‘ಪರಿಸರದ ಕತೆ’ ಕೃತಿಯಲ್ಲಿ ಮನುಷ್ಯ ಮತ್ತು ಪ್ರಕೃತಿಯ ಸಂಬಂಧಗಳು

Main Article Content

ಅಶೋಕ ಎನ್.ಎಸ್.

Abstract

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಕನ್ನಡದಲ್ಲಿ ಪರಿಸರ ಸಾಹಿತ್ಯ ಪ್ರಕಾರಕ್ಕೆ ಭದ್ರ ಬುನಾದಿ ಹಾಕಿದವರು. ಅವರ ‘ಪರಿಸರದ ಕತೆ’ ಕೃತಿಯನ್ನು ಆಧರಿಸಿದ ಈ ಲೇಖನವು, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಕೀರ್ಣ ಸಂಬಂಧಗಳನ್ನು ವೈಜ್ಞಾನಿಕ ಮತ್ತು ಅನುಭಾವಿಕ ನೆಲೆಗಳಲ್ಲಿ ವಿಶ್ಲೇಷಿಸುತ್ತದೆ. ಲೇಖಕರು ‘ಸುಸ್ಮಿತಾ ಮತ್ತು ಹಕ್ಕಿಮರಿ’, ‘ಕಿವಿ’ ಹಾಗೂ ಇತರೆ ಕಥೆಗಳ ದೃಷ್ಟಾಂತಗಳ ಮೂಲಕ, ಪ್ರಕೃತಿಯಲ್ಲಿ ಮಾನವನ ಅತಿಯಾದ ಹಸ್ತಕ್ಷೇಪ ಮತ್ತು ಅಜ್ಞಾನದಿಂದಾಗುವ ಅನಾಹುತಗಳನ್ನು ಗುರುತಿಸಿದ್ದಾರೆ. ಜೀವವಿಕಾಸದ ನಿಯಮಗಳು, ಪ್ರಾಣಿ ಪ್ರಪಂಚದ ವಿಸ್ಮಯ ಮತ್ತು ಪರಿಸರ ಸಂರಕ್ಷಣೆಯ ಕುರಿತು ತೇಜಸ್ವಿಯವರು ಮೂಡಿಸಿರುವ ಎಚ್ಚರಿಕೆಯ ಧ್ವನಿಯನ್ನು ಹಾಗೂ ಸಹಜ ಜೀವನಶೈಲಿಯ ಮಹತ್ವವನ್ನು ಇಲ್ಲಿ ಚರ್ಚಿಸಲಾಗಿದೆ.

Article Details

Section

Research Articles

Author Biography

ಅಶೋಕ ಎನ್.ಎಸ್.

ಸಹಾಯಕ ಪ್ರಾಧ್ಯಾಪಕರು, ಭಾಷಾ ವಿಭಾಗ, ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರ, ಸತ್ಯ ಸಾಯಿ ಗ್ರಾಮ, ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ.

How to Cite

ಅಶೋಕ ಎನ್.ಎಸ್. (2026). ‘ಪರಿಸರದ ಕತೆ’ ಕೃತಿಯಲ್ಲಿ ಮನುಷ್ಯ ಮತ್ತು ಪ್ರಕೃತಿಯ ಸಂಬಂಧಗಳು. ಅಕ್ಷರಸೂರ್ಯ (AKSHARASURYA), 13(02), 55 to 65. https://aksharasurya.com/index.php/latest/article/view/524

References

ಪೂರ್ಣಚಂದ್ರ ತೇಜಸ್ವಿ ಕೆ.ಪಿ., (2010), ಪರಿಸರದ ಕತೆ, ಮೈಸೂರು: ಪುಸ್ತಕ ಪ್ರಕಾಶನ.

ಕುವೆಂಪು, (2014), ವಿಹಗ, ಮೈಸೂರು: ಉದಯರವಿ ಪ್ರಕಾಶನ.

ಕರೀಗೌಡ ಬೀಚನಹಳ್ಳಿ, (2011), ಶತಮಾನದ ಸಣ್ಣಕಥೆಗಳ ಸಮೀಕ್ಷೆ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.

ತಿಪ್ಪೇಸ್ವಾಮಿ ಜಿ.ಆರ್‌, (2018), ಸಣ್ಣಕಥೆ (ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ: ಸಂಪುಟ 4), ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ಕರೀಗೌಡ ಬೀಚನಹಳ್ಳಿ, (2017), ತೇಜಸ್ವಿ ಕಥೆಗಳ ಕುರಿತು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.