ಭೂಸುಧಾರಣೆ ಕಾಯ್ದೆಗಳು ಮತ್ತು ಕರ್ನಾಟಕ
Keywords:
ಜಾತಿ ಪದ್ಧತಿ, ವಸಾಹತು ಕಾಲಘಟ್ಟ, ಭೂ ಒಡೆತನ, ಏಕೀಕರಣ ಚಳುವಳಿ, 1974ರ ಭೂಸುಧಾರಣಾ ಕಾಯ್ದೆAbstract
ಭಗತ್‌ಸಿಂಗ್ ಹೇಳಿರುವಂತೆ ರಾಷ್ಟ್ರೀಯತೆಯು ಹೇಗಿರಬೇಕೆಂದರೆ “ವಸಾಹತುಶಾಹಿಯೇ ಆಗಿರಲಿ, ಪ್ರಜಾಸತ್ತಾತ್ಮಕ ಮಾದರಿಯೇ ಆಗಿರಲಿ ಅದು ದೇಶದ ಸಂಪತ್ತಿನ ಲೂಟಿಯನ್ನು ಅಂತ್ಯಗೊಳಿಸುವಂತಿರಬೇಕು. ಕರ್ನಾಟಕದಲ್ಲಿ ಭೂಮಿ ಮತ್ತು ಕೃಷಿ ಕಾಯ್ದೆ-ಕಾನೂನುಗಳಿಗೆ ರೈತರಿಂದ ಪ್ರತಿರೋಧದ ಹೋರಾಟಗಳಿಲ್ಲದೆ ಅವುಗಳನ್ನು ಒಪ್ಪಿಕೊಂಡು ತಮ್ಮ ದಿನನಿತ್ಯದ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಇದಕ್ಕೆ ಕಾರಣ ಅವರುಗಳು ಬೆಳೆದಿರುವ ಬೆಳೆಯನ್ನು ಸೂಕ್ತ ಬೆಲೆಗೆ ಮಾರಾಟ ಮಾಡುವುದಾಗಿರುತ್ತದೆ. ಭೂ ಬಳಕೆಗೆ ಸಂಬಂಧಿತ ಭೂ ಸುಧಾರಣೆ ಕಾಯ್ದೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ರೂಪಿಸಿ ಜಾರಿಗೆ ತಂದಿರುತ್ತವೆ. ಇದರಿಂದ ರೈತರಿಗೆ ಮತ್ತು ಕೃಷಿಯಲ್ಲಿ ನಿರತರಾದವರಿಗೆ ಆಗುತ್ತಿರುವ ಸಾಧಕ-ಬಾಧಕಗಳನ್ನು ಕೇವಲ ವರಮಾನ, ಬಂಡವಾಳ ಮತ್ತು ಆರ್ಥಿಕ ನೆಲೆಗಳಲ್ಲಿ ವಿವೇಚಿಸದೆ ಅಲ್ಲಿನ ಭೂಸಂಬಂಧಗಳು, ಚಾರಿತ್ರಿಕ, ಸಾಮಾಜಿಕ, ರಾಜಕೀಯ ನೆಲೆಗಳಿಂದ ನೋಡುವುದು ಅವಶ್ಯಕವಾಗಿದೆ.
References
ಗರಣಿ ಎನ್ ಕೃಷ್ಣಮೂರ್ತಿ. (2024). ಭಾರತದ ಆರ್ಥಿಕತೆ. ಗರಣಿ ಪಬ್ಲಿಕೇಶನ್. ಬೆಂಗಳೂರು.
ಭೂ ಸುಧಾರಣಾ ಕಾಯ್ದೆಗಳು: 1955, 1961. 1974.1995 (ತಿದ್ದುಪಡಿ) 2015 (ತಿದ್ದುಪಡಿ). (2020). ಕರ್ನಾಟಕ ಸರ್ಕಾರ. ಬೆಂಗಳೂರು.
ಕಮತಿ ಸಿ. ಬಿ. (2019). ಸ್ವಾತಂತ್ರೋತ್ತರ ಭಾರತ. ನವಕರ್ನಾಟಕ ಪ್ರಕಾಶನ. ಬೆಂಗಳೂರು.
ಚಂದ್ರಪ್ಪ ಸಿ. (2012). ರೈತ ಮತ್ತು ಆದಿವಾಸಿ ಚಳುವಳಿ. ಮನೋಜ್ ಪಬ್ಲಿಕೇಷನ್ಸ್. ಬೆಂಗಳೂರು.
ಚಂದ್ರಶೇಖರ್ ಟಿ. ಆರ್. (2011). ಹಕ್ಕು-ಹಂಗು ಅಭಿವೃದ್ಧಿ ಅಧ್ಯಯನ ಆಯಾಮಗಳು. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ಚಂದ್ರ ಪೂಜಾರ್. (2010). ಯಾಕೀಗ ಭೂಮಿಯ ಪ್ರಶ್ನೆ?. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ಗಂಗಾಧರಮೂರ್ತಿ ಆರ್. (2009). ನಾಗಸಂದ್ರ ಭೂ ಆಕ್ರಮಣ ಚಳುವಳಿ. ಸತ್ಯಶ್ರೀ ಪ್ರಿಂಟರ್ ಪ್ರೈವೆಟ್ ಲಿಮಿಟೇಡ್. ಬೆಂಗಳೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.