ಸ್ತ್ರೀವಾದಿ ಸಾಹಿತ್ಯ ವಿಮರ್ಶೆ - ಒಂದು ವಿವೇಚನೆ

Main Article Content

ಸೌಮ್ಯ ಹೆಚ್.ಎಲ್.

Abstract

ಕನ್ನಡ ಭಾಷೆ ಅಗಾಧ ಶ್ರೀಮಂತಿಕೆಯನ್ನು ಹೊಂದಿದ್ದು ಪೂರ್ವ ಹಳಗನ್ನಡ, ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂಬ ಹಲವು ಬಗೆಗಳಾಗಿ ರೂಪುಗೊಂಡು, ಹಲವು ಅವಸ್ಥೆಗಳ ತದನಂತರ ತಂತ್ರಜ್ಞಾನವನ್ನು ತನ್ನ ಜೊತೆ ಮೇಳೈಸಿಕೊಂಡು ಸಾಹಿತ್ಯ ಕೃಷಿ ನಡೆಯುತ್ತಾ ಓದುಗರನ್ನು ಅತೀ ಸುಲಭವಾಗಿ ಮುಟ್ಟುವ ಹಂತಕ್ಕೆ ಬಂದಿದೆ. ಅದರಲ್ಲೂ ‘ಸ್ತ್ರೀವಾದಿ ಸಾಹಿತ್ಯ ವಿಮರ್ಶೆ’ ಎಂಬುದು ಕನ್ನಡ ಲೇಖಕಿಯರ ಪಾಲಿಗೆ ಒಂದು ಸವಾಲಾಗಿದ್ದು, ಅವರು ತಮ್ಮ ಕೃತಿಗಳಲ್ಲಿ ಹೆಣ್ಣನ್ನು, ಅವಳ ಸ್ಥಿತಿಗತಿಯನ್ನು ವಿವರಿಸಿರುವ ಹಂತಗಳನ್ನು ನನ್ನ ಈ ಪ್ರಬಂಧದಲ್ಲಿ ವಿವರಿಸಬಯಸುತ್ತೇನೆ. ಸ್ತ್ರೀವಾದಿ ವಿಮರ್ಶೆ ಇದುವರೆವಿಗೂ ಮಹಿಳೆಯನ್ನು ತಿರುಚಿ ನೋಡಿರುವ ವಿಚಾರ, ಅದರ ಕಾರಣ, ಅಲ್ಲದೇ ಆಕೆಗೆ ಸಿಗಬೇಕಾದ ಸರಿಯಾದ ಸ್ಥಾನಮಾನದ ಬಗ್ಗೆ ಪ್ರಶ್ನೆ ಮಾಡುತ್ತಾ ನೈಜ ಸ್ಥಿತಿಯನ್ನು ಅರ್ಥ ಮಾಡಿಸುವ ಪ್ರಯತ್ನ ಈ ಸಂಶೋಧನಾ ಪ್ರಬಂಧದಲ್ಲಿದೆ.

Article Details

Section

Research Articles

Author Biography

ಸೌಮ್ಯ ಹೆಚ್.ಎಲ್.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ನ್ಯೂ ಹೊರೈಜಾನ್ ಕಾಲೇಜು, ಮಾರತ್ತಹಳ್ಳಿ, ಬೆಂಗಳೂರು.

 

How to Cite

ಸೌಮ್ಯ ಹೆಚ್.ಎಲ್. (2026). ಸ್ತ್ರೀವಾದಿ ಸಾಹಿತ್ಯ ವಿಮರ್ಶೆ - ಒಂದು ವಿವೇಚನೆ. ಅಕ್ಷರಸೂರ್ಯ (AKSHARASURYA), 13(02), 90 to 95. https://aksharasurya.com/index.php/latest/article/view/528

References

ಸುಮಿತ್ರಾಬಾಯಿ ಬಿ.ಎನ್., (2018), ಸ್ತ್ರೀವಾದ: ಒಂದು ಅವಲೋಕನ, ಶಿವಮೊಗ್ಗ: ಅಹರ್ನಿಶಿ ಪ್ರಕಾಶನ.

ಪಾರ್ವತಿ ಎಚ್.ಎಸ್., (1992), ಸಾಹಿತ್ಯ-ಮಹಿಳಾದೃಷ್ಟಿ, ಬೆಂಗಳೂರು: ಮಾನಸೋಲ್ಲಾಸ ಪ್ರಕಾಶನ.

ವಿಜಯಾ ದಬ್ಬೆ, (1997), ನಾರಿ: ದಾರಿ-ದಿಗಂತ, ಮೈಸೂರು: ರಚನಾ ಪ್ರಕಾಶನ.

ಶ್ರೀಮತಿ ಎಚ್.ಎಸ್., (2022), ಅಧಿಕಾರ ಮತ್ತು ಅಧೀನತೆ, ಹೆಗ್ಗೋಡು (ಸಾಗರ): ಆಕಾರ ಪ್ರಕಾಶನ.

ಆಶಾದೇವಿ ಎಂ.ಎಸ್., (2014), ಬೆಳಕಿಗಿಂತ ಬೆಳ್ಳಗೆ, ಬಳ್ಳಾರಿ: ಲೋಹಿಯಾ ಪ್ರಕಾಶನ.

ನಾಗಭೂಷಣಸ್ವಾಮಿ ಒ.ಎಲ್., (2011), ವಿಮರ್ಶೆಯ ಪರಿಭಾಷೆ, ಶಿವಮೊಗ್ಗ: ಅಹರ್ನಿಶಿ ಪ್ರಕಾಶನ.

ಅಮೂರ ಜಿ.ಎಸ್., (1982), ಆಧುನಿಕ ಕನ್ನಡ ವಿಮರ್ಶೆ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.