ಜಾನಪದ ಸಾಹಿತ್ಯ ಮತ್ತು ಆಧುನಿಕತೆ

Main Article Content

ರೇಖಾಮಣಿ ಸಿ.ಎಂ.

Abstract

ಕರ್ನಾಟಕದ ಜಾನಪದ ಸಂಸ್ಕೃತಿಯು ಅತ್ಯಂತ ಶ್ರೀಮಂತವಾಗಿದ್ದು ಕಲೆ, ಸಾಹಿತ್ಯ, ನೃತ್ಯ, ನಾಟಕ ಮುಂತಾದ ವಿವಿಧ ಪ್ರಕಾರಗಳನ್ನು ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ವಿಶಾಲವಾದ ಜಾನಪದ ಸಾಹಿತ್ಯವನ್ನು ಕವಿಗಳು “ಜನವಾಣಿ ಬೇರು, ಕವಿವಾಣಿ ಹೂವು” ಎಂದು ಕರೆದಿದ್ದಾರೆ. ಜಾನಪದ ಸಾಹಿತ್ಯ ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು, ಕೌಟುಂಬಿಕ ಜೀವನವನ್ನು, ಸಂಬಂಧಗಳನ್ನು, ದೇವರುಗಳನ್ನು ಹಾಗೂ ಧಾರ್ಮಿಕ ಆಚರಣೆಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಈ ಜಾನಪದ ಸಾಹಿತ್ಯವನ್ನು ಸೃಷ್ಟಿಸಿದವರು ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ, ಇವು ಹಳ್ಳಿಯ ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಿರಿನುಡಿ ಎನ್ನಬಹುದು.
ಮೌಖಿಕ ಪರಂಪರೆಯ ಮೂಲಕ ತಲೆಮಾರಿನಿಂದ ತಲೆಮಾರಿಗೆ ಬಂದ ಸಾಹಿತ್ಯವು ಮೌಖಿಕವಾಗಿ ಬೆಳೆಯುತ್ತಾ ಬಂದಿದೆ. ಇದು ಮಾನವ ಹುಟ್ಟಿನೊಂದಿಗೆ ಹೆಣೆದುಕೊಂಡಿದೆ ಎನ್ನಬಹುದು. ಸಮುದಾಯದ ಸೃಷ್ಟಿಯಾದ ಜನಪದ ಸಾಹಿತ್ಯವನ್ನು ಸಮೂಹದ ಜ್ಞಾನ, ಒಬ್ಬನ ಅಭಿವ್ಯಕ್ತಿ ಎಂದು ಹಾ.ಮಾ. ನಾಯಕ್ ವ್ಯಾಖ್ಯಾನಿಸಿದ್ದಾರೆ. ಇದರಲ್ಲಿ ಕಥೆ, ಗೀತೆ, ಒಗಟು, ಗಾದೆ, ಐತಿಹ್ಯ ಮೊದಲಾದವುಗಳನ್ನು ಕಾಣಬಹುದು. ಮಾನವ ತನ್ನ ಬಿಡುವಿನ ಸಮಯದಲ್ಲಿ ಮನರಂಜನೆಗಾಗಿ ಈ ಪ್ರಕಾರಗಳನ್ನು ಸೃಜಿಸಿದ್ದಾನೆ. ನಲಿವಿನ ಸಂದರ್ಭದಲ್ಲಿ ಅಷ್ಟೇ ಅಲ್ಲ, ನೋವಿನ ಸಂದರ್ಭದಲ್ಲೂ ಹೇಳಿಕೊಳ್ಳುವ ಸಾಹಿತ್ಯವನ್ನು ಕಟ್ಟಿದ್ದಾನೆ. ಇವು ಪುಸ್ತಕಗಳಿಂದಲ್ಲ ಮೌಖಿಕವಾಗಿ ಬಾಯಿ ಮಾತಿನ ಮೂಲಕ ಹರಿದು ಬಂದಿದೆ. ಜನಪದ ಸಾಹಿತ್ಯ ಒಂದು ಸಮುದಾಯದ ಸಂಸ್ಕೃತಿ, ಧರ್ಮ, ನಂಬಿಕೆ, ಬದುಕಿನ ವಿಧಾನಗಳ ಜೀವಂತ ದಾಖಲೆಯಾಗಿದೆ ಎನ್ನಬಹುದು. ಅನಕ್ಷರಸ್ಥ ಜನಸಮುದಾಯದ ನಡುವೆ ವಾಕ್ ಸಂಪ್ರದಾಯದ ಮೂಲಕ ಹರಿದು ಬಂದಿರುವ ಅರ್ಥಪೂರ್ಣ ಸಾಹಿತ್ಯ.

Article Details

Section

Research Articles

Author Biography

ರೇಖಾಮಣಿ ಸಿ.ಎಂ.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುಧೋಳ.

How to Cite

ರೇಖಾಮಣಿ ಸಿ.ಎಂ. (2026). ಜಾನಪದ ಸಾಹಿತ್ಯ ಮತ್ತು ಆಧುನಿಕತೆ. ಅಕ್ಷರಸೂರ್ಯ (AKSHARASURYA), 12(01), 109 to 114. https://aksharasurya.com/index.php/latest/article/view/321

References

ರಾಗೌ, (2012), ಜಾನಪದ ಪ್ರಕಾರಗಳು, ಮೈಸೂರು: ತನುಮನ ಪ್ರಕಾಶನ.

ರಾಗೌ, (2012), ಜಾನಪದ ಸಾಹಿತ್ಯ ಪ್ರಕಾರಗಳು, ಮೈಸೂರು: ತನುಮನ ಪ್ರಕಾಶನ.

ಚಿದಾನಂದಮೂರ್ತಿ ಎಂ., (1990), ಜನಪದ ಮತ್ತು ಪುರಾಣ, ಮೈಸೂರು: ಮೈಸೂರು ವಿಶ್ವವಿದ್ಯಾಲಯ.

ಶಿವರಾಂ ಕಾರಂತ, (1985), ಜನಪದ ಸಂಸ್ಕೃತಿ, ಮೈಸೂರು: ಮೈಸೂರು ವಿಶ್ವವಿದ್ಯಾಲಯ.

ಪರಮಶಿವಯ್ಯ ಜಿ.ಶಂ., (2015), ಜಾನಪದ ಸಾಹಿತ್ಯ ಸಮೀಕ್ಷೆ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.