ಭಾಗೀರಥಿ ಹೆಗಡೆ ಅವರ ಹೊಳೆಯ ಹಾದಿ ಕಾದಂಬರಿಯ ಪುರುಷ ಪಾತ್ರಗಳ ವಿಶ್ಲೇಷಣೆ
Keywords:
ಭಾಗೀರಥಿ ಹೆಗಡೆ, ಪುರುಷ ಪಾತ್ರ ಚಿತ್ರಣ, ಸಾಮಾಜಿಕ, ದೌರ್ಬಲ್ಯ, ಜವಾಬ್ದಾರಿ, ದುಶ್ಚಟ, ಕೃಷಿAbstract
ಸುಮಾರು ಎರಡು ಸಾವಿರ ವರ್ಷಗಳಷ್ಟು ಸುದೀರ್ಘವಾದ ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯ ಬಹು ಸಮೃದ್ಧವಾಗಿದ್ದು ಅದರಲ್ಲಿ ಆಧುನಿಕ ಕನ್ನಡ ಸಾಹಿತ್ಯ ಘಟ್ಟವು ಒಂದು. ಈ ಕಾಲಘಟ್ಟ ಒಂದು ರೀತಿಯಲ್ಲಿ ವಿಶೇಷ ಮತ್ತು ವಿಶಿಷ್ಟ. ಕಾರಣ ಆಧುನಿಕ ಕನ್ನಡ ಸಾಹಿತ್ಯವನ್ನು ಅಧ್ಯಯನದ ದೃಷ್ಟಿಯಿಂದ ಅದು ಬೆಳೆದು ಬಂದಿರುವ ಆಧಾರದ ಮೇಲೆ ನವೋದಯ, ನವ್ಯ, ಪ್ರಗತಿಶೀಲ, ದಲಿತ-ಬಂಡಾಯ ಮತ್ತು ಮಹಿಳಾ ಸಾಹಿತ್ಯ ಎಂದು ಅನೇಕ ಭಾಗಗಳಾಗಿ ವಿಂಗಡಿಸಿದ್ದೇವೆ. ಕಥೆ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಕಾವ್ಯದಂತಹ ಅನೇಕ ಸಾಹಿತ್ಯ ಪ್ರಕಾರಗಳು ಈ ಕಾಲಘಟ್ಟದಲ್ಲಿ ಬೆಳೆದು ತನ್ನ ಸಾಹಿತ್ಯ ಕ್ಷೇತ್ರವನ್ನು ಹಿಗ್ಗಿಸಿಕೊಂಡಿವೆ. ಆದುದರಿಂದ ಈ ಕಾಲಘಟ್ಟವನ್ನು ಸಾಹಿತ್ಯ ಕ್ಷೇತ್ರದ ಸುಗ್ಗಿಯ ಕಾಲ ಎಂತಲೇ ಕರೆಯಬಹುದು. ಕೇವಲ ಬೆರಳೆಣಿಕೆಯಷ್ಟಿದ್ದ ಮಹಿಳಾ ಲೇಖಕಿಯರು ಹೊಸಗನ್ನಡ ಕಾಲಘಟ್ಟದಲ್ಲಿ ಆಧುನಿಕ ಶಿಕ್ಷಣ ಕಲಿತ ಹೆಣ್ಣು ಮಕ್ಕಳು ಬರವಣಿಗೆಯಲ್ಲಿ ತೊಡಗಿಸಿಕೊಂಡು ಪುರುಷರಷ್ಟೇ ಸಮರ್ಥವಾಗಿ ಮತ್ತು ಸಶಕ್ತವಾಗಿ ಭಿನ್ನ ನೆಲೆಗಳಲ್ಲಿ ಸಾಹಿತ್ಯ ಸೃಷ್ಟಿಸಿ ಇಂದು ಮಹಿಳಾ ಸಾಹಿತ್ಯ ಪರಂಪರೆಯನ್ನು ಸಾಕಷ್ಟು ಹಿರಿದಾಗಿಸಿ ಸೈ ಎನಿಸಿಕೊಂಡಿದ್ದಾರೆ. ಪರಿಣಾಮವಾಗಿ ಆಧುನಿಕ ಕನ್ನಡ ಸಾಹಿತ್ಯದ ಒಂದು ಪಂಥವಾಗಿರುವ ಮಹಿಳಾ ಸಾಹಿತ್ಯ ಕಾಲಘಟ್ಟದಲ್ಲಿ ನಂಜನಗೂಡು ತಿರುಮಲಾಂಬ, ಆರ್. ಕಲ್ಯಾಣಮ್ಮ, ಕೊಡಗಿನ ಗೌರಮ್ಮ, ತ್ರಿವೇಣಿ, ಸಾರಾ ಅಬೂಬಕ್ಕರ್, ಎಚ್. ಎಸ್. ಪಾರ್ವತಿ, ಮಾಲತಿ ಪಟ್ಟಣಶೆಟ್ಟಿ, ಪ್ರೇಮಾಭಟ್, ಎ. ಪಿ. ಮಾಲತಿ, ಭಾಗೀರಥಿ ಹೆಗಡೆ, ವೈದೇಹಿ ಹೀಗೆ ಇನ್ನೂ ಅನೇಕ ಮಹಿಳಾ ಲೇಖಕಿಯರು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡುವುದರ ಮೂಲಕ ಈ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಮತ್ತಷ್ಟು ವಿಸ್ತಾರಗೊಳಿಸಿದರು. ಇವರುಗಳಲ್ಲಿ ಪ್ರಮುಖವಾಗಿ ಕಂಡುಬರುವ ಭಾಗೀರಥಿ ಹೆಗಡೆ ಅವರು ಕಥೆ, ಕಾದಂಬರಿ, ಕವನ, ಪ್ರಬಂಧ, ನಾಟಕ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಹೊಳೆಯ ಹಾದಿ ಮತ್ತು ಕಾಲಾಂತರ ಎಂಬ ಎರಡು ಕಾದಂಬರಿಗಳನ್ನು ಬರೆದಿದ್ದಾರೆ. ಪ್ರಸ್ತುತ ಹೊಳೆಯ ಹಾದಿ ಎಂಬ ಅವರ ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡು ಅಲ್ಲಿ ಬರುವ ಪುರುಷ ಪಾತ್ರಗಳನ್ನು ಕುರಿತು ವಿವೇಚಿಸಲಾಗಿದೆ.
References
ಮುಗಳಿ ರಂ. ಶ್ರೀ. (2014). ಕನ್ನಡ ಸಾಹಿತ್ಯ ಚರಿತ್ರೆ. ಗೀತಾಬುಕ್ ಹೌಸ್. ಮೈಸೂರು.
ಶಾಮರಾಯ ತ. ಸು. (2012). ಕನ್ನಡ ಸಾಹಿತ್ಯ ಚರಿತ್ರೆ. ಕನ್ನಡ ಸಾಹಿತ್ಯ ಪರಿಷತ್ತು. ಚಾಮರಾಜಪೇಟೆ.
ಶ್ರೀಮತಿ ಎಚ್. ಎಸ್. (2019). ಸ್ತ್ರೀವಾದ ಚಿಂತನೆ ಮತ್ತು ಹೋರಾಟ. ಅಭಿರುಚಿ ಪ್ರಕಾಶನ. ಮೈಸೂರು.
ನಾಗಭೂಷಣ ಸ್ವಾಮಿ ಓ. ಎಲ್. (2015). ವಿಮರ್ಶೆಯ ಪರಿಭಾಷೆ. ಅಭಿನವ ಪ್ರಕಾಸನ. ಬೆಂಗಳೂರು.
ನಾಯಕ್ ಜಿ. ಎಚ್. (1988). ನಿಜದನಿ. ಅಭಿನವ ಪ್ರಕಾಶನ. ಬೆಂಗಳೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.