ಜನಪದ ರಂಗಭೂಮಿ ಮತ್ತು ಅದರ ಸಾಮಾಜಿಕ ಪ್ರಭಾವ
Main Article Content
Abstract
ಜನಪದ ರಂಗಭೂಮಿಯು ಗ್ರಾಮೀಣ ಜನರ ಬದುಕು, ಆಚರಣೆ, ಸಂಪ್ರದಾಯ ಹಾಗೂ ನಂಬಿಕೆಗಳ ಅಭಿವ್ಯಕ್ತಿಯಾಗಿ ರೂಪುಗೊಂಡ ವಿಶಿಷ್ಟ ಕಲಾಮಾಧ್ಯಮವಾಗಿದೆ. ನಿಸರ್ಗದ ಆರಾಧನೆಯಿಂದ ವಿಕಾಸಗೊಂಡು ಯಕ್ಷಗಾನ, ಮೂಡಲಪಾಯ (ದೊಡ್ಡಾಟ), ಪಡುವಲಪಾಯ, ಸಣ್ಣಾಟ ಹಾಗೂ ಗೊಂಬೆಯಾಟಗಳಂತಹ ವೈವಿಧ್ಯಮಯ ಕಲಾಪ್ರಕಾರಗಳಾಗಿ ಇದು ಬೆಳೆದಿದೆ. ಕೇವಲ ಮನರಂಜನೆಯಷ್ಟೇ ಅಲ್ಲದೆ, ಸಾಮಾಜಿಕ, ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಸ್ಥಳೀಯ ಭಾಷೆಯ ಬಳಕೆ, ಸಮುದಾಯಗಳ ಒಗ್ಗೂಡುವಿಕೆ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಇದರ ಕೊಡುಗೆ ಅಪಾರವಾಗಿದೆ. ಆಧುನಿಕ ಮನರಂಜನಾ ಮಾಧ್ಯಮಗಳ ನಡುವೆಯೂ ಜನಪದ ರಂಗಭೂಮಿಯು ಸಾಮಾಜಿಕ ಸಾಮರಸ್ಯ, ಶಿಕ್ಷಣ ಮತ್ತು ಪರಿವರ್ತನೆಯ ಪ್ರಬಲ ಸಾಧನವಾಗಿ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಶ್ರೀನಿವಾಸಮೂರ್ತಿ ಕಾ. ವೆಂ., (2005), ಕನ್ನಡ ರಂಗಭೂಮಿ, ಬೆಂಗಳೂರು: ಪುಸ್ತಕ ಮಂಟಪ.
ಅಕ್ಷರ ಕೆ. ವಿ., (1994), ರಂಗ ಪ್ರಪಂಚ, ಹೆಗ್ಗೋಡು (ಸಾಗರ): ಅಕ್ಷರ ಪ್ರಕಾಶನ.
ರಂಗನಾಥ್ ಎಚ್. ಕೆ., (1972), ಕರ್ನಾಟಕ ರಂಗಭೂಮಿ, ಮೈಸೂರು: ಸುರುಚಿ ಪ್ರಕಾಶನ.
ಪುಟ್ಟಸ್ವಾಮಯ್ಯ ಬಿ., (1983), ಕನ್ನಡ ರಂಗಭೂಮಿ ನಡೆದು ಬಂದ ದಾರಿ, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
ಆದ್ಯ ರಂಗಾಚಾರ್ಯ, (1971), ರಂಗ ನಾಟಕಶಾಸ್ತ್ರ, ಮೈಸೂರು: ಮೈಸೂರು ವಿಶ್ವವಿದ್ಯಾಲಯ.