ಮಹಿಳಾ ಸಬಲೀಕರಣ ಮತ್ತು ವೈಷ್ಣವ ಧರ್ಮ

Authors

  • PAVITHRA C. S.

Keywords:

ವೈಷ್ಣವಧರ್ಮ, ಶ್ರೀವೈಷ್ಣವಧರ್ಮ, ರಾಮಾನುಜಾಚಾರ್ಯರು, ಮಾತೃದೇವತಾರಾಧನೆ, ಆಳ್ವಾರರು, ಮೋಕ್ಷ, ದೇವಾಲಯ

Abstract

ನನ್ನ ಸಂಶೋಧನಾ ಲೇಖನದಲ್ಲಿ ನಾನು “ಮಹಿಳಾ ಸಬಲೀಕರಣ ಮತ್ತು ವೈಷ್ಣವ ಧರ್ಮ” ಎಂಬ ವಿಷಯವನ್ನು ಕುರಿತು ಸಂಶೋಧನಾ ಪ್ರಬಂಧವನ್ನು ಮಂಡಿಸಲು ಪ್ರಯತ್ನಿಸಿರುತ್ತೇನೆ. ಈ ದಿಕ್ಕಿನಲ್ಲಿ ವೈಷ್ಣವ ಧರ್ಮ ಮಹಿಳಾ ಸಬಲೀಕರಣಕ್ಕೆ ಯಾವ ರೀತಿಯ ಕೊಡುಗೆ ನೀಡಿದೆ? ಮಹಿಳೆಯರ ಸ್ಥಾನಮಾನದ ಸುಧಾರಣೆಗೆ ವೈಷ್ಣವ ಧರ್ಮದ ಕೊಡುಗೆ ಏನು? ಎಂಬ ನಿಟ್ಟಿನಲ್ಲಿ ಈ ಕಿರು ಪ್ರಬಂಧವನ್ನು ಸಿದ್ಧಪಡಿಸಿರುತ್ತೇನೆ. ಭಾರತದ ದೇಶದಲ್ಲಿ ಮಹಿಳೆಗೆ ಮಹತ್ವದ ಸ್ಥಾನವಿದೆ ಅಲ್ಲದೆ ಸಾಂಸ್ಕೃತಿಕವಾಗಿ ಮಹಿಳೆಯ ಸ್ಥಾನಮಾನ ಮಹತ್ವಪೂರ್ಣವಾಗಿದೆ. “ಯತ್ರ ನಾರ್ಯಂತು ಪೂಜ್ಯಂತೆ ರಮಂತೆ ತತ್ರ ದೇವತಾ” [ಎಲ್ಲಿ ನಾರಿಯನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ] ಎಂದು ನಮ್ಮ ಪುರಾಣಗಳಲ್ಲಿ ಘೋಷಿಸಿವೆ. ಮಹಿಳೆ ಪುರುಷನಿಗೆ ಆಧಾರ ಸ್ಥಂಭದಂತಿದ್ದಳು. ಪುರುಷನ ಸರ್ವತೋಮುಖ ಅಭಿವೃದ್ಧಿಯಲ್ಲಿ ಜವಾಬ್ದಾರಿಯುತ ಕಾರ್ಯ ನಿರ್ವಹಿಸುತ್ತಾಳೆ. ಹಾಗಾಗಿ ಮಹಿಳೆಯರಿಗೆ ವೈಷ್ಣವ ಧರ್ಮ ಯಾವ ರೀತಿಯ ಸವಲತ್ತುಗಳನ್ನು ನೀಡಿದೆ ಎಂಬ ವಿಷಯವನ್ನು ಕುರಿತು ಇಲ್ಲಿ ವಿಶ್ಲೇಷಿಸಿರುತ್ತೇನೆ.

Downloads

Published

01.04.2024

How to Cite

PAVITHRA C. S. (2024). ಮಹಿಳಾ ಸಬಲೀಕರಣ ಮತ್ತು ವೈಷ್ಣವ ಧರ್ಮ. AKSHARASURYA, 3(04), 216 to 230. Retrieved from https://aksharasurya.com/index.php/latest/article/view/360