ಬತ್ತಾಡ ಜನಾಂಗ-ಒಂದು ಅಧ್ಯಯನ
Keywords:
ಅಡ, ಮುನ್ನೆಲೆ, ಮಜಲು, ಗುರಿಕಾರ, ಶಿಷ್ಟ ಹಬ್ಬAbstract
ಭಾರತದ ಮೇಲೆ ಪ್ರಭುತ್ವ ಸಾಧಿಸಲು ಬಂದ ಬ್ರಿಟಿಷರು ಸಾಮಾಜಿಕ ಕೆಳಸ್ತರದಲ್ಲಿರುವ ಜನರನ್ನು ಮತ್ತು ಅವರ ಜನಜೀವನವನ್ನು ಸಂಶೋಧನ ದೃಷ್ಟಿಯಿಂದ ನೋಡಿದರೆ ವಿನಃ ಈ ಜನರನ್ನು ಮುನ್ನೆಲೆಗೆ ತರುವ ಪ್ರಯತ್ನ ಪಡಲಿಲ್ಲ. ಹಿಂದಿನಿಂದ ಬಂದ ತಾರತಮ್ಯದ ವ್ಯವಸ್ಥೆಯನ್ನು ಹಾಗೆಯೇ ಮುಂದುವರಿಸಿದರು. ಹಾಗಾಗಿ ದೇಶದ ಮಹಾನ್ ನಾಯಕರಾದ ಮಹಾತ್ಮ ಗಾಂಧೀಜಿಯವರು ಬ್ರಿಟಿಷರ ಇಂತಹ ಮನೋಧ್ಯೇಯವನ್ನು ವಿರೋಧಿಸಿದರು. ಸ್ವಾತಂತ್ರ್ಯಪೂರ್ವದಲ್ಲಿ ಇಂಗ್ಲೀಷ್ ಶಿಕ್ಷಣ ಪಡೆದವರಲ್ಲಿ ಆಧುನಿಕ ಪ್ರಜ್ಞೆ ಬೆಳೆಯುತ್ತಿದ್ದ ಕಾಲದಲ್ಲಿ ಬತ್ತಾಡ ಜನ ಸಮುದಾಯಗಳ ಜೀವನದಲ್ಲಿ ಅಂತಹ ಗಮನಾರ್ಹವಾದ ಬದಲಾವಣೆಗಳೇನೂ ಆಗಿರಲಿಲ್ಲ. ಅಂದಿನ ಮುಖ್ಯ ಬೆಳವಣಿಗೆಯೆಂದರೆ ಉದಾರವಾದ ಮಾನವೀಯತೆಯಷ್ಟೇ. ಆದರೆ ದೇಶಕ್ಕೆ ಸ್ವಾತಂತ್ರ್ಯಬಂದ ನಂತರದಲ್ಲಿ ಸಂವಿಧಾನದ ಶಾಸನಗಳಿಂದ ಸಾಮಾಜಿಕ ಚಲನೆ ಕಾಣಿಸಿಕೊಂಡಿದ್ದು ಇತ್ತೀಚೆಗೆ ಸ್ವಲ್ಪಮಟ್ಟಿಗೆ ವ್ಯಕ್ತಿ ಸ್ವಾತಂತ್ರ್ಯದೊರಕಿದೆ.
