ಡಿವಿಜಿ ಅವರ ಮಂಕುತಿಮ್ಮನ ಕಗ್ಗ-ಒಂದು ಅವಲೋಕನ

Main Article Content

ರುಕ್ಕಿಣಿ ಹೆಚ್. ಎಸ್.

Abstract

ಕನ್ನಡದ ಭಗವದ್ಗೀತೆ ಎಂದೇ ಪ್ರಸಿದ್ಧವಾಗಿರುವ ಡಿ.ವಿ.ಗುಂಡಪ್ಪನವರು ಸೃಜಿಸಿದ "ಮಂಕುತಿಮ್ಮನ ಕಗ್ಗ”ವು ಬದುಕಿನ ಸಾರವನ್ನು ವಿಶ್ಲೇಶಿಸುವ ಅತ್ಯದ್ಭುತವಾದ ಕೃತಿಯಾಗಿದೆ. ಭಗವದ್ಗೀತೆ ಉಪನಿಷತ್‌ಗಳ ಸಾರವೆನ್ನುತ್ತಾರೆ. ಗುಂಡಪ್ಪನವರ ಕಗ್ಗವನ್ನು ಸಮರ್ಪಕವಾಗಿ ಅರ್ಥೈಸಿಕೊಂಡಿದ್ದೇ ಆದಲ್ಲಿ ಇಡೀ ಉಪನಿಷತ್‌ಗಳ ಸಾರವನ್ನೇ ಅರ್ಥೈಸಿಕೊಂಡಂತೆ ಎನ್ನುವ ವಿದ್ವಾಂಸರ ಮಾತೊಂದಿದೆ. ಇದರಲ್ಲಿ ಜನಪದರ ನುಡಿಗಟ್ಟು, ವಚನಕಾರರ ಮಾತಿನ ಬೆಳಕು... ಈ ಮೊದಲಾದವುಗಳ ಸಾರ ಮಡುಗಟ್ಟಿದೆ. ಇದರಲ್ಲಿ ಏನಿಲ್ಲ ಎಂದು ಹೇಳುವಂತಿಲ್ಲ. ಡಿ.ವಿ.ಜಿ ರವರು ತಮ್ಮ ಜೀವನಾನುಭವದ ಸಾರವನ್ನು ಉದಾಹರಣೆ ಸಹಿತ ವಿಶ್ಲೇಷಿಸುತ್ತಾರೆ. ಒಟ್ಟಾರೆಯಾಗಿ ಗುಂಡಪ್ಪನವರ ಜ್ಞಾನದ ಸಾರವೇ ಈ "ಮಂಕುತಿಮ್ಮನ ಕಗ್ಗ” ವಾಗಿದೆ. 'ಮಂಕುತಿಮ್ಮ' ಎಂಬ ಅಂಕಿತನಾಮವನ್ನೊಂದಿದ ನಾಲ್ಕು ಸಾಲುಗಳ ವಿಶಿಷ್ಟ ಶೈಲಿಯಲ್ಲಿನ ಪದ್ಯ ರಚನೆ ಜೀವನದ ತಿರುಳನ್ನು ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುವಂತಹ ಮಹತ್ವಪೂರ್ಣ ಕೃತಿಯಾಗಿದೆ. ಗುಂಡಪ್ಪನವರು ಬಹುಷಃ ತಾವು ಹಳೆಯ ವಸ್ತುವಿಷಯ ವಿಚಾರಗಳನ್ನು ಕುರಿತು ಮಾತನಾಡುತ್ತಿದ್ದುದರಿಂದಲೂ ಏನೋ ಹಳೆಯ ಶೈಲಿಯನ್ನೇ ಅಳವಡಿಸಿಕೊಂಡು ಕಗ್ಗವನ್ನು ರಚಿಸಿದ್ದಾರೆ. ಕಗ್ಗದ ಮತ್ತೊಂದು ವೈಶಿಷ್ಟ್ಯತೆಯೆಂದರೆ ಕೃತಿಯ ಆದಿ, ಮಧ್ಯ ಮತ್ತು ಅಂತ್ಯ ಭಾಗದ ಮಧ್ಯ ಮಧ್ಯ ಎಲ್ಲೇ ಯಾವ ಪದ್ಯವನ್ನೇ ಓದಿದರೂ, ಮುಖ್ಯವಿಚಾರ ಸ್ಪಷ್ಟವಾಗಿ ಗ್ರಹಿಕೆಗೆ ಸಿಗುವಂಥದ್ದು. ಜೀವನದ ಆತ್ಮಾನುಭವದ ಪರಿಪಾಕದಿಂದ ಹೊರಹೊಮ್ಮಿದ ಮಂತ್ರ ಸದೃಶವಾದ ಉಕ್ತಿ ಹಾಗೂ ಎಲ್ಲರ ಬಾಳ್ವೆಗೆ ಸಲ್ಲುವ ಕೃತಿಯಿದು.

Article Details

Section

Essay

Author Biography

ರುಕ್ಕಿಣಿ ಹೆಚ್. ಎಸ್.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಚಾಮರಾಜನಗರ.

How to Cite

ರುಕ್ಕಿಣಿ ಹೆಚ್. ಎಸ್. (2023). ಡಿವಿಜಿ ಅವರ ಮಂಕುತಿಮ್ಮನ ಕಗ್ಗ-ಒಂದು ಅವಲೋಕನ. ಅಕ್ಷರಸೂರ್ಯ (AKSHARASURYA), 2(10), 221 to 227. https://aksharasurya.com/index.php/latest/article/view/253

References

ಮಂಕುತಿಮ್ಮನ ಕಗ್ಗ-ತಾತ್ಪರ್ಯ (2018, 19 ಮುದ್ರಣ), ಶ್ರೀ ಹೆಚ್. ವಿ. ಶ್ರೀಕಾಂತ್, ಶ್ರೀರಂಗ ಪ್ರಿಂಟರ್ಸ್, ಬೆಂಗಳೂರು.

ಕಗ್ಗ ರಸಧಾರೆ: ಸಂಪುಟ-1 (2013), ರವಿ ತಿರುಮಲೈ, ವಿಜಯ ರವಿ ಪ್ರಕಾಶನ, ಬೆಂಗಳೂರು.

ಕಗ್ಗ ರಸಧಾರೆ: ಸಂಪುಟ-2 (2014), ರವಿ ತಿರುಮಲೈ, ವಿಜಯ ರವಿ ಪ್ರಕಾಶನ, ಬೆಂಗಳೂರು.