ಶಿರಹಟ್ಟಿ ವೆಂಕೋಬರಾಯರ ಕನಸಿನ ಮಂಡಳಿ

Authors

  • ಅನಂತಕುಮಾರ ಸಂಶೋಧನಾ ವಿದ್ಯಾರ್ಥಿ, ಪ್ರದರ್ಶನ ಕಲಾ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.
  • ನಾಗೇಶ್ ವಿ. ಬೆಟ್ಟಕೋಟೆ ಪ್ರಾಧ್ಯಾಪಕರು, ಪ್ರದರ್ಶನ ಕಲಾ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

Keywords:

ಕಲ್ಯಾಣ ಕರ್ನಾಟಕ, ರಂಗಭೂಮಿ, ವೆಂಕೋಬರಾಯರ, ಸಂಸ್ಕೃತಿ, ಮಹಾಲಕ್ಷ್ಮೀ ಪ್ರಸಾದಿತ ಸಂಗೀತ ನಾಟಕ ಮಂಡಳಿ, ವೃತ್ತಿರಂಗಭೂಮಿ

Abstract

ರಂಗಭೂಮಿಯು ಎಲ್ಲರನ್ನೂ ಒಂದುಗೂಡಿಸುವ ವಿಶೇಷವಾದ ಗುಣ-ಹೊಂದಿರುವ ಮಾಧ್ಯಮವಾಗಿದೆ. ನಾಟಕಗಳು ಇಂದು ಸಮಾಜದ ವಿವಿದ ಕ್ಷೇತ್ರಗಳಲ್ಲಿ ಅರಿವು ವಿಸ್ತರಿಸುವ ತರಬೇತಿ ನೀಡುವ ಮಾಧ್ಯಮವಾಗಿದೆ. ಕನ್ನಡ ವೃತ್ತಿ ರಂಗಭೂಮಿಯಲ್ಲಿ ವಿಜೃಂಭಣೆಯಿಂದ ಮೆರೆದ ರಂಗಭೂಮಿಯ ರಂಗ ಚಟುವಟಿಕೆಗಳ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವುದು, ಅನೇಕ ರಂಗ ಕಲಾವಿದರ, ರಂಗ ಸಂಶೋಧಕರ, ರಂಗಕರ್ಮಿಗಳ ಕೈಯಲ್ಲಿದೆ. ಈ ನಮ್ಮ ಕನ್ನಡ ರಂಗಭೂಮಿಯಲ್ಲಿ ಅನೇಕ ಕಲಾವಿದರು ಎಲೆ ಮರಿ ಕಾಯಿಯ ಹಾಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡು ರಂಗಭೂಮಿನೇ ನನ್ನ ಉಸಿರು ಅಂತ ಬದುಕ್ತಾ ಇರೋರು ಸಾಕಷ್ಡು ಜನ ರಂಗಭೂಮಿಗಾಗಿ ತಮ್ಮ ಜೀವನವನ್ನೇ ಸವಿಸಿದಂತವರು ಇದ್ದಾರೆ ಎಂಬುದನ್ನು ತಿಳಿಸುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ.

