ಕಾವ್ಯ ಸಾಹಿತ್ಯದಲ್ಲಿ ಪರಿಸರ ಮತ್ತು ಹಸಿರು ಚಿಂತನೆ
Main Article Content
Abstract
ಸೃಷ್ಟಿಯ ದೃಷ್ಟಿಯೇ ಬ್ರಹ್ಮಾಂಡವಾಗಿದೆ. ಭೂಮಿಯಲ್ಲಿ ಜೀವಿಸಲು ಯೋಗ್ಯವಾದ ಸುವ್ಯವಸ್ಥೆಯಿದೆ. ಎಲ್ಲ ಜೀವ ಸಂಕುಲಗಳು ಬದುಕಿ ಬಾಳಲು ಸೃಷ್ಟಿಯ ಅದ್ಭುತವಾದ ಕಾರ್ಯವಾಗಿದೆ. ಭೂಮಿಯಲ್ಲಿ ನೀರು, ಅಗ್ನಿ, ವಾಯು, ಪ್ರಾಣಿ, ಪಕ್ಷಿ, ಸಸ್ಯಗಳು ಸಹ ಬದುಕುತ್ತಿವೆ. ಮನುಷ್ಯರು ಕೂಡಾ ಜೀವಿಸುತ್ತಿದ್ದಾರೆ. ಪರಿಸರದಲ್ಲಿನ ಗುಡ್ಡ, ಬೆಟ್ಟ, ಅರಣ್ಯ ಪ್ರದೇಶದಲ್ಲಿನ ಗಿಡಮರಗಳು, ವನ್ಯಜೀವಿಗಳು, ಕೆರೆ, ನದಿ, ವಾಸಿಸಲು ಇರುವ ಅಗತ್ಯತೆಗಳು ಕಂಡು ಬರುತ್ತವೆ. ಹೀಗೆ ನಾಗರಿಕತೆಯ ಸೃಷ್ಟಿ, ಸೌಲಭ್ಯಗಳು, ಅನುಕೂಲಗಳು ಕಾಣಬಹುದಾಗಿದೆ. ಕೃಷಿ ಉತ್ಪನ್ನಗಳ ವ್ಯವಸಾಯ ರೈತನ ಜೀವನದ ಸಾಧನೆಯೇ ದೇಶದ ಹೆಮ್ಮೆಯತನವಾದ ವಿಷಯವಾಗಿದೆ. ಔಷಧಿಗಳು ಹೊಂದಿರುವ ಗಿಡಮರಗಳು, ಗದ್ದೆಯಲ್ಲಿನ ಬೆಳೆಗಳು, ವೈಜ್ಞಾನಿಕ ಸಂಶೋಧನೆಯ ಫಲಿತಗಳು ಸಾರ್ವಜನಿಕರಿಗೆ ಅನುಕೂಲಗಳಾಗಿವೆ. ಹಸಿರು ಪರಿಸರದ ಮುಂಗಾರು ಮಳೆಯ ವಸಂತ ಕಾಲದ ರಮಣೀಯತೆ ಕಾಣಬಹುದಾಗಿದೆ.
ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿಯೂ ಸಹ ಪರಿಸರ, ನಿಸರ್ಗ, ಹಸಿರಿನ ವರ್ಣನೆ, ಬಣ್ಣನೆ, ಮಲೆನಾಡು, ಕರಾವಳಿಯ ತೀರದ ಸಮುದ್ರದ ಅನುಭವಗಳು ಉಲ್ಲೇಖಗೊಂಡಿವೆ. ಅಷ್ಟೇ ಅಲ್ಲ ಹಳಗನ್ನಡ, ನಡುಗನ್ನಡ, ಹೊಸಗನ್ನಡದಲ್ಲಿಯೂ ಸಹ ಪರಿಸರ ಹಸಿರು ಚಿಂತನೆಗಳು ರಚನೆಗೊಂಡಿರುವ ವಿಷಯಗಳು ಅಧ್ಯಯನದಿಂದ ತಿಳಿಯಬಹುದಾಗಿದೆ. ಭೂಮಿಯಲ್ಲಿನ ಭೌಗೋಳಿಕ ಖನಿಜ ಸಂಪನ್ಮೂಲಗಳು ಒಳಗೂ ಮತ್ತು ಹೊರಗೂ ಇರುವುದನ್ನು ಕಾಣಬಹುದಾಗಿದೆ. ವಿಜ್ಞಾನ, ವೈಜ್ಞಾನಿಕ ಚಿಂತನೆಗಳು, ವೈದ್ಯಕೀಯ ಮಾರುಕಟ್ಟೆಯ ಉತ್ಪನ್ನಗಳು, ತರಕಾರಿ, ಸಸ್ಯಗಳು, ನೀರು, ವಾಯುವಿನ ಅಗತ್ಯತೆ ತಿಳಿಸುತ್ತವೆ. ಬದುಕಲು ಸಕಲ ಸೌಲಭ್ಯಗಳು ಪರಿಸರದ ಕೊಡುಗೆಯಾಗಿದೆ. ಪರಿಸರ, ಹಸಿರು ಚಿಂತನೆಗೆ ಸಂಬಂಧಿಸಿದಂತೆ, ಹಲವಾರು ಕೃತಿಗಳು ರಚನೆಗೊಂಡಿವೆ. ಸಮಸ್ಯೆಗಳು ಎದುರಾದಾಗ ಪರಿಹಾರಗಳು ಕಂಡು ಹಿಡಿಯುವ ಪ್ರಯತ್ನಗಳಿವೆ.
