ಸಾಹಿತ್ಯ ಸಮ್ಮೇಳನಗಳ ಪರಿಕಲ್ಪನೆ ಬದಲಾಗಬೇಕೆ?
Keywords:
ಮಹಿಳೆ, ಬಹುಭಾಷಾಸಂಸ್ಕೃತಿ, ನಾಡು-ನುಡಿ, ಸಂಸ್ಕೃತಿ, ವರದಿಗಳು, ನಿರ್ಣಯಗಳು, ಪರಿಕಲ್ಪನೆAbstract
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ನಾಡಿನ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಕರ್ನಾಟಕ, ಕನ್ನಡ, ಕನ್ನಡಿಗ ಇನ್ನಿತರ ನೆಲೆಗಳಲ್ಲಿ ಪ್ರೇರಕಶಕ್ತಿಯಾಗಿ ದುಡಿಯುತ್ತಿದೆ. ನಾಡು ನುಡಿ ಚಿಂತನೆಗಳೊಂದಿಗೆ ಕನ್ನಡಿಗರನ್ನು ಒಂದು ಗೂಡಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ, ಸಾರ್ಥಕವಾದ ತನ್ನ ಅಸ್ತಿತ್ವವನ್ನು ಮೆರೆಸುತ್ತಾ ಬಂದಿದೆ. ಅಂದಿನ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಸರ್.ಎಂ. ವಿಶ್ವೇಶ್ವರಯ್ಯನವರ ಶ್ರಮದ ಫಲವಾಗಿ ಪರಿಷತ್ತು ಸ್ಥಾಪನೆಗೊಂಡಿತು. ಅನಂತರದಲ್ಲಿ ಮಿರ್ಜಾ ಇಸ್ಮಾಯಿಲ್ ಅವರ ನೆರವಿನಿಂದ ಪುಷ್ಠಿ ಪಡೆಯಿತು. ಸಮ್ಮೇಳನಗಳನ್ನು ನಡೆಸಲು ಮೈಸೂರು ಸಂಸ್ಥಾನವು ಅನುದಾನ ರೂಪದಲ್ಲಿ ಹಣವನ್ನು ಕೊಡುತ್ತಿತ್ತು. ತದನಂತರ ಕರ್ನಾಟಕ ಸರ್ಕಾರವು ಅನುದಾನ ನೀಡುತ್ತಾ ಬರುತ್ತಿದೆ. ಸರ್ಕಾರ, ಸರ್ಕಾರೇತರ ಕನ್ನಡ ಸಂಘ ಸಂಸ್ಥೆಗಳು, ಕನ್ನಡ ಒಳಿತು ಉಳಿಯುವಿಕೆಗಾಗಿ, ಪರಿಷತ್ತಿನ ನೆರವಿಗೆ ಬಂದು ಸಮ್ಮೇಳನಗಳನ್ನು ನಡೆಸಲು ಅನುವು ಮಾಡಿಕೊಡಬೇಕಾಗಿದೆ. ಪರಿಷತ್ತು ಪ್ರಾರಂಭದ ದಿನಗಳಲ್ಲಿ ಒಂದು ಪ್ರಧಾನ ಸಮ್ಮೇಳನವನ್ನು ನಡೆಸುತ್ತಿತ್ತು ಕ್ರಮೇಣ ವಿಚಾರಗೋಷ್ಠಿಗಳು, ಉತ್ಸವಗಳು, ಆರಾಧನೆ, ಮರ್ಯಾದೆ, ಮುಖ್ಯವಾದ ವಾದಗಳು, ತತ್ವಗಳು ಮತ್ತು ಪ್ರಯೋಗಗಳನ್ನು ಆಯಾಕಾಲಮಾನದ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ನಾಡಿನ ಬದಲಾವಣೆಗಳಿಗೆ ಅನುಗುಣವಾಗಿ ನಡೆಸುತ್ತ ಬಂದಿದೆ. ಸಮ್ಮೇಳನಗಳಲ್ಲಿ ಪರಿಷತ್ತು ಮತ್ತು ಸರ್ಕಾರಗಳು ಕರ್ನಾಟಕ, ಕನ್ನಡಿಗ ಮತ್ತು ಕನ್ನಡ, ಶಿಕ್ಷಣ ಹಾಗೂ ಬದುಕಿನ ಇನ್ನಿತರ ಕ್ಷೇತ್ರಗಳಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಆಧುನೀಕತೆಯಲ್ಲಿಂದು ಸಾಹಿತ್ಯ ಸಮ್ಮೇಳನಗಳ ಪರಿಕಲ್ಪನೆಯು ಬದಲಾಗಬೇಕಾದ ಅನಿವಾರ್ಯತೆ ಇದೆ.
References
ಬೈರಮಂಗಲ ರಾಮೇಗೌಡ, (2011), ಬೆಂಗಳೂರು ಬಾಗಿನ, ಕ.ಸಾ.ಪ., ಬೆಂಗಳೂರು.
ಶ್ರೀನಿವಾಸಮೂರ್ತಿ ಕಾ.ವೆಂ., (2021), ಕನ್ನಡ ಚಿಂತನೆ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.
ಜಾಣಗೆರೆ ವೆಂಕಟರಾಮಯ್ಯ, (2011), ಕನ್ನಡ ಚಳವಳಿ ಇತಿಹಾಸ, ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
Downloads
Published
How to Cite
Issue
Section
License
Copyright (c) 2025 AKSHARASURYA
This work is licensed under a Creative Commons Attribution 4.0 International License.