ಸಂಗೀತದ ಹುಟ್ಟು ಮತ್ತು ಬೆಳವಣಿಗೆ

Authors

  • ತಿಮ್ಮಣ್ಣ ಭೀಮರಾಯ ತಾತ್ಕಾಲಿಕ ಅಧ್ಯಾಪಕರು, ಸಂಗೀತ ಮತ್ತು ನೃತ್ಯ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

Keywords:

ಭಾರತೀಯ ಸಂಗೀತ, ಸಂಗೀತದ ಇತಿಹಾಸ, ಜಾನಪದ ಸಂಗೀತ, ಶಾಸ್ತ್ರೀಯ ಸಂಗೀತ, ಮ್ಯೂಸಿಕ್

Abstract

ಭಾರತೀಯ ಸಂಗೀತದ ಇತಿಹಾಸ, ಸಂಗೀತದ ಉಗಮ ಮತ್ತು ವಿಕಾಸ ಹೇಗಾಯಿತು, ಯಾರಿಂದಾಯಿತು ಎಂದು ಪರಿಪೂರ್ಣವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಸಂಗೀತದ ಹುಟ್ಟಿನ ಬಗೆಗೆ ವಿದ್ವಾಂಸರಲ್ಲಿ ಭಿನ್ನಾಬಿಪ್ರಾಯಗಳಿವೆ. ಶ್ರೀ ಟಿ.ವಿ.ಸುಬ್ಬರಾವ್ ಇವರು ತಮ್ಮ ‘ಸ್ಟಡೀಸ್ ಇನ್ ಇಂಡಿಯನ್ ಮ್ಯೂಸಿಕ್’ ಎಂಬ ಪುಸ್ತಕದಲ್ಲಿ “ಆದಿಮಾನವರ ಮನೋಭಾವಗಳು ನೈಸರ್ಗಿಕ, ಸುಖಪೂರ್ಣ ಹಾಗೂ ದುಃಖ ಪೂರ್ಣ ಅನುಭವದ ಅನುಸಾರವಾಗಿ ಬದಲಾಯಿಸುತ್ತಿದ್ದವು. ಅರಣ್ಯದಲ್ಲಿ ಆದಿಮಾನವನಿಗೆ ಸಂತೋಷವಾದಾಗ ಉಚ್ಛಧ್ವನಿಯಲ್ಲಿ ಕೂಗುತ್ತಿದ್ದನು. ದುಃಖವಾದಾಗ ಅವನ ‘ಆಕ್ರೋಶದ’ ಧ್ವನಿ ನೀಚವಾಗುತ್ತಿತ್ತು. ಪಶು-ಪಕ್ಷಿಗಳ ರೋಧನೆ, ದುಂಬಿಯ ಝೇಂಕಾರ, ಧನುಸ್ಸಿನ ಠೇಂಕಾರ, ಬಿದಿರು ವನದಲ್ಲಿ ಗಾಳಿಯ ಚಲನದಿಂದ ಉತ್ಪತ್ತಿಯಾಗುವ ಧ್ವನಿ ಇತ್ಯಾದಿಗಳಲ್ಲಿಯೂ ಪ್ರಾಚೀನ ಸಂಗೀತ ಮೂಲವಡಗಿದೆ” (ನಾಗ ಪುಷ್ಪಲತಾ, ಕರ್ನಾಟಕ ರಂಗ ಕಲೆಗಳ ಕೋಶ, ಪು. ೩೧) ಎಂದು ಉಲ್ಲೇಖಿಸಲಾಗಿದೆ. ಸಂಗೀತ ಕಲೆಯು ಅತ್ಯಂತ ಪುರಾತನವಾದದ್ದು ಅದರ ಪ್ರಾರಂಭ ಎಲ್ಲಿಂದ ಹೇಗೆ, ಯಾವಾಗ ಆಯಿತು ಎಂದು ಹೇಳುವುದು ತುಂಬ ಕಷ್ಟ. ಈ ಜಗತ್ತು ಸೃಷ್ಟಿಯಾದಾಗಲೇ, ಸಂಗೀತದ ಉಗಮವಾಯಿತು ಎನ್ನಬಹುದು. “Music is born of nature and has been essentially an integral part of life from the very beginning of the creation and developed with the growth of civilization” (ನಾಗ ಪುಷ್ಪಲತಾ, ಕರ್ನಾಟಕ ರಂಗ ಕಲೆಗಳ ಕೋಶ) ಮಾನವನಿಗೂ ಮೊದಲು ಸಂಗೀತವಿದ್ದಿತ್ತೆಂಬ ಹೇಳಿಕೆಯನ್ನು ಗಮನಿಸಿದರೆ ವೇದ್ಯವಾಗುತ್ತದೆ. ನಿಸರ್ಗಕ್ಕೂ, ಕಲೆಗೂ ಅವಿನಾಭಾವ ಸಂಬಂಧವಿದೆ. ನಿಸರ್ಗ ಸೌಂದರ್ಯ, ಸ್ವರೂಪಗಳೆಲ್ಲವನ್ನೂ ಕಲೆಯು ತನ್ನಲ್ಲಿ ಅಡಗಿಸಿಕೊಂಡಿದೆ. ನಿಸರ್ಗದ ಸಹಜ ಕ್ರಿಯೆಗಳಾದ ಹರಿಯುವ ನೀರು, ಪಕ್ಷಿಗಳ ಕೂಗು ಮುಂತಾದವುಗಳನ್ನು ಅನುಕರಿಸುವುದರ ಮೂಲಕವಾಗಿ ಮಾನವ ಹಾಡಲು ಕಲಿತನು. ಪ್ರಪ್ರಥಮ ಬಾರಿಗೆ ಬರಿಯ ಧ್ವನಿಯ ಮೂಲಕ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದು, ನಂತರ ನಾದದ ಮೂಲಕ ವ್ಯಕ್ತಪಡಿಸಲಾರಂಭಿಸಿದನು.

