ಜನ್ನನ ಯಶೋಧರೆ ಚರಿತೆಯಲ್ಲಿ ಅಮೃತಮತಿ ಮತ್ತು ಅಷ್ಟಾವಂಕನ ಪ್ರೇಮಾಂಕುರ: ಒಂದು ಅಧ್ಯಯನ

Authors

  • ಬೈರಯ್ಯ ಜಿ. ಕೆ. ಕನ್ನಡ ಅಧ್ಯಾಪಕರು, ಪಿ.ವಿ.ಪಿ. ಪ್ರಥಮ ದರ್ಜೆ ಕಾಲೇಜು, ಜ್ಞಾನ ಗಂಗಾ ನಗರ, ಮಲ್ಲತಹಳ್ಳಿ, ಬೆಂಗಳೂರು.

Keywords:

ಮಧುರ ಧ್ವನಿ, ರೂಪಾಧಮನ, ಮುದಿಕರಡಿಯ ಚರ್ಮ, ಮಾನಸಿಕ ಖಿನ್ನತೆ, ಪುರುಷತ್ವ, ಗೂನುಬೆನ್ನು

Abstract

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಜನ್ನ ಕವಿಯು ವಿಶಿಷ್ಟವಾಗಿ ಕಂಡುಬರುತ್ತಾನೆ.ಯಶೋಧರ ಚರಿತೆ ಕೃತಿಯಲ್ಲಿ ಕೃತಿಯಲ್ಲಿ ದೈಹಿಕ,ಮಾನಸಿಕ ಮತ್ತು ತಾರ್ಕಿಕ ಚಿಂತನೆಗಳು ಅಭಿವ್ಯಕ್ತಗೊಂಡಿವೆ. ಸೌಂದರ್ಯ ಮತ್ತು ಕುರೂಪತೆಯ ಅವಳಿ ವೈರುಧ್ಯಗಳು ವಿಭಿನ್ನತೆಯ ನೆಲೆಯಲ್ಲಿ ಚಿತ್ರಿತಗೊಂಡಿವೆ. ಪ್ರೀತಿಯಿಂದ ವಂಚಿತಳಾದ ರಾಣಿಯು ಸಾಮಾನ್ಯನ ಸಂಗೀತಕ್ಕೆ ಮನಸೋತು ಇಡೀ ಸರ್ವಸ್ವವನ್ನೇ ತ್ಯಾಗ ಮಾಡಿ ಅಷ್ಟವಂಕನಲ್ಲಿ ಬರುತ್ತಾಳೆ. ಆತನು ನೀಡುವ ಘೋರವಾದ ಶಿಕ್ಷೆ ಯಲ್ಲಿಯೂ ಆನಂದವನ್ನು ಪಡುತ್ತಾಳೆ.ಯಶೋಧರ ಮತ್ತು ಆತನ ಪೂರ್ವಜರು ಮಾಡಿದ ಪಾಪದ ಪ್ರತಿಫಲವಾಗಿ ಹಲವಾರು ಜನ್ಮಗಳನ್ನು ಎತ್ತಿ ಬಂದರು ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳನ್ನು ಎದುರಿಸಬೇಕಾಯಿತು. ಅಹಿಂಸ ಪಾಲಕರಾಗಿದ್ದರು ಯಾವುದೋ ರೂಪದಲ್ಲಿ ಅವರಿಗೆ ಅರಿವು ಇಲ್ಲದೆಯೇ ಹಿಂಸೆಯನ್ನು ಮಾಡುವ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಿ ಹೋಗುವಂತೆ ವಿಧಿಯಾಟವು ಅವರ ಜೀವನದಲ್ಲಿ ನಡೆಯುತ್ತದೆ, ಎಂಬುದನ್ನು ಕವಿಯು ಚಿಂತನೆ ಮಾಡಿದ್ದಾರೆ.

References

ತೆಕ್ಕುಂಜ ಗೋಪಾಲಕೃಷ್ಣ ಭಟ್ಟ. (೨೦೧೫). ಜನ್ನ ಕವಿಯ ಯಶೋಧರ ಚರಿತೆ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.

ಶಿವರುದ್ರಪ್ಪ ಜಿ. ಎಸ್. (೨೦೦೯). ಜಿ. ಎಸ್. ಶಿವರುದ್ರಪ್ಪ ಸಮಗ್ರ ಗದ್ಯ-೨. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೆಂಗಳೂರು.

ತೀ.ನಂ.ಶ್ರೀ. (೨೦೦೬). ಸಮಗ್ರ ಗದ್ಯ. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು.

ಮುಗಳಿ ರಂ. ಶ್ರೀ. (೨೦೧೨). ಕನ್ನಡ ಸಾಹಿತ್ಯ ಚರಿತ್ರೆ. ಗೀತಾ ಬುಕ್ ಹೌಸ್. ಮೈಸೂರು.

ಪುಟ್ಟಯ್ಯ ಬಿ. ಎಂ. (೨೦೧೦). ಸಂಶೋಧನೆ ತಾತ್ವಿಕ ಆಯಾಮಗಳು. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.

Downloads

Published

06.12.2024

How to Cite

ಬೈರಯ್ಯ ಜಿ. ಕೆ. (2024). ಜನ್ನನ ಯಶೋಧರೆ ಚರಿತೆಯಲ್ಲಿ ಅಮೃತಮತಿ ಮತ್ತು ಅಷ್ಟಾವಂಕನ ಪ್ರೇಮಾಂಕುರ: ಒಂದು ಅಧ್ಯಯನ. AKSHARASURYA, 5(04), 54 to 59. Retrieved from https://aksharasurya.com/index.php/latest/article/view/561

Issue

Section

ಸಂಶೋಧನಾ ಲೇಖನಗಳು. | RESEARCH ARTICLE.