ಕನ್ನಡ ಅನುವಾದಿತ ಓಲ್ಗಾ ಸಾಹಿತ್ಯ
Keywords:
ಸ್ತ್ರೀವಾದಿ, ತೆಲಗು ಸಾಹಿತ್ಯ, ಓಲ್ಗಾ, ಮಾರ್ಕ್ಸ್‌ವಾದ, ಅನುವಾದ ಕಥಾ ಸಾಹಿತ್ಯAbstract
ತೆಲುಗು ಸಾಹಿತ್ಯದಲ್ಲಿ ಹೆಸರುವಾಸಿಯಾದ ಸ್ತ್ರೀವಾದಿ ಚಿಂತಕಿ ಓಲ್ಗಾ ಇವರು 80ರ ದಶಕದ ತೆಲುಗು ಸಾಹಿತ್ಯದಲ್ಲಿ ‘ಓಲ್ಗಾ’ ಎಂಬ ಕಾವ್ಯನಾಮದಿಂದ ಸ್ತ್ರೀವಾದಿ ಚಿಂತಕಿ, ಮಾರ್ಕ್ಸ್‌ವಾದಿ, ರಾಜಕೀಯ ಹೋರಾಟಗಾರ್ತಿ ಎಂದು ಹೆಸರುವಾಸಿಯಾಗಿ ಗುರುತಿಸಿಕೊಂಡವರು. ಇವರ ಚಿಂತನೆಯ ಬರಹವನ್ನು ಹಲವು ಲೇಖಕರು ಕನ್ನಡ ಸಾಹಿತ್ಯಕ್ಕೆ ಪರಿಚಯಿಸಿದ್ದಾರೆ. ಓಲ್ಗಾ ಅವರ ಸಾಹಿತ್ಯವನ್ನು ಕನ್ನಡ ಅನುವಾದ ಸಂದರ್ಭದಲ್ಲಿ ಕೂಡ ಮೂಲ ಕೃತಿಯಾಗಿ ಓದಿಸಿಕೊಳ್ಳುವ ರೀತಿಯಲ್ಲಿ ಹಲವಾರು ಕೃತಿಗಳು ಕನ್ನಡಕ್ಕೆ ಬಂದಿವೆ. ಇದೆ ದೃಷ್ಟಿಕೋನದಿಂದ ಓಲ್ಗಾ ಅವರ ತೆಲುಗು ಸ್ತ್ರೀವಾದಿ ರಚನೆಯನ್ನು ಮೂಲ ಆಶಯದಂತೆ ಕನ್ನಡದ ಲೇಖಕರು ಅನುಸೃಷ್ಟಿಸಿದ್ದಾರೆ.
ಓಲ್ಗಾ ಅವರ ಸ್ತ್ರೀವಾದಿ ಚಿಂತನೆಗಳ ಕುರಿತಾಗಿ ನಡೆಸುವ ಈ ಅಧ್ಯಯನವು ಬಹುಮುಖ್ಯವಾಗುತ್ತದೆ. ಏಕೆಂದರೆ ತೆಲುಗುನಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ತೆಲುಗು ಸಾಹಿತ್ಯಕ್ಕೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಈ ಲೇಖನವು ಓದುಗರಿಗೆ ಎರಡು ಭಿನ್ನ ಕ್ಷೇತ್ರಗಳ ವಿಭಿನ್ನ ವಿಷಯಗಳನ್ನು ತಿಳಿಯಲು ಸಹಾಯಕವಾಗುತ್ತದೆ. ಹೀಗೆ ಒಂದು ಭಾಷೆಯ ಸಾಹಿತ್ಯವನ್ನು ಇನ್ನೊಂದು ಭಾಷೆಯಲ್ಲಿ ಪರಿಚಯಿಸುವುದು ಮತ್ತು ಆ ಭಾಷೆಯನ್ನು ಬೆಳೆಸುವುದು, ಆ ಸಾಹಿತ್ಯದ ಚಿಂತನೆಗಳನ್ನು, ಸಾಮ್ಯತೆಗಳನ್ನು ಸಮಾಜಕ್ಕೆ ಪರಿಚಯಿಸುವುದು ಇದರ ಉದ್ದೇಶವಾಗಿದೆ.
References
ಅಜಯ್ ವರ್ಮ ಅಲ್ಲೂರಿ (ಅನು). (2019). ವಿಮುಕ್ತೆ. ಪಲ್ಲವ ಪ್ರಕಾಶನ. ಚನ್ನಪಟ್ಟಣ.
ಮಿಸ್ ಸಂಪತ್ (ಅನು). (2009). ಉಷೋದಯ. ನವಕರ್ನಾಟಕ ಪ್ರಕಾಶನ. ಬೆಂಗಳೂರು.
ವೀರಭದ್ರಗೌಡ ಜಿ. (ಅನು). (2012). ರಾಜಕೀಯ ಕಥೆಗಳು. ಸೃಷ್ಟಿ ಪ್ರಕಾಶನ. ಬೆಂಗಳೂರು.
ವೀರಭದ್ರಗೌಡ ಜಿ. (ಅನು). (2012). ವಿಮುಕ್ತ. ಅಭಿನವ ಪ್ರಕಾಶನ. ಬೆಂಗಳೂರು.
ವೀರಭದ್ರಗೌಡ ಜಿ. (ಅನು). (2016). ಸ್ವೇಚ್ಛೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ. ಬೆಂಗಳೂರು.
ಸುಜ್ಞಾನಮೂರ್ತಿ ಬಿ. (ಅನು). (2017). ನಮಗೆ ಗೊಡೆಗಳಿಲ್ಲ. ಲಡಾಯಿ ಪ್ರಕಾಶನ. ಗದಗ.
ಸುಜ್ಞಾನಮೂರ್ತಿ ಬಿ. (ಅನು). (2018). ಕುಟುಂಬ ವ್ಯವಸ್ಥೆ ಮಾರ್ಕ್ಸ್ ವಾದ-ಸ್ತ್ರೀವಾದ. ಲಡಾಯಿ ಪ್ರಕಾಶನ. ಗದಗ.
ಸುಜ್ಞಾನಮೂರ್ತಿ ಬಿ. (ಅನು). (2018). ಸ್ತ್ರೀವಾದಿ ಅರಿವಿನ ಹಾದಿ. ಲಡಾಯಿ ಪ್ರಕಾಶನ. ಗದಗ.
ಮೋಹನ್ ಜಿ. ಎನ್. (2002). ಕನ್ನಡ ತೆಲುಗು ಭಾಷಾ ಸಾಹಿತ್ಯ ಬಾಂಧವ್ಯ. ಪ್ರಸಾರಂಗ, ಬೆಂಗಳೂರು ವಿಶ್ವವಿದ್ಯಾಲಯ. ಬೆಂಗಳೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.