ಕನ್ನಡದಲ್ಲಿ ಬಹುಭಾಷಂತರ ಕಥೆಗಳು
Keywords:
ಕನ್ನಡ ಕಥಾ ಸಾಹಿತ್ಯ, ಬಹು ಭಾಷಾಂತರಗಳು, ಅನುವಾದಿತ ಕಥೆ, ಅನುವಾದAbstract
ಪಾಶ್ಚಾತ್ಯರ ಪ್ರೇರಣೆಯಿಂದ ಕನ್ನಡ ಸಾಹಿತ್ಯದಲ್ಲಿ ಸ್ವತಂತ್ರವಾಗಿ ರೂಪು ಪಡೆದ ಸಣ್ಣ ಕಥೆಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ ಬಹುಜನಪ್ರಿಯತೆ ಪಡೆದ ಒಂದು ವಿಶಿಷ್ಟ ಬಗೆಯ ಸಾಹಿತ್ಯ ಪ್ರಕಾರವಾಗಿದೆ. ಹಲವಾರು ವಿಭಿನ್ನ ಕಥಾವಸ್ತು, ಆಶಯ, ತಂತ್ರಗಾರಿಕೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಭದ್ರವಾಗಿ ಬೇರೂರಿದೆ. ಕನ್ನಡ ಸಾಹಿತ್ಯದಲ್ಲಿ ಸ್ವತಂತ್ರವಾಗಿ ಬರೆದ ಕಥೆಗಳು ಎಷ್ಟು ಜನಪ್ರಿಯತೆ ಪಡೆದಿವೆಯೋ ಅಷ್ಟೇ ಜನಪ್ರಿಯತೆನ್ನು ಅನುವಾದಿತ ಕಥೆಗಳು ಕೂಡ ಪಡೆದುಕೊಂಡಿವೆ. ಕನ್ನಡಕ್ಕೆ ಕಾವ್ಯಗಳು, ಕಾದಂಬರಿಗಳು, ನಾಟಕಗಳಂತೆ ಅನುವಾದಿತ ಕಥೆಗಳು ಕೂಡ ಬಂದಿವೆ. ಅವು ಕೇವಲ ಒಂದೇ ಅನುವಾದಕ್ಕೆ ಸೀಮಿತವಾಗದೆ ತಮ್ಮ ಅನುವಾದವನ್ನು ವಿಸ್ತರಿಸಿಕೊಂಡು ಬಹುಭಾಷಾಂತರಕ್ಕೆ ತಮ್ಮನ್ನು ತೆರೆದುಕೊಂಡಿವೆ. ಬಹುಭಾಷಾಂತರ ಎಂದರೆ ಒಂದು ಕೃತಿಯು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಒಂದಕ್ಕಿಂತ ಹೆಚ್ಚಿನ ಬಾರಿ ಅನುವಾದ ವಾಗುವುದೇ ಆಗಿದೆ. ಹಲವಾರು ಕಾರಣಗಳಿಂದ ಕನ್ನಡದಲ್ಲಿ ಒಂದೇ ಕೃತಿಯು ಪ್ರಾಚೀನ ಕಾಲದಿಂದಲೂ ಒಂದಕ್ಕಿಂತ ಹೆಚ್ಚಿನ ಬಾರಿ ಅನುವಾದವಾಗಿವೆ. ಹೀಗೆ ಒಂದಕ್ಕಿಂತ ಹೆಚ್ಚಿನ ಬಾರಿ ಅನುವಾದವಾದ ಕಥೆಗಳ ಬಗ್ಗೆ ತಿಳಿದುಕೊಳ್ಳುವ ಉದ್ದೇಶವನ್ನು ಈ ಲೇಖನ ಪ್ರಸ್ತುತ ಪಡಿಸುತ್ತದೆ.
References
ಮೋಹನ ಕುಂಟಾರ್ (ಸಂ). (2015). ಅನುವಾದ ಸಾಹಿತ್ಯ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.
ಮೋಹನ ಕುಂಟಾರ್. (2014). ಕನ್ನಡ-ಮಲಯಾಳಂ ಭಾಷಾಂತರ ಪ್ರಕ್ರಿಯೆ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ಶಂಸ ಐತಾಳ. (1995). ಭಾಷಾಂತರ ಕೈಪಿಡಿ. ತಳಗವಾದಿ ಪ್ರಕಾಶನ. ಮೈಸೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.