ಕನ್ನಡ ಅನುವಾದಿತ ಆಫ್ರಿಕನ್ ಕಥಾ ಸಾಹಿತ್ಯ
Keywords:
ಆಫ್ರಿಕನ್ ಸಾಹಿತ್ಯ, ಕಥಾ ಸಾಹಿತ್ಯ, ವಸಹಾತೋತ್ತರ ಕಾಲ, ಎಂ. ಆರ್. ಕಮಲ, ಅನುವಾದAbstract
ಕಥೆಗಾರರು ಕಥೆಗಳನ್ನು ಬರೆಯುತ್ತಿದ್ದದ್ದು ಮತ್ತು ಓದುಗರು ಅವುಗಳನ್ನು ಓದುತ್ತಿದ್ದದ್ದು ಕಾಲಕಳೆಯುವ ಸಲುವಾಗಿ ಮತ್ತು ಮನೋರಂಜನೆಯ ಮುಖ್ಯ ಉದ್ದೇಶದಿಂದಾಗಿ. ಹಾಗಿದ್ದಾಗ್ಯೂ ಅತಿದೊಡ್ಡ ಸಾಹಿತ್ಯ ವಿಮರ್ಶೆಗಳು ಬಂದದ್ದೂ ಕೂಡ ಇಂತಹ ಕಥಾಸಾಹಿತ್ಯದ ಹಿನ್ನಲೆಯಲ್ಲಿಯೇ ಎಂಬುದು ಗಮನಾರ್ಹ. ಕೆಲವು ಬಾರಿ ಇಂತಹ ಸಾಹಿತ್ಯಗಳು ಸಾಮಾಜಿಕ ದೃಷ್ಟಿಕೋನವನ್ನೇ ಬದಲಾಯಿಸಿಬಿಡಬಹುದು. ಮರಾಠಿ ದಲಿತ ಆತ್ಮಕಥೆಗಳು ಇದಕ್ಕೆ ಒಳ್ಳೆಯ ಉದಾಹರಣೆಯಾಗಬಹುದು. ಆಫ್ರಿಕಾದ ಸಾಹಿತ್ಯವು ಕನ್ನಡಕ್ಕೆ ಅನುವಾದವಾಗುವಾಗ ದಲಿತ ಮತ್ತು ಬಂಡಾಯ ಸಾಹಿತ್ಯದ ಮತ್ತು ಅಂತಹ ಸಾಹಿತ್ಯಾಸಕ್ತರ ಅಗತ್ಯಗಳಿಗಾಗಿ ಬಂದವು ಎಂಬ ವಾದ ಸಾಹಿತಿಗಳಲ್ಲಿ ಮತ್ತು ವಿಮರ್ಶಕರಲ್ಲಿ ಇದೆ. ಬಹುಶಃ ಅದು ಹಾಗಿರಲಿಕ್ಕು ಸಾಕು. ಆದರೆ ಕನ್ನಡಕ್ಕೆ ಅನುವಾದಗೊಂಡ ಆಫ್ರಿಕಾ ಮೂಲದ ಎಲ್ಲಾ ಸಾಹಿತ್ಯವೂ ಈ ಅಗತ್ಯಗಳನ್ನು ಪೂರೈಸಲು ಮಾತ್ರ ಕನ್ನಡಕ್ಕೆ ಬಂತು ಎಂದು ಹೇಳುವುದಾದರೆ ಅದು ಸಂಪೂರ್ಣ ತಪ್ಪು ಕಲ್ಪನೆಯಾದೀತು.
References
ಕಮಲಾ ಎಂ. ಆರ್. (2007). ಉತ್ತರ ನಕ್ಷತ್ರ. ಕಥನ ಪ್ರಕಾಶನ. ಬೆಂಗಳೂರು.
ಚನ್ನಪ್ಪ ಕಟ್ಟಿ. (2022). ಯುದ್ಧ ಕಾಲದ ಹುಡುಗಿಯರು. ನೆಲೆ ಪ್ರಕಾಶನ. ಸಿದಿಗಿ.
ಜಗದೀಶ್ ಕೊಪ್ಪ ಎನ್. (2019). ಮರುಭೂಮಿಯ ಹೂ. ಮನೋಹರ ಗ್ರಂಥಮಾಲೆ. ಧಾರವಾಡ.
ನಿರಂಜನ. (2021). ಆಫ್ರಿಕಾದ ಹಾಡು. ನವಕರ್ನಾಟಕ ಪಬ್ಲಿಕೆಶನ್. ಬೆಂಗಳೂರು.
ಪ್ರಸಾದ್ ನಾಯ್ಕ್. (2020). ಸೇವಿಂಗ್ ಸಫಾ. ಸೃಷ್ಟಿ ಪಬಿಕೆಶನ್ಸ್. ಬೆಂಗಳೂರು.
ಪ್ರಶಾಂತ್ ಬೀಚಿ. (2010). ಲೇರಿಯೊಂಕ. ಛಂದ ಪುಸ್ತಕ. ಬೆಂಗಳೂರು.
ಬಂಜಗೆರೆ ಜಯಪ್ರಕಾಶ್. (2021). ತಲೆಮಾರು. ಅಭಿನವ ಪುಸ್ತಕ. ಬೆಂಗಳುರು.
ಮೋಹನ ಕುಂಟಾರ್. (2015). ಅನುವಾದ ಸಾಹಿತ್ಯ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.
ವಿಜಯಾ ಸುಬ್ಬರಾಜ್. (2020). ಒಡೆದ ಕನ್ನಡಿ. ದೇಸಿ ಪುಸ್ತಕ. ಬೆಂಗಳೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.