ಪರಂಪರಾಗತವಾದ ಧಾರ್ಮಿಕ ಆಚರಣೆಗಳ ಮೂಲಕ ಹುಟ್ಟಿದ ಎಷ್ಟೋ ಜನಪದ ಕಲೆಗಳು, ಕನ್ನಡ ಅಭಿಮಾನದಿಂದ ಹುಟ್ಟಿದ ಎಷ್ಟೋ ನಾಟಕ ಕಂಪನಿಗಳು, ರಂಗಾಭಿವೃಚಿಯಿಂದ ಹುಟ್ಟಿದ ಎಷ್ಟೋ ಹವ್ಯಾಸಿ ತಂಡಗಳು ಇನ್ನೂ ತಮ್ಮದೇ ಆದ ವಿಶಿಷ್ಟ ಕಲೆಯ ಮೂಲಕ ಉಳಿಸಿ ಬೆಳೆಸಿಕೊಂಡು ಬಂದಿರುವುದು ಈ ಲೇಖನದಿಂದ ತಿಳಿದು ಬರುತ್ತದೆ. ಪ್ರಮುಖವಾಗಿ ಈ (ಹೈ.ಕ) ಕಲ್ಯಾಣ ಕರ್ನಾಟಕವು ಎಲ್ಲಾ ಕ್ಷೇತ್ರಗಳಲ್ಲಿ ಹಿಂದೆ ಉಳಿದಿರುವುದು ನಮಗೆ ತಿಳಿದಿದೆ. ಹಿಂದುಳಿದ ಪ್ರದೇಶವೆಂದೇ ಹೆಸರುವಾಸಿಯಾಗಿದೆ. ಕಾರಣ ನಿಜಾಮರ ಆಳ್ವಿಕೆ, ಉರ್ದು, ಮರಾಠಿಯ ಹೇರಿಕೆ ಎಂದೇ ಹೇಳಬಹುದು. ನಂಜುಂಡಪ್ಪನವರ ವರದಿಯ ಪ್ರಕಾರ ಎಲ್ಲಾ ಪ್ರದೇಶಗಳು ಎಲ್ಲಾ ಭಾಗದಲ್ಲೂ ಹಿಂದುಳಿದಿರುವುದು ದೃಢಪಟ್ಟಿದೆ. ಅದರಲ್ಲೂ ಕೊಪ್ಪಳ ಜಿಲ್ಲೆಯ ಅತಿ ಹಿಂದುಳಿದ ಪ್ರದೇಶವೆಂದು ಕರೆಸಿಕೊಂಡಿದೆ. ಉಳಿದ ಜಿಲ್ಲೆಗಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯಗಳು ಅದರದೇ ಆದ ಭವ್ಯ ಪರಂಪರೆಯ ಇತಿಹಾಸವನ್ನು ಹೊಂದಿರುವಂತೆ ಈ ಕೊಪ್ಪಳ ಜಿಲ್ಲೆಯಲ್ಲಿ ಅದರದ್ದೇ ಆದ ವೈಶಿಷ್ಟಪೂರ್ಣ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಂಪ್ರದಾಯಗಳ ಪರಂಪರೆ ಅಗಾಧವಾಗಿರುವುದು ಕಂಡುಬರುತ್ತದೆ. ರಾಜಕೀಯವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಪ್ರದೇಶವಾಗಿರಬಹುದು ಆದರೆ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಂಪ್ರದಾಯಗಳಲ್ಲಿ ಶ್ರೀಮಂತಿಕೆಯನ್ನು ಮೆರೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಎಲ್ಲವನ್ನೂ ವಿವರವಾಗಿ ದಾಖಲಿಸುವುದು ಅಗತ್ಯವಿದೆ. ಈ ಲೇಖನವು ಕಲ್ಯಾಣ ಕರ್ನಾಟಕ ಭಾಗದ ಮೊದಲ ವೃತ್ತಿ ಕಂಪನಿಯಾದ ಶಿರಹಟ್ಟಿ ವೆಂಕೋಬರಾಯರ ಶ್ರೀ ಮಹಾಲಕ್ಷ್ಮೀ ಪ್ರಸಾದಿತ ಸಂಗೀತ ನಾಟಕ ಮಂಡಳಿಯ ಕುರಿತಾಗಿ ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸಲಾಗಿದೆ.

