ತತ್ವಪದಕಾರ ತಾಳಕೇರಿ ಬಸವರಾಜ: ಜೀವನ - ಸಾಧನೆ

Main Article Content

ಯಮನೂರಪ್ಪ ವಡಕಿ

Abstract

ಉತ್ತರ ಕರ್ನಾಟಕದ ಪ್ರಸಿದ್ಧ ತತ್ವಪದಕಾರ ಮತ್ತು ರಂಗಭೂಮಿ ಕಲಾವಿದ ತಾಳಕೇರಿ ಬಸವರಾಜ ಅವರ ಬದುಕು ಮತ್ತು ಸಾಧನೆಯನ್ನು ಇಲ್ಲಿ ಪರಿಚಯಿಸಲಾಗಿದೆ. ಬಡತನದ ಹೂಗಾರ ಮನೆತನದಲ್ಲಿ ಜನಿಸಿದ ಬಸವರಾಜರು, ಗದುಗಿನ ಪುಟ್ಟರಾಜ ಗವಾಯಿಗಳ ಶಿಷ್ಯರಾಗಿ ಸಂಗೀತ ಮತ್ತು ರಂಗಭೂಮಿಯಲ್ಲಿ ಅಪಾರ ಸಾಧನೆಗೈದರು. ಸ್ತ್ರೀ ಪಾತ್ರಗಳನ್ನು ನಿರ್ವಹಿಸುವುದರಲ್ಲಿ ಇವರು ಸಿದ್ಧಹಸ್ತರು. 'ಕಲ್ಯಾಣ ಗೀತ', 'ಗೀತಾ ಭಾರತಿ', 'ಬಸವಧ್ಯಾನ ಚಿಂತಾಮಣಿ' ಮುಂತಾದ ತತ್ವಪದ ಸಂಕಲನಗಳನ್ನು ರಚಿಸಿದ್ದಾರೆ. ಇವರ ತತ್ವಪದಗಳು ಸರಳವಾಗಿದ್ದು, ಜೀವನದ ಮೌಲ್ಯ, ಅನ್ನದ ಮಹತ್ವ ಮತ್ತು ಅಧ್ಯಾತ್ಮವನ್ನು ಬೋಧಿಸುತ್ತವೆ. ಜಾನಪದ ಮತ್ತು ರಂಗಭೂಮಿಗೆ ಅವರು ಸಲ್ಲಿಸಿದ ಸೇವೆಯನ್ನು ಈ ಬರಹ ದಾಖಲಿಸುತ್ತದೆ.

Article Details

Section

Research Articles

Author Biography

ಯಮನೂರಪ್ಪ ವಡಕಿ

ಪಿಎಚ್.ಡಿ. ಸಂಶೋಧನಾರ್ಥಿ, ಜಾನಪದ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

References

ಆಶುಕವಿ ತಾಳಕೇರಿ ಬಸವರಾಜ, 'ಕಲ್ಯಾಣ ಗೀತಾ' ವಿಜಯ ಬುಕ್ ಡಿಪೊ ಗದಗ, 1966.

ಆಶುಕವಿ ತಾಳಕೇರಿ ಬಸವರಾಜ, 'ಬಸವಧ್ಯಾನ ಚಿಂತಾಮಣಿ' ಜಗದ್ಗುರು ಶ್ರೀ ವಿಜಯ ಮಹಾಂತ ಸ್ವಾಮಿಗಳು ಕುದರಿಮೋತಿ, 1992.

ದಸ್ತಗೀರಸಾಬ್ ದಿನ್ನಿ, 'ತಾಳಕೇರಿ ಬಸವರಾಜ' ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಭವನ ಬೆಂಗಳೂರು, 2012.

ಬಸವರಾಜ ಸಬರದ 'ಕೊಪ್ಪಳ ಜಿಲ್ಲೆಯ ಅನುಭಾವಿ ಕವಿಗಳು' ಪ್ರಸಾರಾಂಗ ಗುಲ್ಬರ್ಗಾ ವಿಶ್ವವಿದ್ಯಾಲಯ ಗುಲ್ಬರ್ಗಾ, 2013.