ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ, ಮಣಿ ಪ್ರಕಾಶನ, ಮೈಸೂರು.
ಭರತ್ ಭೂಷಣ್ ಬಿ., (2007), ಶಿಕ್ಷಣದಲ್ಲಿ ಪ್ರಕ್ರಿಯೆಗಳು ಹಾಗೂ ವಿಚಾರಗಳು, ನವನಿಧಿ ಪ್ರಕಾಶನ, ಹರಿಹರ.
ಕುಮಾರ್ ಟಿ.ಎಂ., (2004), ಪ್ರಾಥಮಿಕ ಶಿಕ್ಷಣದಲ್ಲಿ ಒಂದು ಚರ್ಚೆ, ಶ್ರೀ ದೇವಿ ಪ್ರಕಾಶನ, ಬೆಂಗಳೂರು.
ಗೋವಿಂದರಾವ್ ಎ.ವಿ., (2006), ಸೆಕೆಂಡರಿ ಶಿಕ್ಷಣ ಮತ್ತು ಶಿಕ್ಷಕನ ಕಾರ್ಯಗಳು, ಚೇತನ ಬುಕ್ ಹೌಸ್, ಮೈಸೂರು.
ಸುರೇಶ್ ಪಿ.ಎಸ್. ಮತ್ತುರಾವ್ ಟಿ.ಪಿ.ಎಸ್., (2007), ರಾಷ್ಟ್ರೀಯ ಕಾಳಜಿ ಮತ್ತು ಶಿಕ್ಷಣ, ಚಿತ್ತಾರ ಪ್ರಕಾಶನ, ಮೈಸೂರು.
ಅನುಸೂಯ ವಿ. ಪರಗಿ, (1990), ಮಾತೃಭಾಷೆ ತತ್ತ್ವ ಮತ್ತು ಬೋಧನಾ ಮಾರ್ಗ, ಅನುಸೂಯ ಪ್ರಕಾಶನ, ಮಧುಗಿರಿ.
Downloads
Published
How to Cite
Issue
Section
License
Copyright (c) 2025 AKSHARASURYA

This work is licensed under a Creative Commons Attribution 4.0 International License.