ಶ್ರೀ ಮಹಾಲಕ್ಷ್ಮೀ ಪ್ರಸಾದಿತ ಸಂಗೀತ ನಾಟಕ ಮಂಡಳಿಯು ೧೯೦೩ ರಲ್ಲಿ ಸ್ಥಾಪಿತವಾಗಿ ತನ್ನ ರಂಗ ಮೋಹಕದಿಂದ ಹಲವಾರು ರಂಗನಟರ ಹುಟ್ಟಿಗೆ ಕಾರಣವಾಯಿತು. ಇದರ ಇತಿಹಾಸ ಬಹಳ ವಿಶಿಷ್ಟವಾದದ್ದು. ಕೊಪ್ಪಳ ಜಿಲ್ಲೆಯ ಮೊದಲ ನಾಟಕ ಕಂಪನಿ ಎಂಬುದು ನಮಗೆ ಹೆಮ್ಮೆಯ ಸಂಗತಿ. ಶಿರಹಟ್ಟಿಯ ಸುತ್ತಮುತ್ತಲ್ಲಿನ ಹಳ್ಳಿ ಪ್ರತಿಬೆಗಳನ್ನು ರಂಗಾಸಕ್ತ ಯುವಕರನ್ನು ಗುರುತಿಸಿ ರಂಗಮುಖ್ಯೆನ ರಂಗಶಿಸ್ತು ಭದ್ದತೆಯನ್ನು ತರಬೇತಿ ನೀಡಿ ಅವರನ್ನು ತಮ್ಮ ಕಂಪನಿಗೆ ಸೆರಿಸಿಕೊಂಡು ಪ್ರಸಿದ್ದ ರಂಗ ಕಲಾವಿದರನ್ನಾಗಿ ಬೆಳೆಸಿದ ಕೀರ್ತಿ ರಾಯರಿಗೆ ಸಲ್ಲುತ್ತಿದೆ. ಈ ಕಂಪನಿಯಲ್ಲಿ ಅನೇಕ ಪ್ರಸಿದ್ಧ ಕಲಾವಿದರು ಶ್ರಮಿಸಿದ್ದಾರೆ. ವೆಂಕೋಬರಾಯರ ಸಾಹಸವನ್ನು ಮೆಚ್ಚಲೇಬೇಕು. ಶಿರಹಟ್ಟಿ ವೆಂಕೋಬರಾವ್ ಅವರು ಸ್ವತಃ ಪ್ರತಿಭಾವಂತ ನಟರಾಗಿದ್ದರು. ಕನ್ನಡ ರಂಗಭೂಮಿಯಲ್ಲಿ ಗದ್ಯ ನಾಟಕದ ಮೂಲಕ ತಮ್ಮ ಅದ್ಭುತ ನಟನೆಯೊಂದಿಗೆ ವಾಮನರಾವ್ ಅವರ ಸಂಗೀತ ಸಾಧನೆಗಳನ್ನೂ ಅವರು ಹೆಚ್ಚಾಗಿ ಮೀರಿಸಿದರು. ಉತ್ತಮ ಕಲಾವಿದರ ತಂಡವೇ ಅವರ ಆಸ್ತಿ. ಶಿರಹಟ್ಟಿಯವರು ನಿರ್ವಹಿಸಿದ ನಾರದನ ಪಾತ್ರ, ಲಕ್ಷ್ಮಣಪುರಿಯ ಹಾಸ್ಯ, ಅಸುಂಡಿಯವರ ಅಂತ್ಯವಿಲ್ಲದ ಸಂಗೀತ ವಿಸ್ಮಯ ಮತ್ತು ಹೊಂಬಳ ವಾಸುದೇವರಾಯರ ಆಲಾಪ್ ಪ್ರೇಕ್ಷಕರ ಉತ್ಸಾಹದ ಮೆಚ್ಚುಗೆಯನ್ನು ಉಂಟುಮಾಡುವಲ್ಲಿ ವಿಫಲವಾಗಲಿಲ್ಲ. ಅಂದಿನ ಕಾಲದಲ್ಲಿಯೇ ಹೆಚ್ಚು ಹಣವನ್ನು ಖರ್ಚು ಮಾಡಿ ವೇಷ ಭೂಷಣಗಳನ್ನು, ಪರಿಕರಗಳನ್ನು, ರಂಗ ಸಜ್ಜಿಕೆಯನ್ನು ಹೊಂದಿದ್ದರು. ಇವರ ಕಂಪನಿ ಕರ್ನಾಟಕದಲ್ಲಿ ಮಾತ್ರವಲ್ಲದೆ ನೆರೆರಾಜ್ಯಗಳಲ್ಲೂ ಜನಪ್ರಿಯವಾಗಿತ್ತು. ಸಾಂಗ್ಲಿಯ ಸಂಸ್ಥಾನದವರು ಈ ಕಂಪನಿಯನ್ನು ಆಹ್ವಾನಿಸಿ ತಮ್ಮ ಸಂಸ್ಥಾನದಲ್ಲಿ ನಾಟಕವನ್ನು ಪ್ರದರ್ಶಿಸಿದರು. ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಿ ಪ್ರದರ್ಶನವನ್ನು ನೀಡುವ ಅವರ ಸಾಹಸ ಕಂಪನಿಯ ಕಾರ್ಯವೈಖರಿಯ ಕುರಿತು ಈ ಲೇಖನವು ಸ್ಪಷ್ಟ ಪಡಿಸುತ್ತದೆ.