References

ಸಾರಂಗದೇವ. ಸತ್ಯನಾರಾಯಣ ಆರ್. (ಅನು). (೧೯೬೮) ಸಂಗೀತ ರತ್ನಾಕರ. ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.

ಕುಕ್ಕಿಲ ಕೃಷ್ಣಭಟ್ಟ. (೧೯೭೧). ಭಾರತೀಯ ಸಂಗೀತಶಾಸ್ತ್ರ. ಡಿ.ವಿ.ಕೆ ಮೂರ್ತಿ ಪ್ರಕಾಶನ. ಮೈಸೂರು.

ಪಾಠಕ ಬಿ. ಡಿ. (೧೯೭೫). ಭಾರತೀಯ ಸಂಗೀತದ ಚರಿತ್ರೆ. ಕನ್ನಡ ಅಧ್ಯಯನ ಪೀಠ, ಪಠ್ಯ ಪುಸ್ತಕ ನಿರ್ದೇಶನಾಲಯ, ಕರ್ನಾಟಕ ವಿಶ್ವವಿದ್ಯಾಲಯ. ಧಾರವಾಡ.

ಪಾಟೀಲ ಎ. ಯು. (೧೯೭೯). ಸಂಗೀತ ಶಾಸ್ತ್ರದರ್ಪಣ ಭಾಗ-೧. ಕನ್ನಡ ಅಧ್ಯಯನ ಪೀಠ, ಪಠ್ಯ ಪುಸ್ತಕ ನಿರ್ದೇಶನಾಲಯ, ಕರ್ನಾಟಕ ವಿಶ್ವವಿದ್ಯಾಲಯ. ಧಾರವಾಡ.

ಆದ್ಯ ರಂಗಾಚಾರ್ಯ (ಅನು). (೧೯೮೪). ನಾಟ್ಯಶಾಸ್ತ್ರ. ಅಕ್ಷರ ಪ್ರಕಾಶನ. ಸಾಗರ.

