ಸ್ತ್ರೀ ಸಂವೇದನೆಯ ಹಿನ್ನೆಲೆಯಲ್ಲಿ ʼಚಪ್ಪಲಿಗಳು ಕಥೆʼ

Main Article Content

ಅನುಷ

Abstract

ಮಹಿಳಾ ಸಬಲೀಕರಣ ಹಾಗೂ ಸ್ತ್ರೀ ಸಂವೇದನೆಯ ನೆಲೆಯಲ್ಲಿ ಡಾ. ಸಾರಾ ಅಬೂಬಕ್ಕರ್ ಅವರ ‘ಚಪ್ಪಲಿಗಳು’ ಕಥೆಯು ಪಿತೃಪ್ರಧಾನ ವ್ಯವಸ್ಥೆಯ ಕಟು ವಾಸ್ತವವನ್ನು ತೆರೆದಿಡುತ್ತದೆ. ಸಮೀರಾಳ ಪಾತ್ರದ ಮೂಲಕ, ಹೆಣ್ಣನ್ನು ಕೇವಲ ಬಳಸಿ ಬಿಸಾಡುವ ‘ಚಪ್ಪಲಿ’ಯಂತೆ ಕಾಣುವ ಪುರುಷ ಅಹಂಕಾರ ಮತ್ತು ಅದರಿಂದಾಗಿ ಆಕೆ ಅನುಭವಿಸುವ ಮಾನಸಿಕ ಖಿನ್ನತೆಯನ್ನು ಇಲ್ಲಿ ಚರ್ಚಿಸಲಾಗಿದೆ. ಇದಕ್ಕೆ ಪೂರಕವಾಗಿ ಡಾ. ವೀಣಾ ಶಾಂತೇಶ್ವರ ಅವರ ‘ತಿರುಗಿ ಹೋದವಳು’ ಕಥೆಯ ಹಮೀದಾ ಮತ್ತು ಲಕ್ಷ್ಮಿಯರ ದಾಂಪತ್ಯದ ಸಂಘರ್ಷಗಳನ್ನು ಹಾಗೂ ಸಮಕಾಲೀನ ವಾಸ್ತವ ಘಟನೆಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಲಾಗಿದೆ. ಧರ್ಮ ಮತ್ತು ಸಂಪ್ರದಾಯದ ಹೆಸರಿನಲ್ಲಿ ಹೆಣ್ಣಿನ ಶಿಕ್ಷಣ ಹಾಗೂ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಾಮಾಜಿಕ ಧೋರಣೆಯನ್ನು ಪ್ರಶ್ನಿಸುತ್ತಾ, ಸ್ತ್ರೀಯರ ಆತ್ಮಗೌರವ ಮತ್ತು ಸ್ವಾಯತ್ತತೆಯ ಅಗತ್ಯವನ್ನು ಲೇಖನವು ಪ್ರತಿಪಾದಿಸುತ್ತದೆ.

Article Details

Section

Research Articles

Author Biography

ಅನುಷ

ಕಲಾ ವಿಭಾಗ, 3ನೇ ಸೆಮಿಸ್ಟರ್‌, ವಿಜಯ ಕಾಲೇಜು, ಜಯನಗರ, ಬೆಂಗಳೂರು.

How to Cite

ಅನುಷ. (2026). ಸ್ತ್ರೀ ಸಂವೇದನೆಯ ಹಿನ್ನೆಲೆಯಲ್ಲಿ ʼಚಪ್ಪಲಿಗಳು ಕಥೆʼ. ಅಕ್ಷರಸೂರ್ಯ (AKSHARASURYA), 13(03), 118 to 126. https://aksharasurya.com/index.php/latest/article/view/569

References

ಸಾರಾ ಅಬೂಬಕ್ಕರ್, (1989), ಚಪ್ಪಲಿಗಳು, ಮಂಗಳೂರು: ಚಂದ್ರಗಿರಿ ಪ್ರಕಾಶನ.

ವೀಣಾ ಶಾಂತೇಶ್ವರ, (1984), ತಿರುಗಿ ಹೋದಳು (ಹಸಿವು ಕಥಾ ಸಂಕಲನ), ಧಾರವಾಡ: ಮನೋಹರ ಗ್ರಂಥಮಾಲಾ.

ಅರ್ಚನಾ. ಆರ್, ತ್ರಿವೇಣಿ, ಮನ ಮಂಥನ.

Most read articles by the same author(s)