ನವೋದಯ ಮಹಿಳಾ ಕಥೆಗಳಲ್ಲಿ ಸ್ತ್ರೀನಿಷ್ಟತೆ

Authors

  • ವಾಣಿ ಬಿ. ಎನ್. ಸಂಶೋಧನಾರ್ಥಿ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

Keywords:

ನವೋದಯ, ಮಹಿಳಾ ಲೇಖಕಿಯರು, ಕಥಾ ಸಾಹಿತ್ಯ, ಕುಟುಂಬ, ಮಹಿಳಾ ಶೋಷಣೆ, ಮಹಿಳಾ ಅಭಿವ್ಯಕ್ತಿ

Abstract

ನವೋದಯ ಕಾಲಘಟ್ಟದ ಪ್ರಮುಖ ಲೇಖಕಿಯರಾದ ಕೊಡಗಿನ ಗೌರಮ್ಮ, ಕಲ್ಯಾಣಮ್ಮ, ಸರಸ್ವತಿ ಬಾಯಿ ರಾಜವಾಡೆ(ಗಿರಿಬಾಲೆ), ಶ್ಯಾಮಲಾ ಬೆಳಗಾವಂಕರ ಮೊದಲಾದ ಲೇಖಕಿಯರ ಕತೆಗಳಲ್ಲಿ ವ್ಯಕ್ತವಾಗಿರುವ ಸ್ತ್ರೀಪರ ನಿಲುವುಗಳನ್ನು ಕುರಿತಿದೆ. ಗೌರಮ್ಮ ಅವರ ಪುರ್ನವಿವಾಹ ಕತೆಯ ನಾಯಕಿ ರಾಜಿಯ ಮನಸ್ಸಿನಲ್ಲಿರು ಪುರುಷ ನಡವಳಿಕೆಯ ಬಗೆಗಿನ ಅಸಹನೆ, ʼವಾಣಿಯ ಸಮಸ್ಯೆʼ ಕತೆಯಲ್ಲಿ ಇಂದುವಿಯ ನೈತಿಕ ಚೌಕಟ್ಟು, ಹೋಗಿಯೇ ಬಿಟ್ಟಿದ್ದ ಕತೆಯಲ್ಲಿನ ಅಂರ್ತಧರ್ಮೀಯ ಪ್ರೇಮದ ಕರಾಳತೆ, ಗಿರಿಬಾಲೆ ಅವರ ʼಅವಳ ಉದ್ದಾರʼ ಕತೆಯಲ್ಲಿ ಹೆಣ್ಣಿನ ಕೌಟುಂಬಿಕ ಹಾಗೂ ಸಾಮಾಜಿಕ ಶೋಷಣೆ ಪರಿ, ಕಲ್ಯಾಣಮ್ಮ ಅವರ ʼನನ್ನ ಧನವ ನನಗೆ ತಾʼ ಕತೆಯಲ್ಲಿನ ಮಾತೃ ವಾತ್ಸಲ್ಯ, ʼಒಲ್ಲದ ಹೆಂಡತಿʼ ಕತೆಯಲ್ಲಿ ಮಕ್ಕಳ್ಳನ್ನು ಬೆಳೆಸುವಲ್ಲಿ ತಾಯಿಯ ಹೊಣೆ ಎಷ್ಟು ಮುಖ್ಯವಾದದ್ದು, ಶ್ಯಾಮಲಾ ಅವರ ʼಕಂತಿಯ ದೇಶಾಂತರʼ ಕತೆಯಲ್ಲಿ ಹೆಣ್ಣಿನ ದೈರ್ಯ ಹೀಗೆ ಇವರ ಕಥಾ ಸಾಹಿತ್ಯವು ಮಹಿಳೆಯರ ಅಭಿವ್ಯಕ್ತಿಯ ನೆಲೆಗಳಾಗಿವೆ. ಸಾಮಾಜಿಕ ಸಮಸ್ಯೆಗಳ ಕುರಿತ ಚಿಂತನೆ, ಮಹಿಳಾ ಸಂವೇದನೆಯನ್ನು ಪ್ರಸ್ತುತ ಪಡಿಸುವಲ್ಲಿ ಇವರ ಕಥೆಗಳು ಮಹತ್ವದ್ದಾಗಿವೆ. ಇವರು ಅಸ್ಪೃಷ್ಯತೆ, ವಿಧವಾ ಸಮಸ್ಯೆ, ವರದಕ್ಷಿಣೆ ಕಿರುಕುಳ, ವೇಶ್ಯಾಸಮಸ್ಯೆ ಮೊದಲಾದ ಸಾಮಾಜಿಕ ಹಾಗೂ ಕೌಟುಂಬಿಕವಾದ ಸವಾಲುಗಳ ಬಗೆಗೆ ದೃತಿಗೆಡದೆ ಬರೆದಿದ್ದಾರೆ. ಪ್ರಸ್ತುತ ಲೇಖನದಲ್ಲಿ ಮೇಲಿನ ಕಥೆಗಳಲ್ಲಿ ಮೂಡಿಬಂದಿರುವ ಸ್ತ್ರೀಪರವಾದ ನಿಲುವುಗಳನ್ನ ವಿಮರ್ಶಾತ್ಮಕವಾಗಿ ಅಭಿವ್ಯಕ್ತಿಸಿದ್ದೇನೆ.

References

ಗಾಯತ್ರಿ ನಾವಡ (ಸಂ). (2018). ಹೊಸಗನ್ನಡ ಕಥಾ ವಲ್ಲರಿ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.

ವಿಜಯಶ್ರಿ ಸಬರದ (ಸಂ). (2013). ಸಣ್ಣಕಥೆ: ಆಧುನಿಕ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ. ಪ್ರಸಾರಾಂಗ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ. ವಿಜಾಪುರ.

ಕರೀಗೌಡ ಬೀಚನಹಳ್ಳಿ. (2003). ಶತಮಾನದ ಸಣ್ಣಕಥೆಗಳ ಸಮೀಕ್ಷೆ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.

ದಿವಾಕರ್ ಎಸ್.‌ (ಸಂ). (2019). ಶತಮಾನದ ಸಣ್ಣ ಕತೆಗಳು. ಪ್ರೀಸಮ್ ಬುಕ್ಸ್ ಪ್ರೈ.ಲಿ. ಬೆಂಗಳೂರು.

Downloads

Published

30.11.2024

How to Cite

ವಾಣಿ ಬಿ. ಎನ್. (2024). ನವೋದಯ ಮಹಿಳಾ ಕಥೆಗಳಲ್ಲಿ ಸ್ತ್ರೀನಿಷ್ಟತೆ. AKSHARASURYA, 5(03 Special Issue), 61 to 67. Retrieved from https://aksharasurya.com/index.php/latest/article/view/548

Issue

Section

ಸಂಶೋಧನಾ ಲೇಖನಗಳು. | RESEARCH ARTICLE.