ಈ ಜಾಗತೀಕರಣ, ಆಧುನೀಕರಣ, ಕೈಗಾರೀಕರಣ ಹಾಗೂ ಮಾಹಿತಿ ಸ್ಪೋಟದಿಂದ ಬತ್ತಾಡ ಸಮಾಜವು ಮತ್ತೆ ಹೊಸ ಮಾರ್ಗದಲ್ಲಿ ಚಲಿಸಲು ಪ್ರಾರಂಭಿಸಿದೆ. ಈ ಹೊಸ ಚಲನೆಯಿಂದ ಮತ್ತೆ ಆಗಬಹುದಾದ ಬದಲಾವಣೆಗಳಿಗಿಂತ ಮುಂಚೆಯೇ ಇಂದಿನ ಸಮುದಾಯದ ಸ್ಥಿತಿ-ಗತಿಯನ್ನು ದಾಖಲಾತಿ ಮಾಡುವುದು ಅವಶ್ಯಕವಾಗಿದೆ. ಬತ್ತಾಡ ಸಮಾಜದವರು ಜಿಲ್ಲೆಯಲ್ಲಿ ತನ್ನದೇ ಆದ ಪ್ರಮುಖ ಸ್ಥಾನವನ್ನು ಹೊಂದಿದ್ದಾರೆ. ಅವರಲ್ಲಿನ ಅನೇಕ ಆಚರಣೆಗಳು ಮತ್ತು ಅವರ ಮೌಖಿಕ ಪರಂಪರೆಗಳು ಅವರ ಪ್ರಾಚೀನತೆಯನ್ನು ಸೂಚಿಸುತ್ತದೆ. ಇವರ ಮದುವೆ ಸಂಪ್ರದಾಯ, ಆಹಾರ ಪದ್ಧತಿ, ಬಾಲ್ಯ ವಿವಾಹ, ಅನಕ್ಷರತೆ, ನ್ಯಾಯ ಪಂಚಾಯಿತಿ ಮುಂತಾದವುಗಳ ನಿರ್ವಹಣಾ ವಿಧಾನಗಳು ನನ್ನಲ್ಲಿ ಕುತೂಹಲವನ್ನು ಹೆಚ್ಚಿಸಿದ್ದು ಈ ಅಧ್ಯಯನವನ್ನು ಕೈಗೊಳ್ಳಲು ಪ್ರೇರಕನಾಗಿದ್ದೇನೆ.
References
ಎಡ್ಗರ್ ಥರ್ಸ್ಟನ್ & ರಂಗಾಚಾರಿ ಕೆ. (ಮೂಲ), ಮರುಳಸಿದ್ದಪ್ಪ ಕೆ. (ಪ್ರ.ಸಂ.), ಬಂಜಗೆರೆ ಜಯಪ್ರಕಾಶ (ಸಂ), (2019), ದಕ್ಷಿಣ ಭಾರತದ ಜಾತಿ ಮತ್ತು ಬುಡಕಟ್ಟುಗಳು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು.
ಸಿಂಗ್ ಕೆ.ಎಸ್., (1999), ದಿ ಶೆಡ್ಯೂಲ್ಡ್ ಕಾಸ್ಟ್ (ಪೀಪಲ್ ಆಪ್ ಇಂಡಿಯಾ): ಸಂಪುಟ-೨, ಆಕ್ಸಪರ್ಡ್ ಯುನಿವರ್ಸಿಟಿ ಪ್ರೆಸ್, ಇಂಗ್ಲೆಂಡ್.
ಮ್ಯಾಥ್ಯೂ ಅರ್ನಾಲ್ಡ್, (1869), ಕಲ್ಚರ್ ಆಂಡ್ ಆ್ಯನಾರ್ಚಿ, ಕೇಂಬ್ರಿಜ್ ಯುನಿವರ್ಸಿಟಿ ಪ್ರೆಸ್, ಇಂಗ್ಲೆಂಡ್.
ರಾಮಚಂದ್ರನ್ ಸಿ.ಎನ್., (2000), ವಸಾಹತೋತ್ತರ ಚಿಂತನೆ, ಕರ್ನಾಟಕ ಸಾಹಿತ್ಯ ಅಕೆಡಾಮಿ, ಬೆಂಗಳೂರು.
ಪುರುಷೋತ್ತಮ ಬಿಳಿಮಲೆ, (2019), ಸುಳ್ಯ ಪರಿಸರದ ಗೌಡ ಸಮುದಾಯದ ಸಾಂಸ್ಕೃತಿಕ ಅಧ್ಯಯನ, ಆಕೃತಿ ಆಶಯ ಪಬ್ಲಿಕೇಶನ್ಸ್, ಮಂಗಳೂರು.
Downloads
Published
How to Cite
Issue
Section
License
Copyright (c) 2025 AKSHARASURYA
This work is licensed under a Creative Commons Attribution 4.0 International License.