ಭೂರಹಿತ ದುಡಿಮೆಗಾರರು ಮತ್ತು ವಲಸೆಯ ಸ್ವರೂಪ

Authors

  • ALISAB

Keywords:

ಭೂರಹಿತರು, ವಲಸೆ, ಶಿಕ್ಷಣ, ಸ್ವಾತಂತ್ರ್ಯ, ವಂಚನೆ

Abstract

ಈ ಜಗತ್ತು ಸೃಷ್ಟಿಯಾದ ವರ್ಷಗಳಿಂದ ಮಾನವನು ಮತ್ತು ಪ್ರಾಣಿ ಸಂಕುಲಗಳು ತನ್ನ ಆಹಾರ ಜೀವನಕ್ಕಾಗಿ ಹವಾಮಾನ ವೈಪರಿತ್ಯಗಳಿಂದ ಒಂದು ಕಡೆ ನೆಲೆ ನಿಲ್ಲದೆ ಅನ್ನ, ನೀರು, ಹವಾಮಾನಕ್ಕಾಗಿ ಹುಡುಕಾಟ ನಡೆಸುತ್ತಲೇ ಬಂದಿದ್ದಾನೆ. ಆದಿ ಮಾನವನಿಂದ ಹಿಡಿದು ಇಂದಿನ ನವಯುಗದ ತನಕ ದೃಢವಾಗಿ ಒಂದು ಕಡೆ ನಿಂತು ನೆಲೆಕಂಡುಕೊಳ್ಳಲು ಪರದಾಡುತ್ತಿದ್ದಾನೆ. ‘ಹಡಗು ತುಂಬಿಸಲು ಹೋದವನು ಮರಳಿ ಬರಬಹುದು, ಆದರೆ ಹೊಟ್ಟೆ ತುಂಬಿಸಲು ಹೋದವನು ಮರಳಿ ಬಂದಿಲ್ಲ’ ಈ ಒಂದು ಉಕ್ತಿಯೂ ಇಂದಿನ ಜಗತ್ತಿನ ಎಲ್ಲಾ ಮಾನವರಿಗೆ ಮತ್ತು ಜೀವ ಸಂಕುಲವು ಉತ್ತಮ ಬದುಕಿಗಾಗಿ ನಿತ್ಯ ಹುಡುಕಾಟದ ಬವಣೆಯಾಗಿ ನಮ್ಮ ಮುಂದೆ ದೊಡ್ಡ ಸವಾಲಾಗಿ ನಿಂತಿದೆ. ಮನುಷ್ಯನಿಗೆ ನಾಗರಿಕತೆ ಅರಿವು ಮೂಡಿದಂತೆ ಒಂದು ಸೂಕ್ತವಾದ ಸ್ಥಳದಲ್ಲಿ ನೆಲೆಯೂರಲು ಪ್ರಯತ್ನಿಸಿದ. ತನಗೆ ನೀರು, ಆಹಾರ ದೊರೆಯುವ ಪ್ರದೇಶ ಮತ್ತು ಉಳುಮೆ ಮಾಡಲು ಯೋಗ್ಯವಾದ ಭೂಮಿ ಸಿಕ್ಕ ತಕ್ಷಣ ಅಲ್ಲಿ ವಾಸಿಸಲು ಶುರು ಮಾಡಿದನು. ಪ್ರಪಂಚದ ಎಲ್ಲಾ ನಾಗರಿಕತೆಗಳು ಹುಟ್ಟಿಕೊಂಡಿರುವುದು ಕೂಡ ನದಿಯ ದಡದಲ್ಲಿಯೆ. ಏಕೆಂದರೆ ಒಂದು ನಾಗರಿಕತೆ ಬೆಳೆಯಲು ನದಿಯೂ ಅತ್ಯಂತ ಸೂಕ್ತವಾದ ಮತ್ತು ಮೂಲಭೂತ ಸೌಲಭ್ಯವನ್ನು ಒದಗಿಸಿಕೊಡುತ್ತದೆ. ಈಜಿಪ್ಟ್ ನಾಗರಿಕತೆ, ಮೆಸಪೋಟೊಮಿಯ ನಾಗರಿಕತೆ, ಸಿಂಧೂ ನಾಗ ರಿಕತೆ ಹೀಗೆ ಹಲವಾರು ನಾಗರಿಕತೆಗಳನ್ನು ನಾವು ನೋಡಬಹುದಾಗಿದೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಲೇಖನವು ಭೂರಹಿತ ದುಡಿಮೆಗಾರರು ಮತ್ತು ವಲಸೆಯ ಸ್ವರೂಪವನ್ನು ಕುರಿತು ಚರ್ಚಿಸುತ್ತದೆ.

Downloads

Published

05.03.2024

How to Cite

ALISAB. (2024). ಭೂರಹಿತ ದುಡಿಮೆಗಾರರು ಮತ್ತು ವಲಸೆಯ ಸ್ವರೂಪ. AKSHARASURYA, 3(03), 131 to 140. Retrieved from https://aksharasurya.com/index.php/latest/article/view/335

Issue

Section

ಪ್ರಬಂಧ. | ESSAY.