‘ಕರ್ವಾಲೊ’-ಕಾದಂಬರಿ ಒಂದು ತಾತ್ವಿಕತೆಯ ಓದು

Authors

  • ಪ್ರಕಾಶ ಬಿ. ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

Keywords:

ಸ್ಥಾಯಿಭಿತ್ತಿ, ಪ್ರಜ್ಞೆ, ಜೀವವಿಕಾಸ, ವೈಜ್ಞಾನಿಕ ಸತ್ಯ, ವಿಜ್ಞಾನ-ಪ್ರಕೃತಿ, ಹಾರುವ ಓತಿ, ಕರ್ವಾಲೋ, ಮಂದಣ್ಣ

Abstract

‘ಕರ್ವಾಲೊ’ ಕಾದಂಬರಿ ಬದುಕಿನ ಮೂಲ ದ್ರವ್ಯಕ್ಕೆ-ಅವುಗಳ ಪ್ರತ್ಯೇಕ ಸ್ಥಿತಿಯಲ್ಲಿ ಇದ್ದಿರಬಹುದಾದ ಅಥವಾ ಇದ್ದಂತೆ ಕಾಣಿಸುವ ಮೂರ್ತ ಅರ್ಥದೊಂದಿಗೆ ಕರಗಿಕೊಂಡು ಅಂತಿಮವಾಗಿ ಅಮೂರ್ತ ಅಥವಾ ನಿಗೂಢ ಅರ್ಥ ಪರಂಪರೆಗಳನ್ನು ಅನುರಣಿಸುವಂತೆ ಮಾಡುವ ಹೊಂಚು ತೇಜಸ್ವಿಯವರ ಈ ಕೃತಿಯಲ್ಲಿ ಇದೆ. ಕರಾರುವಾಕ್ಕಾದ ಶಾಸ್ತ್ರಜ್ಞಾನದ ಆನ್ವೇಷಣೆಗಾಗಿ ಅಲ್ಲ, ಸತ್ಯಾನುಭವದ ಅರಸುವಿಕೆಗಾಗಿ ಎಂಬುದು ಗಮನಾರ್ಹ. ನೀರಸ ವಸ್ತುವಿನಂತೆ ಜನ ಸಾಮಾನ್ಯರಿಂದ ದೂರ ಉಳಿದು ಬಿಡುವ ವೈಜ್ಞಾನಿಕ ಸತ್ಯಗಳು ಈ ಕಾದಂಬರಿಯಲ್ಲಿ ವಿಜ್ಞಾನದ ಅನೇಕ ವರ್ಷಗಳ ಸಾಧನೆಯನ್ನು ತಟಕ್ಕನೆ ಏರುಪೇರು ಮಾಡಬಲ್ಲ ಶಕ್ತಿಯನ್ನು, ರಹಸ್ಯಗಳನ್ನು ಸಂಗತಿಗಳನ್ನು ಪಡೆದುಕೊಂಡಿರುವ ಜೀವಚರ. ಇದು ನಮ್ಮ ಪ್ರಜ್ಞೆ; ನಮ್ಮ ಕುತೂಹಲ; ನಮ್ಮ ದಿಗ್ಭ್ರಮೆಯೂ ಹೌದು; ನಮ್ಮ ತಿಳುವಳಿಕೆಯ ದಿಕ್‌ಸೂಚಿಯೂ ಹೌದು. ನಮ್ಮನ್ನು ಒಂದೇ ಜಿಗಿತಕ್ಕೆ ಕೋಟ್ಯಂತರ ವರುಷಗಳ ಹಿಂದಕ್ಕೆ ಒಯ್ಯುವ ಸಾಧನವೂ ಹೌದು. ಜೀವ ವಿಕಾಸದ ಹಾದಿಯಲ್ಲಿನ ಅನೇಕ ಸಂಗತಿಗಳನ್ನು ಬಿಚ್ಚುವ ಕಾಲಕೋಶವೂ ಹೌದು. ಅದು ನಮ್ಮ ವಿಜ್ಞಾನ; ನಮ್ಮ ಆಧ್ಯಾತ್ಮ ಕೂಡಾ. ಕುತೂಹಲವಾಗಿ ಕಾಣಿಸಿಕೊಂಡು ಬಿಡಿಸಲಾಗದ ನಿಗೂಢವಾಗಿ ಸಂಕೇತವಾಗುತ್ತ ಪ್ರತಿಮೆಯಾಗುತ್ತ ನಮ್ಮ ಪ್ರಜ್ಞೆಯೇ ಆಗುತ್ತ ನಮ್ಮ ವ್ಯಕ್ತಿತ್ವವನ್ನೇ ಆವರಿಸಿಬಿಡುವ, ನಿಯಂತ್ರಿಸಿ ಬಿಡುವ ಈ ಹಾರುವ ಓತಿ ಹೌದು,

References

ತೇಜಸ್ವಿ. (1992). ಕರ್ವಾಲೋ. ಪುಸ್ತಕ ಪ್ರಕಾಸನ. ಮೈಸೂರು.

ಶಾರದಾ ಬಿ. ಎನ್. (ಸಂ). (2004). ಸಮಾಜವಾದವೇ ಪರ್ಯಾಯ. ಸಂಬುದ್ಧ ಪ್ರಕಾಶನ. ಬೆಂಗಳೂರು.

ಪೂರ್ಣಚಂದ್ರ ತೇಜಸ್ವಿ. (1996). ಅಣ್ಣನ ನೆನಪು. ಪುಸ್ತಕ ಪ್ರಕಾಶನ. ಮೈಸೂರು.

ನಟರಾಜ್ ಹುಳಿಯಾರ್ (ಸಂ). (2019). ಸಮಕಾಲೀನ ಲೋಹಿಯಾ: ರಾಮಮನೋಹರ ಲೋಹಿಯಾ ವಾಚಿಕೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ. ಬೆಂಗಳೂರು.

ಲಕ್ಷ್ಮೀನಾರಾಯಣ ಅರೋರಾ. (2008). ಕಾದಂಬರಿಗಳ ವಿಮರ್ಶೆ. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.

ಕೇಶವ ಶರ್ಮ ಕೆ. (1990). ನವೋದಯ ವಿಮರ್ಶೆ ತಾತ್ವಿಕ ನಿಲುವುಗಳು. ಜನವಾದಿ ಪ್ರಕಾಶನ. ಬೆಂಗಳೂರು.

ನಾಯಕ ಜಿ. ಹೆಚ್. (1984). ನಿರಪೇಕ್ಷ (ಸಾಹಿತ್ಯ ವಿಮರ್ಶೆ). ಅಕ್ಷರ ಪ್ರಕಾಶನ. ಸಾಗರ.

ನಾಯಕ ಜಿ. ಹೆಚ್. (1980). ಅನಿವಾರ್ಯ. ಅಕ್ಷರ ಪ್ರಕಾಶನ. ಸಾಗರ.

Downloads

Published

07.05.2024

How to Cite

ಪ್ರಕಾಶ ಬಿ. (2024). ‘ಕರ್ವಾಲೊ’-ಕಾದಂಬರಿ ಒಂದು ತಾತ್ವಿಕತೆಯ ಓದು. AKSHARASURYA, 3(06), 110 to 116. Retrieved from https://aksharasurya.com/index.php/latest/article/view/395

Issue

Section

ಪುಸ್ತಕ ವಿಮರ್ಶೆ. | BOOK REVIEW.