ಬಿ.ಜಿ.ಎಲ್. ಸ್ವಾಮಿಯವರ ‘ಹಸಿರು ಹೊನ್ನು’, ಕೆ.ಎಸ್.ನಿಸಾರ್ ಅಹಮ್ಮದರ ‘ನಿತ್ಯೋತ್ಸವ’, ನಾರಾಯಣ ಶೇವಿರೆ- ‘ಪರಿಸರ ಪರ’, ಡಾ.ಎಚ್.ಆರ್.ಕೃಷ್ಣಮೂರ್ತಿ- ‘ಪರಿಸರ ಅಧ್ಯಯನ’, ಪ್ರೊ.ಕೆ.ಬೈರಪ್ಪ- ‘ಪರಿಸರ ಪ್ರಜ್ಞೆ’, ಪೂರ್ಣಚಂದ್ರ ತೇಜಸ್ವಿಯವರ ‘ಪರಿಸರದ ಕಥೆ’, ಮುಂತಾದ ಕೃತಿಗಳನ್ನು ಸಹ ಕಾಣಬಹುದಾಗಿದೆ. ಕರ್ನಾಟಕದಲ್ಲಿ ಅಪೂರ್ವ ಪಶ್ಚಿಮಘಟ್ಟ, ಕಾಡು, ತೋಟ, ಕಾಡು ಹಣ್ಣುಗಳು ಇತ್ಯಾದಿಗಳು ಕಾಣಬಹುದಾಗಿದೆ. ಪರಿಸರದಲ್ಲಿನ ಹಸಿರು ಬೆಳೆಗಳು, ಆರ್ಥಿಕ ಸ್ಥಿತಿ, ಉತ್ಪನ್ನಗಳು, ಮಾರುಕಟ್ಟೆ, ಜಾನುವಾರುಗಳು, ವಿಜ್ಞಾನ, ಸಂಶೋಧನೆ, ಹಲವಾರು ವಲಯಗಳನ್ನು ವಿಸ್ತಾರವನ್ನು ಪಡೆದುಕೊಂಡಿದೆ. ಕನ್ನಡ ಸಾಹಿತ್ಯಲೋಕದಲ್ಲಿ ಪರಿಸರ, ಹಸಿರು ವಿಷಯ ವಸ್ತುವಾಗಿ ಜೀವಂತ ನಿದರ್ಶನಗಳು ಕಂಡು ಬರುತ್ತವೆ. ಒಟ್ಟಾರೆಯಾಗಿ ಮಾನವ ಪರಿಸರದ ಕೂಸು; ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ನಿಸರ್ಗದ ಲಾಲನೆ ಪಾಲನೆಯನ್ನು ಪ್ರತಿಯೊಬ್ಬರು ಮಾಡಬೇಕು. ಪರಿಸರವನ್ನು ಉಳಿಸಿ ಬೆಳೆಸಬೇಕಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಡಾ.ಚಂದ್ರಮಾ ಎಸ್.ಕಣಗಲಿ, ಭಾವಾಂಜಲಿ, ಪು.ಸಂ.03.
ಶ್ರೀಶೈಲ ಮಲ್ಲನಗೌಡ ಬಿರಾದಾರ, ಕಾವ್ಯ ಶರದಿ, ಪು.ಸಂ.03.
ಕೆ.ಎಸ್.ಚಿದಾನಂದ, ಒಲವಿನ ಅಲೆಗಳು, ಪು.ಸಂ.48.
ಶಾಂತಾ ಕುಂಟಿನಿ (ಶಕುಂತಲಾ), ಸೂಕ್ಷ್ಮ ದೃಷ್ಟಿ ಪು.ಸಂ.18.
ಶ್ರೀಶೈಲ ಮಲ್ಲನಗೌಡ ಬಿರಾದಾರ, ಕಾವ್ಯ ಶರದಿ, ಪು.ಸಂ.25.
ಹಾರನಹಳ್ಳಿ ಮಳಲಿಗೌಡ, ಗೂಡು ಕಟ್ಟಬೇಕು, ಪು.ಸಂ.8-10.
ಶಿವರಾಜ ಮೋತಿ, ರವಿಯ ಕವಿತೆಗಳು, ಪು.ಸಂ.1.
ಎಮ್.ಕೆ.ಶೇಖ, (ಮೌ.ಕು.ಶೇ) ಭೂ ಮಾತೆ ನನ್ನ ಮಾತೆ, ಪು.ಸಂ.56.
ಅಶ್ವಿನಿ. ಡಿ.ಎನ್. ಮಾಸದ ಕಿರುನಗೆ, ಪು.ಸಂ.27-28.
ಸಂ ಪಿ.ಲಂಕೇಶ, ಅಕ್ಷರ ಹೊಸ ಕಾವ್ಯ, ಪು.ಸಂ.30-31.
ಸಂ ಡಾ.ಬಿ.ಜಿ. ಬಿರಾದಾರ. ಡಾ. ಎಸ್.ಬಿ.ಕರಿಬರಮಗೌಡರ, ಕನ್ನಡ ನವೋದಯ ಕಾವ್ಯ, ಪು.ಸಂ.11-12.
ಡಾ.ಬಿ.ಎ.ಸನದಿ, ಹೊಸ ಶಬ್ದದ ಸಂಸಾರ, ಪು.ಸಂ.29-30.
ಸಂ ಪಿ.ಲಂಕೇಶ, ಅಕ್ಷರ ಹೊಸ ಕಾವ್ಯ, ಪು.ಸಂ.280-281