ಮಂಟೇಸ್ವಾಮಿ ಕಾವ್ಯದಲ್ಲಿ ಶಾಕ್ತ-ಶೈವಗಳ ಸಂಘರ್ಷ

Authors

  • ಮಾರುತಿ ಮಂಜಪ್ಪ ಚಲವಾದಿ ಸ್ನಾತಕೋತ್ತರ ವಿದ್ಯಾರ್ಥಿ, ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ.

Keywords:

ಮಂಟೇಸ್ವಾಮಿ, ಸಿದ್ಧಪ್ಪಾಜಿ, ಆದಿಶಕ್ತಿ, ಕುಲುಮೆ ಕಾಳಮ್ಮ, ಮೂಡುಮಾರಿ, ತೆಂಕುಮಾರಿ, ಪಡುವಕಾಳಿ, ಗಂಡಾಳ್ವಿಕೆ, ಮುಟ್ಟು-ತಟ್ಟು

Abstract

ಶ್ರಮಣ ಧಾರೆಯು ಈ ನೆಲದ ಅತಿಪುರಾತನವಾದ ವಿಚಾರಧಾರೆ. ಸರ್ವ-ಸಾಮರಸ್ಯಮಯಿಯಾದ ಈ ಧಾರೆ ನಾಡಿನುದ್ದಗಲಕ್ಕೂ ವಿಸ್ತರಿಸಿತ್ತು. ಕಾಲ-ಪಲ್ಲಟದಿಂದಾಗಿ ಬಹುತ್ವವನ್ನು ಕೊಲ್ಲುವ ಏಕತ್ವದ ವಲಸೆ ಧಾರೆ ಇಲ್ಲಿನ ಸಮತೆಯೊಳಗೆ ಅಸಮತೆಯ ವಿಷಬೀಜ ಬಿತ್ತಿ ತನ್ನ ಕಾರ್ಯವನ್ನು ಸಾಧು ಮಾಡಿಕೊಂಡಿತು. ಈ ವಿಷಬೀಜ ಮುಂದೆ ಗಿಡವಾಗಿ, ಮರವಾಗಿ ಎಲ್ಲೆಡೆಯು ಹಬ್ಬಿ ವಿಷಲೀನವಾಗುವ ಹೊತ್ತಿನಲ್ಲಿ ವಿಷಕಂಠರಾಗಿ ಬುದ್ಧ, ನಾಗಾರ್ಜುನ, ಸರಹಪಾದ, ಚಾರ್ವಾಕ, ಮುಂದೆ ಕನ್ನಡ ನಾಡಿನಲ್ಲಿ ಇದಕ್ಕೆ ವಚನ ಚಳವಳಿ ಕೈಜೋಡಿಸಿ ಬುಡ ಸಮೇತ ಕಿತ್ತೊಗೆಯುವ ಕಾರ್ಯ ಕೈಗೊಂಡರು. ವಿಷಪ್ರೇರಿತ ವೈದಿಕ ಚಿಂತನೆಯನ್ನು ಬಗ್ಗುಬಡಿಯಲು ಮಧ್ಯಕಾಲೀನ ಸಂದರ್ಭದಲ್ಲಿ ಅನೇಕ ತಾಂತ್ರಿಕರು ಬೀದಿಗಿಳಿದರು. ಅಂತಹ ಮಹತ್ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದವನು ಮಂಟೇಸ್ವಾಮಿ. ಅವೈದಿಕದೊಳಗುದಿಸುತ್ತಿದ್ದ ವೈದಿಕವನ್ನು ಪ್ರಖರವಾಗಿ ಭಂಜಿಸಿದವನು. ಅವನ ಕ್ರಾಂತಿಗಳೆ ಜನಪದರ ಕೊರಳೊಳಗೆ ಹಾಡಾಗಿ, ಕತೆಯಾಗಿ ರೂಪಿತಗೊಂಡು ಇಂದು ಮಂಟೇಸ್ವಾಮಿಕಾವ್ಯವೆಂದು ಮಹಾಕಾವ್ಯದ ಸ್ಥಾನವನ್ನಲಂಕರಿಸಿವೆ. ತಾಂತ್ರಿಕ ಪಂಥದೊಳಗೆ ಇದ್ದ ಅನೇಕ ಸಂಘರ್ಷಗಳನ್ನು ಮಂಟೇಸ್ವಾಮಿಕಾವ್ಯ ತೆರೆದಿಟ್ಟಿದೆ. ಅಂತಹ ಬಹುಮುಖ್ಯ ಸಂಘರ್ಷಗಳಲ್ಲೊಂದು ಶಾಕ್ತ-ಶೈವದ ಸಂಘರ್ಷ.

