ಮಕ್ಕಳ ಕಥಾ ಸಾಹಿತ್ಯ

Authors

  • ಉಮಾದೇವಿ ಜಿ. ಟಿ. ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಶ್ರೀಮತಿ ರುದ್ರಾಂಬ ಎಂ ಪಿ ಪ್ರಕಾಶ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೂವಿನಹಡಗಲಿ, ವಿಜಯನಗರ ಜಿಲ್ಲೆ.

Keywords:

ಮಕ್ಕಳ ಕಥೆ, ಮುದ್ರಣ ಯುಗ, ಜಾನಪದ, ಇಪ್ಪತ್ತನೆಯ ಶತಮಾನ, ನವೋದಯ

Abstract

ನಮ್ಮ ಕನ್ನಡ ಸಾಹಿತ್ಯಕ್ಕೆ ಸುದೀರ್ಘವಾದ ಇತಿಹಾಸವಿದೆ. ಪೂರ್ವದ ಹಳೆಗನ್ನಡ, ಹಳೆಗನ್ನಡ, ನಡುಗನ್ನಡ, ಹೊಸಗನ್ನಡ, ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಸಾಹಿತ್ಯ ಎಂಬ ಕಾಲಘಟ್ಟದಲ್ಲಿ ಇಂದು ಹೆಮ್ಮರವಾಗಿ ಬೆಳೆದು ನಿಂತಿರುವುದನ್ನು ನಾವು ಕಾಣಬಹುದು. ಇಪ್ಪತ್ತನೆಯ ಶತಮಾನ ʼಅತ್ಯಂತ ವಿಶಿಷ್ಟವಾದ’ ಯುಗ ಎಂದು ಪರಿಗಣಿತವಾಗಿದ್ದು, ಈ ಕಾಲಘಟ್ಟದಲ್ಲಿ ಮಹಾಕಾವ್ಯ, ಭಾವಗೀತೆ, ಸಣ್ಣಕಥೆ, ಕಾದಂಬರಿ, ಪ್ರಬಂಧ, ನಾಟಕ, ಪ್ರವಾಸ ಸಾಹಿತ್ಯ, ವಿಚಾರಸಾಹಿತ್ಯ ಆತ್ಮಕಥೆ, ಜೀವನಚರಿತ್ರೆ ಇತ್ಯಾದಿ ಪ್ರಕಾರಗಳೆಲ್ಲವನ್ನು ಮೈಗೂಡಿಸಿಕೊಂಡು ಸಮೃದ್ಧವಾಗಿ ಬೆಳೆಯುತ್ತಿದೆ. ಇವುಗಳಲ್ಲಿ “ಮಕ್ಕಳ ಸಾಹಿತ್ಯ”ವೂ ಒಂದು.

ಕನ್ನಡ ಸಾಹಿತ್ಯದಲ್ಲಿ ʼಮಕ್ಕಳ ಸಾಹಿತ್ಯದ’ ಬೇರನ್ನು ಜಾನಪದ ಪರಂಪರೆಯಲ್ಲಿಯೇ ಕಾಣಬಹುದಾದರೂ ʼಮಕ್ಕಳ ಸಾಹಿತ್ಯ’ ಎಂಬ ಹೆಸರನ್ನು ಹೊತ್ತು ಪ್ರತ್ಯೇಕ ಸಾಹಿತ್ಯ ಪ್ರಕಾರವಾಗಿ ಬೆಳೆದು ಬಂದದ್ದು ʼನವೋದಯ ಸಾಹಿತ್ಯ’ದ ಕಾಲಘಟ್ಟದಲ್ಲಿ. ʼಮಕ್ಕಳ ಸಾಹಿತ್ಯ ಎಂದರೇನು?’ ಮಕ್ಕಳ ಸಾಹಿತ್ಯವನ್ನು ಏಕೆ ಪ್ರತ್ಯೇಕ ಪ್ರಕಾರವಾಗಿ ನೋಡಬೇಕು? ಮಕ್ಕಳ ಸಾಹಿತ್ಯದ ಮಹತ್ವ, ಮಕ್ಕಳ ಸಾಹಿತ್ಯದ ಉಗಮ, ಬೆಳವಣಿಗೆ, ಮಕ್ಕಳ ಸಾಹಿತ್ಯದ ಸ್ವರೂಪ ಈ ಅಂಶಗಳನ್ನು ಆಧರಿಸಿ ಬರೆದ ಲೇಖನ ಇದಾಗಿದೆ.

References

ರಘುನಾಥ್ ಎನ್. ಎಸ್. (2020). ಶತಮಾನದ ಮಕ್ಕಳ ಸಾಹಿತ್ಯ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.

ಕನ್ನಡ ಅಧ್ಯಯನ ಸಂಸ್ಥೆ. (2012). ಕನ್ನಡ ವಿಶ್ವಕೋಶ ಸಂಪುಟ: ಮೂರು. ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.

ಮಾದು ಪ್ರಸಾದ ಹುಣಸೂರು. (2020). ಮಕ್ಕಳ ಕಥಾ ಸಾಹಿತ್ಯ: ಸ್ವರೂಪ ಮತ್ತು ತಾತ್ವಿಕತೆ. ಪ್ರೇಮ ಪ್ರಕಾಶನ. ಹುಣಸೂರು.

Downloads

Published

30.11.2024

How to Cite

ಉಮಾದೇವಿ ಜಿ. ಟಿ. (2024). ಮಕ್ಕಳ ಕಥಾ ಸಾಹಿತ್ಯ. AKSHARASURYA, 5(03 Special Issue), 15 to 23. Retrieved from https://aksharasurya.com/index.php/latest/article/view/542

Issue

Section

ಸಂಶೋಧನಾ ಲೇಖನಗಳು. | RESEARCH ARTICLE.