ಸತ್ಯನಾರಾಯಣ ರಾ. (೧೯೯೮), ಮತಂಗಮುನಿ ವಿರಚಿತ ಬೃಹದ್ದೇಶೀ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.

ಲಕ್ಷ್ಮೀನಾರಾಯಣ ಗರ್ಗ್ (ಸಂ). (೨೦೦೯). ಹಿಂದುಸ್ತಾನಿ ಸಂಗೀತ ಪದ್ಧತಿ. ಕ್ರಮಿಕ ಪುಸ್ತಕ ಮಾಲಿಕಾ ಭಾಗ ೧-೫. ಸಂಗೀತ ಕಾರ್ಯಾಲಯ. ಹಾಥರಸ್.

ಭಾರತಿ ಶರ್ಮಾ. (೨೦೧೦). ಹಿಂದುಸ್ತಾನಿ ಸಂಗೀತ ಮೇ ಶುದ್ಧ ಛಾಯಾಲಗ ಏವಂ ಸಂಕೀರ್ಣ ರಾಗೋಂಕಿ ಅವಧಾರಣಾ. ಸಂಜಯ ಪ್ರಕಾಶನ. ಡೆಲ್ಲಿ.

ಅರಣ್ಯಕುಮಾರ ಮುನೆನ್ನಿ. (೨೦೧೪). ಹಿಂದೂಸ್ತಾನಿ ಸಮಯರಾಗ ಪರಿಚಯ. ದಿ ಮ್ಯೂಜಿಸಿಯನ್ ಹೋಮ್. ಧಾರವಾಡ.

ಹನುಮಣ್ಣನಾಯಕ ದೊರೆ. (೨೦೧೬). ರಾಗದೀಪಿಕೆ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.

ಕರ್ತಿಕ್ ಎಸ್. (೨೦೧೮). ಸಂಗೀತ ಶಾಸ್ತ್ರಗ್ರಂಥ ಚಂದ್ರಿಕೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ. ಬೆಂಗಳೂರು.

ನಿಧಿ ಜೋಷಿ ಪಾಠಕ್. (೨೦೧೮). ರಾಗಧಾರಿ ಸಂಗೀತ ಮೇ ವಿಭಿನ್ನ ಬಂದೀಶೋಂಕಾ ಸೌಂದರ್ಯಾತ್ಮಕ ವಿಶ್ಲೇಷಣ್. ಸಂಜಯ ಪ್ರಕಾಶನ. ಡೆಲ್ಲಿ.

ವಿಷ್ಣು ನಾರಾಯಣ ಭಾತಖಂಡೆ (ಮೂಲ ಲೇಖಕರು). ಹರಿಶ್ಚಂದ್ರ ಶ್ರೀವಾತ್ಸವ (ಸಂ). (೨೦೨೨). ಕ್ರಮಿಕ ಪುಸ್ತಕ ಮಾಲಿಕಾ ಭಾಗ ೧-೬. ಸಂಗೀತ ಸದನ ಪ್ರಕಾಶನ. ಅಲಹಾಬಾದ್.

ಸರಿತಾ ನಿಗಮ್. (೨೦೧೨). ಹಿಂದುಸ್ತಾನಿ ಸಂಗೀತ ಮೇ ರಾಗ ವರ್ಗೀಕರಣ. ಕನಿಷ್ಠ ಪಬ್ಲಿಷರ್ಸ್ ಡಿಸ್ಟ್ರಿಬ್ಯೂಟರ್ಸ್. ಡಲ್ಲಿ.

Downloads

Published

09.05.2024

How to Cite

ತಿಮ್ಮಣ್ಣ ಭೀಮರಾಯ. (2024). ಸಂಗೀತದ ಹುಟ್ಟು ಮತ್ತು ಬೆಳವಣಿಗೆ. AKSHARASURYA, 4(01), 61 to 72. Retrieved from https://aksharasurya.com/index.php/latest/article/view/408

Issue

Section

ಸಂಶೋಧನಾ ಲೇಖನಗಳು. | RESEARCH ARTICLE.