References

ವೆಂಕಟೇಶ ಇಂದ್ವಾಡಿ (ಸಂ), (2004), ಮಂಟೇಸ್ವಾಮಿ ಕಾವ್ಯ ಸಾಂಸ್ಕೃತಿಕ ಮುಖಾಮುಖಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ರಾಮಚಂದ್ರನ್ ಸಿ.ಎನ್., (2007), ಹೊಸ ಮಡಿಯ ಮೇಲೆ ಚದುರಂಗ, ಸಪ್ನ ಬುಕ್‌ಹೌಸ್, ಬೆಂಗಳೂರು.

ನಿಂಗಪ್ಪ ಮುದೆನೂರು, (2004), ಕನ್ನಡ ಜನಪದ ಮಹಾ ಕಾವ್ಯಗಳ ಸಾಂಸ್ಕೃತಿಕ ವೀರರು, ಸಿವಿಜಿ ಪಬ್ಲಿಕೇಷನ್ಸ್, ಬೆಂಗಳೂರು.

ಶಂಕರನಾರಾಯಣ ತೀ.ನಂ. (ಸಂ), (1998), ಕರ್ನಾಟಕ ಜನಪದ ಮಹಾಕಾವ್ಯಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು.

ಅಂಬಳಿಕೆ ಹಿರಿಯಣ್ಣ, (1998), ಜನಪದಮಹಾಕಾವ್ಯಗಳು, ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ನಾಗರಾಜ್ ಡಿ.ಆರ್., (2014), ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ, ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ.

ಮುತ್ತಯ್ಯ ಎಸ್. ಎಂ., (2023), ಜಾನಪದ ಸಂವೇದನೆ, ಜನಸ್ಪಂದನ ಟ್ರಸ್ಟ್, ಶಿಕಾರಿಪುರ.

ಸುರೇಶ್ ನಾಗಲಮಡಿಕೆ, (2020), ಹಾಡು ಕಲಿಸಿದ ಹರ, ದೀಪಂಕರ ಪುಸ್ತಕ, ತುಮಕೂರು.

ಡೊಮಿನಿಕ್ ಡಿ. ಮತ್ತುರಾಜು ಬಿ.ಎಲ್., (2017), ದಲಿತ ನೋಟ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಬೋರಲಿಂಗಯ್ಯ ಹಿ.ಚೀ., (2018), ಕರ್ನಾಟಕ ಕನ್ನಡ ಜನಪದ ಮಹಾಕಾವ್ಯ ಮೀಮಾಂಸೆ ಮತ್ತು ತಾತ್ವಿಕತೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ರಂಗನಾಥ ಕಂಟನಕುಂಟೆ, (2016), ಓದಿನ ಜಾಡು, ಲಡಾಯಿ ಪ್ರಕಾಶನ ಗದಗ.

ರಂಗರಾಜ ವನದುರ್ಗ (ಸಂ), (2007), ಜನಪದ ಸಾಂಸ್ಕೃತಿಕ ವೀರರು, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ.

Downloads

Published

02.02.2025

How to Cite

ಮಾರುತಿ ಮಂಜಪ್ಪ ಚಲವಾದಿ. (2025). ಮಂಟೇಸ್ವಾಮಿ ಕಾವ್ಯದಲ್ಲಿ ಶಾಕ್ತ-ಶೈವಗಳ ಸಂಘರ್ಷ. ಅಕ್ಷರಸೂರ್ಯ (AKSHARASURYA), 5(06), 41 to 52. Retrieved from https://aksharasurya.com/index.php/latest/article/view/592

Issue

Section

ಸಂಶೋಧನಾ ಲೇಖನಗಳು. | RESEARCH ARTICLE.