ಆ ಕಾಲದ ಪ್ರಸಿದ್ಧ ಕಂಪನಿಗಳಾದ ಗುಬ್ಬಿ ಕಂಪನಿ, ಕೊಣ್ಣೂರು ಕಂಪನಿಗಳು, ವೆಂಕೋಬರಾಯರ ಕಂಪನಿಯೇ ಜನಪ್ರಸಿದ್ಧ ಕಂಪನಿಯಾಗಿತ್ತು ಎಂದು ತಿಳಿಯುವುದರಲ್ಲಿ ಹೆಮ್ಮೆಯೆನಿಸುತ್ತದೆ. ಯಾಕೆಂದರೆ ಇವರ ಕಂಪನಿಯಲ್ಲಿ ಇದ್ದ ಸಾಮಾನುಗಳು ರಂಗಪರಿಕರಗಳು, ವೇಷಭೂಷಣಗಳು, ಯಾವ ವೃತ್ತಿ ಕಂಪನಿಗಳಲ್ಲಿ ಇರಲೇ ಇಲ್ಲ. ಎಷ್ಟೋ ವರ್ಷಗಳ ಕಾಲ ಪ್ರೇಕ್ಷಕರ ಅಭಿವೃಚಿಯಂತೆ ನಾಟಕಗಳನ್ನು ಪ್ರದರ್ಶಿಸಿ ಜನರನ್ನು ರಂಜಿಸಿ ಜನಪ್ರೀಯವಾದ ಕಂಪನಿಯೆಂದು ಕಲ್ಯಾಣ ಕರ್ನಾಟಕ ಪ್ರದೇಶದ ಕೊಪ್ಪಳಕ್ಕೆ ಕೀರ್ತಿಯನ್ನು ತಂದುಕೊಟ್ಟ ಮೊದಲ ಕಂಪನಿಯಾಗಿದೆ. ವೆಂಕೋಬರಾಯರು ಚಿಕ್ಕ ವಯಸ್ಸಿನಲ್ಲೇ ಅಂದರೆ ೧೯೩೮ ರಲ್ಲಿ ನಿಧನರಾದರು. ಅವರು ದೈವಾದೀನರಾದ ಬಳಿಕ ಕಂಪನಿಯನ್ನು ಮುಂದುವರಿಸಲು ವಾರಸುದಾರರಿಲ್ಲದೆ ಅನಾಥವಾಗಿ ಅಂತ್ಯವಾಗಿರುವುದನ್ನು ಕಾಣಬಹುದು. ಈ ಲೇಖನವನ್ನು ಮಾಧ್ಯಮಿಕ ಮಾಹಿತಿ, ಪುಸ್ತಕಗಳು, ಪತ್ರಿಕಾ ಪ್ರಕಟಣೆಗಳ ಹಾಗೂ ಅಂತರ್ಜಾಲದ ಮುಖಾಂತರ ಆಯ್ದುಕೊಳ್ಳುಲಾಗಿದೆ.

References

ಮರುಳಸಿದ್ದಪ್ಪ ಕೆ. (೨೦೧೩). ಆಧುನಿಕ ಕನ್ನಡ ನಾಟಕ. ಅಂಕಿತ ಪುಸ್ತಕ ಪ್ರಕಾಶನ. ಬೆಂಗಳೂರು.

ಸಬರದ ಬಸವರಾಜ. (೨೦೧೭). ಹೈದ್ರಾಬಾದ್ ಕರ್ನಾಟಕದ ರಂಗಭೂಮಿ. ಪಲ್ಲವಿ ಪ್ರಕಾಶನ. ಕಲಬುರ್ಗಿ.

ಕಟಕೆ ಅಮೃತ. (೨೦೦೨). ಹೈದ್ರಾಬಾದ್ ಕರ್ನಾಟಕದ ನಾಟಕ ಸಾಹಿತ್ಯ ಒಂದು ಅಧ್ಯಯನ. ಯಮುನಾ ಪ್ರಕಾಶನ. ಗುಲಬರ್ಗಾ.

ಗೋರಂಟ್ಲಿ ವಿಠ್ಠಪ್ಪ. (೨೦೧೭). ಕೊಪ್ಪಳ ಜಿಲ್ಲಾ ರಂಗಮಾಹಿತಿ. ಕರ್ನಾಟಕ ನಾಟಕ ಅಕಾಡೆಮಿ. ಬೆಂಗಳೂರು.

ಸ್ವಾಮಿರಾವ್ ಕುಲಕರ್ಣಿ. (೨೦೧೬). ಕಲಬುರಗಿ ಜಿಲ್ಲಾ ರಂಗಮಾಹಿತಿ. ಕರ್ನಾಟಕ ನಾಟಕ ಅಕಾಡೆಮಿ. ಬೆಂಗಳೂರು.

ಕುಮಾರ ಡಿ. ಎಸ್. (೨೦೧೭). ಯಾದಗಿರಿ ಜಿಲ್ಲಾ ರಂಗಮಾಹಿತಿ. ಕರ್ನಾಟಕ ನಾಟಕ ಅಕಾಡೆಮಿ. ಬೆಂಗಳೂರು

ಈಚನಾಳ ಖಾಜಾವಲಿ. (೨೦೧೭). ರಾಯಚೂರು ಜಿಲ್ಲಾ ರಂಗಮಾಹಿತಿ. ಕರ್ನಾಟಕ ನಾಟಕ ಅಕಾಡೆಮಿ. ಬೆಂಗಳೂರು.

Downloads

Published

09.05.2024

How to Cite

ಅನಂತಕುಮಾರ, & ನಾಗೇಶ್ ವಿ. ಬೆಟ್ಟಕೋಟೆ. (2024). ಶಿರಹಟ್ಟಿ ವೆಂಕೋಬರಾಯರ ಕನಸಿನ ಮಂಡಳಿ. AKSHARASURYA, 4(01), 52 to 60. Retrieved from https://aksharasurya.com/index.php/latest/article/view/407

Issue

Section

ಸಂಶೋಧನಾ ಲೇಖನಗಳು. | RESEARCH ARTICLE.