ದಲಿತ ಬಂಡಾಯ ಸಾಹಿತ್ಯದ ಸ್ವರೂಪ - ಧೋರಣೆ ಮತ್ತು ಲಕ್ಷಣಗಳು
Main Article Content
Abstract
1970ರ ದಶಕದಲ್ಲಿ ಕನ್ನಡ ಸಾಹಿತ್ಯದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ದಲಿತ ಮತ್ತು ಬಂಡಾಯ ಸಾಹಿತ್ಯ ಚಳುವಳಿಗಳ ಉಗಮ, ಸ್ವರೂಪ ಮತ್ತು ಧೋರಣೆಗಳನ್ನು ವಿಶ್ಲೇಷಿಸುತ್ತದೆ. ಶತಮಾನಗಳ ಶೋಷಣೆ, ಅಂಬೇಡ್ಕರ್ ಮತ್ತು ಮಾರ್ಕ್ಸ್ ವಾದಿ ಚಿಂತನೆಗಳು ಹಾಗೂ ಜಾಗತಿಕ ಮಟ್ಟದ ಕಪ್ಪು ಜನರ ಹೋರಾಟಗಳು ಈ ಸಾಹಿತ್ಯಕ್ಕೆ ಹೇಗೆ ಪ್ರೇರಣೆಯಾದವು ಎಂಬುದನ್ನು ಚರ್ಚಿಸಲಾಗಿದೆ. ನವ್ಯ ಕಾವ್ಯಕ್ಕೆ ಪ್ರತಿಕ್ರಿಯೆಯಾಗಿ ಹುಟ್ಟಿದ ಈ ಸಾಹಿತ್ಯವು, ಶಿಷ್ಟ ಭಾಷೆಯನ್ನು ಧಿಕ್ಕರಿಸಿ ಜನಪದ ಮತ್ತು ತಳಸಮುದಾಯದ ಭಾಷೆಯ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹೇಗೆ ದನಿಯೆತ್ತಿತು ಎಂಬುದನ್ನು ವಿವರಿಸಲಾಗಿದೆ. 1979ರ ಬಂಡಾಯ ಸಾಹಿತ್ಯ ಸಂಘಟನೆಯ ಸ್ಥಾಪನೆ, 'ಖಡ್ಗವಾಗಲಿ ಕಾವ್ಯ' ಎಂಬ ಆಶಯ ಮತ್ತು ದಲಿತ, ಮುಸ್ಲಿಂ ಹಾಗೂ ಸ್ತ್ರೀ ಸಂವೇದನೆಗಳನ್ನು ಒಳಗೊಳ್ಳುವ ಮೂಲಕ ಈ ಚಳುವಳಿ ಕನ್ನಡ ಸಾಹಿತ್ಯವನ್ನು ಹೇಗೆ ಜನಪರವಾಗಿಸಿತು ಎಂಬುದನ್ನು ಈ ಅಧ್ಯಯನವು ನಿರೂಪಿಸುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಅರವಿಂದ ಮಾಲಗತ್ತಿ, (1994), ಕನ್ನಡ ಕಾವ್ಯದಲ್ಲಿ ದಲಿತ ಧ್ವನಿಗಳು, ಮೈಸೂರು: ವಿಚಾರವಾದಿ ಪ್ರಕಾಶನ.
ಶಿವರುದ್ರಪ್ಪ ಜಿ.ಎಸ್. (ಸಂ), (1989), ಕನ್ನಡ ಸಾಹಿತ್ಯ ಮತ್ತು ಪ್ರತಿಭಟನೆ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.
ಲೋಕಾಪುರ ಎಸ್.ಎಂ., (1999), ಕನ್ನಡ ದಲಿತ ಕಾವ್ಯ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.
ಜಗದೀಶ್ ಬಾಬು ಬಿ.ವಿ., (2009), ಪ್ರಾಚೀನ ಮತ್ತು ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಬಂಡಾಯ ಮನೋಧರ್ಮ: ಒಂದು ಅಧ್ಯಯನ, ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ.
ಮೊಗಳ್ಳಿ ಗಣೇಶ್, (2002), ದಲಿತ ಚಿಂತನೆ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ದೇವಯ್ಯ ಹರವೆ, (1991), ದಲಿತ ಸಾಹಿತ್ಯ ಮತ್ತು ಇತರ ಲೇಖನಗಳು, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
ಜವರಯ್ಯ ಮ.ನ., (1994), ಪರಂಪರೆ ಹಾಗೂ ದಲಿತ ಬಂಡಾಯ ಸಾಹಿತ್ಯ, ಮೈಸೂರು: ಸಿದ್ಧಾರ್ಥ ಗ್ರಂಥಮಾಲೆ.
ಬರಗೂರು ರಾಮಚಂದ್ರಪ್ಪ, (1991), ಬಂಡಾಯ ಸಾಹಿತ್ಯ ಮೀಮಾಂಸೆ, ಬೆಂಗಳೂರು: ಅನ್ವೇಷಣೆ ಪ್ರಕಾಶನ.
ಬಸವರಾಜ ಸಬರದ, (1992), ಬಂಡಾಯ ಸಾಹಿತ್ಯ ಮೀಮಾಂಸೆ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ಪುರುಷೋತ್ತಮ ಬಿಳಿಮಲೆ, (1990), ಬಂಡಾಯ-ದಲಿತ ಸಾಹಿತ್ಯ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.