ದೇವನೂರು ಮಹಾದೇವರ ಕಥನ ನಿರೂಪಣಾ ಶೈಲಿ ಮತ್ತು ಭಾಷಾ ವೈವಿಧ್ಯತೆ
Main Article Content
Abstract
ದೇವನೂರು ಮಹಾದೇವರ ಸಣ್ಣಕಥೆಗಳು ದಲಿತ ಲೋಕಾನುಭವ ಮತ್ತು ಹೊಸ ಅಭಿವ್ಯಕ್ತಿ ಕ್ರಮವನ್ನು ಪರಿಚಯಿಸುತ್ತವೆ. 'ಮಾರಿಕೊಂಡವರು' ಮತ್ತು 'ಡಾಂಬರು ಬಂದುದು' ಕಥೆಗಳನ್ನು ದೃಷ್ಟಾಂತವಾಗಿಟ್ಟುಕೊಂಡು, ಲೇಖಕರು ಬಳಸುವ ದೇಸಿ ಭಾಷೆ, ಆಡುಮಾತು ಮತ್ತು ಮೌನದ ಮೂಲಕ ಕಟ್ಟಿಕೊಡುವ ಅರ್ಥವಂತಿಕೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕಥೆಗಾರರು ಪಾತ್ರಗಳ ಮೂಲಕ ಶ್ರೇಣೀಕೃತ ಸಮಾಜದ ಅಸಮಾನತೆ, ಶೋಷಣೆ ಮತ್ತು ಆಧುನಿಕತೆಯ ಪ್ರವೇಶದಿಂದ ಗ್ರಾಮೀಣ ಬದುಕಿನಲ್ಲಿ ಉಂಟಾಗುವಲ್ಲೋಲಕಲ್ಲೋಲಗಳನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಭಾಷೆಯ ಬಳಕೆಯಲ್ಲಿನ ವಕ್ರತೆ, ವ್ಯಂಗ್ಯ ಮತ್ತು ಧ್ವನಿಪೂರ್ಣತೆಯು ಕಥೆಯ ವಸ್ತುವಿಗೆ ಹೊಸ ಆಯಾಮವನ್ನು ನೀಡುತ್ತದೆ. ದಲಿತ ಬಂಡಾಯ ಸಾಹಿತ್ಯದ ಹಿನ್ನೆಲೆಯಲ್ಲಿ ಈ ಕಥೆಗಳ ಭಾಷಿಕ ವೈವಿಧ್ಯತೆ ಮತ್ತು ನಿರೂಪಣಾ ತಂತ್ರಗಳು ಓದುಗರನ್ನು ಆಳವಾದ ಚಿಂತನೆಗೆ ಹಚ್ಚುತ್ತವೆ. ಆಡುನುಡಿಯ ಸೊಗಡಿನ ಮೂಲಕವೇ ಸಂಕೀರ್ಣ ಸಾಮಾಜಿಕ ಸತ್ಯಗಳನ್ನು ದೇವನೂರರು ತೆರೆದಿಡುತ್ತಾರೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ದೇವನೂರು ಮಹಾದೇವ 'ದ್ಯಾವನೂರು' ಕಥಾಸಂಕಲನ-ಮಾರಿಕೊಂಡವರು ಕಥೆ, ಕನ್ನಡ ಸಾಹಿತ್ಯ ಪರಿಷತ್ತು-ಪ್ರಕಾಶಕರು, 2015 ನೇ ವರ್ಷದ ಮುದ್ರಣ.
ದೇವನೂರು ಮಹಾದೇವ 'ದ್ಯಾವನೂರು' ಕಥಾಸಂಕಲನ- ಡಾಂಬರು ಬಂದುದು ಕಥೆ, (2015). ಪ್ರಕಾಶಕರು: ಕನ್ನಡ ಸಾಹಿತ್ಯ ಪರಿಷತ್ತು.
ಜಿ.ಎಸ್.ಶಿವರುದ್ರಪ್ಪ 'ವಿಮರ್ಶೆಯ ಪೂರ್ವ-ಪಶ್ಚಿಮ', ಸಾಹಿತ್ಯ ಭಂಡಾರ ಪ್ರಕಾಶನ, 2016.
ಓ.ಎಲ್.ನಾಗಭೂಷಣ್ - 'ವಿಮರ್ಶೆಯ ಪರಿಭಾಷೆ', ಅಭಿನವ ಪ್ರಕಾಶನ, 2019.
ಡಾ.ಕರೀಗೌಡ ಬೀಚನಹಳ್ಳಿ - 'ಶತಮಾನಗಳ ಸಣ್ಣಕಥೆಗಳ ಸಮೀಕ್ಷೆ', ಕನ್ನಡ ಸಾಹಿತ್ಯ ಆಕಾಡೆಮಿ, 2011.
ಕನ್ನಡ ಸಾಹಿತ್ಯ ಅಕಾಡೆಮಿ-"ಸಾಲುದೀಪಗಳು', ಐದನೇಯ ಮುದ್ರಣದ ವಿಸ್ತ್ರತ ಸಂಪುಟ-2016.
ಭಾಷಾ ವಿಜ್ಞಾನ ವಿಷಯ ಆಧರಿತ ಶೈಲಿಶಾಸ್ತ್ರ- ಕನ್ನಡ ಎ.ಎಂ ಪಠ್ಯ ಆಧಾರಿತ 2020ರ ಶೈಕ್ಷಣಿಕ ಸಾಲಿನ ವಿಷಯ ಸಂಗ್ರಹಣೆ (ಬೆಂಗಳೂರು ವಿಶ್ವವಿದ್ಯಾಲಯ).