ಜನಪದ ಸಾಹಿತ್ಯದ ಮೇಲೆ ಆಧುನಿಕ ಮಾಧ್ಯಮಗಳ ಪ್ರಭಾವ

Main Article Content

ಶಿಲ್ಪ ಬಿ.

Abstract

ಜನಪದ ಸಾಹಿತ್ಯವು ಸಂಸ್ಕೃತಿಯ ಮೂಲ ಬೇರಾಗಿದ್ದು, ಆಧುನಿಕ ಮಾಧ್ಯಮಗಳ ಪ್ರಭಾವದಿಂದಾಗಿ ಮಹತ್ವದ ಪಲ್ಲಟಗಳನ್ನು ಕಾಣುತ್ತಿದೆ. ಮುದ್ರಣ, ದೃಶ್ಯ ಮತ್ತು ಸಾಮಾಜಿಕ ಜಾಲತಾಣಗಳು ಜನಪದ ಕಲೆಗಳನ್ನು ಜಾಗತಿಕ ಮಟ್ಟಕ್ಕೆ ತಲುಪಿಸಿ, ಕಲಾವಿದರಿಗೆ ಆರ್ಥಿಕ ಮತ್ತು ಪ್ರಚಾರದ ನೆರವು ನೀಡಿವೆ. ಆದರೆ, ಅವಿಭಕ್ತ ಕುಟುಂಬಗಳ ವಿಘಟನೆ ಮತ್ತು ಮೊಬೈಲ್ ಸಂಸ್ಕೃತಿಯಿಂದಾಗಿ ‘ಹೇಳುಗ-ಕೇಳುಗ’ ಪರಂಪರೆ ನಶಿಸಿ, ‘ನೋಡುಗ’ ಪರಂಪರೆ ಬೆಳೆದಿದೆ. ಯಕ್ಷಗಾನದಂತಹ ಕಲೆಗಳು ವ್ಯಾಪಾರೀಕರಣಗೊಂಡು ತಮ್ಮ ಮೂಲ ಸ್ವರೂಪ ಹಾಗೂ ಪ್ರಾದೇಶಿಕ ವೈಶಿಷ್ಟ್ಯಗಳನ್ನು ಕಳೆದುಕೊಳ್ಳುವ ಆತಂಕವನ್ನು ಇಲ್ಲಿ ಚರ್ಚಿಸಲಾಗಿದೆ. ಪರಂಪರೆ ಮತ್ತು ಆಧುನಿಕತೆಯ ನಡುವೆ ಸಮನ್ವಯ ಸಾಧಿಸುವ ಮೂಲಕ ಜನಪದದ ಮೌಲ್ಯಗಳನ್ನು ಉಳಿಸಿಕೊಳ್ಳುವ ಅಗತ್ಯವನ್ನು ಲೇಖನ ಪ್ರತಿಪಾದಿಸುತ್ತದೆ.

Article Details

Section

Research Articles

Author Biography

ಶಿಲ್ಪ ಬಿ.

ಸಹಾಯಕ ಪ್ರಾಧ್ಯಾಪಕರು, ನ್ಯೂ ಎಕ್ಸ್‌ಪರ್ಟ್ ಕಾಲೇಜು, ರಾಮನಗರ, ಬೆಂಗಳೂರು ದಕ್ಷಿಣ ಜಿಲ್ಲೆ.

References

ವೀರಣ್ಣ ದಂಡೆ, (2007), ಜನಪದ ಕಾವ್ಯ ಮೀಮಾಂಸೆ ಹಾಗೂ ವಿಮರ್ಶಾ ಪ್ರಸ್ಥಾನಗಳು, ಕಲಬುರಗಿ: ಲಕ್ಷ್ಮಿ ಮುದ್ರಣಾಲಯ.

ರಾಜಶೇಖರ ಪಿ.ಕೆ., (2003), ಜಾನಪದ ಸಂಭ್ರಮ, ಮೈಸೂರು: ಶ್ರೀ ರಾಜೇಂದ್ರ ಪ್ರಿಂಟರ್ಸ್.

ಚಂದ್ರಶೇಖರ ಕಂಬಾರ, (2011), ದೇಶೀಯ ಚಿಂತನ, ಬೆಂಗಳೂರು: ಅಂಕಿತ ಪುಸ್ತಕ.