ಉಷಾನವರತ್ನರಾಮ್ ಅವರ ಅತಿಕ್ರಮಣ ಕಾದಂಬರಿಯಲ್ಲಿ ಮಹಿಳಾ ಶೋಷಣೆ
Main Article Content
Abstract
ಉಷಾನವರತ್ನರಾಮ್ ಅವರ 'ಅತಿಕ್ರಮಣ' ಕಾದಂಬರಿಯನ್ನು ಆಧರಿಸಿ ಮಹಿಳಾ ಶೋಷಣೆಯ ವಿವಿಧ ಮಜಲುಗಳನ್ನು ಇಲ್ಲಿ ಚರ್ಚಿಸಲಾಗಿದೆ. ಕಾದಂಬರಿಯ ನಾಯಕಿ ಸುಜಾತಳ ಮೂಲಕ ಪಿತೃಪ್ರಧಾನ ವ್ಯವಸ್ಥೆ, ವೈವಾಹಿಕ ಬದುಕಿನ ತಲ್ಲಣಗಳು ಮತ್ತು ಸಂಪ್ರದಾಯದ ಹೆಸರಿನಲ್ಲಿ ನಡೆಯುವ ದಬ್ಬಾಳಿಕೆಯನ್ನು ವಿಶ್ಲೇಷಿಸಲಾಗಿದೆ. ಸುಜಾತಳು ವಿದೇಶಿ ವ್ಯಾಮೋಹದ ಗಂಡನಿಂದ ಕಡೆಗಣಿಸಲ್ಪಟ್ಟು, ನಂತರ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವ ಪರಿಯನ್ನು ಲೇಖಕರು ಗುರುತಿಸಿದ್ದಾರೆ. ಆರ್ಥಿಕ ಸ್ವಾವಲಂಬನೆ ಮತ್ತು ಶಿಕ್ಷಣವು ಮಹಿಳಾ ಸಬಲೀಕರಣಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಸುಜಾತಳ ಪಾತ್ರದ ಮೂಲಕ ತೋರಿಸಿಕೊಡಲಾಗಿದೆ. ಸ್ತ್ರೀವಾದಿ ನೆಲೆಯಲ್ಲಿ ಕಾದಂಬರಿಯನ್ನು ಪರಾಮರ್ಶಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಅತಿಕ್ರಮಣ, ಉಷಾನವರತ್ನರಾಮ್, ಓಂ ಶಕ್ತಿ ಪ್ರಕಾಶನ, ಬೆಂಗಳೂರು, 2016.
ನಮಗೆ ಗೋಡೆಗಳಿಲ್ಲ, ಬಿ.ಸುಜ್ಞಾನಮೂರ್ತಿ(ಅನು), ಲಡಾಯಿ ಪ್ರಕಾಶನ, ಗದಗ, 2017.
ಬೆ ಗೋ ರಮೇಶ್, ಸಾಹಿತ್ಯಲೋಕದ ಪ್ರಾತ:ಸ್ಮರಣೀಯರು ಉಷಾನವರತ್ನರಾಮ್, ದಿವ್ಯಚಂದ್ರ ಪ್ರಕಾಶನ, ಬೆಂಗಳೂರು, 2005.
ಮಹಿಳೆ ದುಡಿಮೆ ಮತ್ತು ಬಿಡುವು, ಡಾ. ಹೆಚ್ ಎಸ್ ಶ್ರೀಮತಿ(ಸಂ), ಮಹಿಳಾ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2007.
ಮಹಿಳಾ ಅಸಮಾನತೆ, ನ್ಯಾ. ನಾಗಮೋಹನ ದಾಸ್, ಚಿಂತನ ಪುಸ್ತಕ ಪ್ರಕಾಶನ, ಬೆಂಗಳೂರು, 2015.
ಹೆಣ್ಣುಸಿರ ತಲ್ಲಣಗಳು, ರೂಪ ಹಾಸನ(ಸಂ), ಅಭಿರುಚಿ ಪ್ರಕಾಶನ, ಮೈಸೂರು, 2015.