ತಂತ್ರಜ್ಞಾನ ಯುಗದಲ್ಲಿ ರಂಗಭೂಮಿಯ ಪ್ರಸ್ತುತತೆ
Main Article Content
Abstract
ತಂತ್ರಜ್ಞಾನದ ತ್ವರಿತ ಬೆಳವಣಿಗೆಯಿಂದಾಗಿ ರಂಗಭೂಮಿಯ ಸ್ವರೂಪ ಮತ್ತು ಪ್ರಸ್ತುತತೆ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಕೋವಿಡ್-19ರ ಸಂಕಷ್ಟದ ಕಾಲದಲ್ಲಿ ಸಾಂಪ್ರದಾಯಿಕ ರಂಗಮಂದಿರಗಳು ಮುಚ್ಚಿದಾಗ, ಕನ್ನಡ ರಂಗಭೂಮಿಯು ಡಿಜಿಟಲ್ ತಂತ್ರಜ್ಞಾನವನ್ನು ಸಮರ್ಥವಾಗಿ ಅಳವಡಿಸಿಕೊಂಡಿತು. ಮೈಸೂರು ರಂಗಾಯಣವು ಪ್ರದರ್ಶಿಸಿದ ‘ಕುಸುಮಬಾಲೆ’, ‘ಕಿಂದರಿಜೋಗಿ’ ಮತ್ತು ‘ಪರ್ವ’ ನಾಟಕಗಳು ಪ್ರಮುಖ ಸಾಹಿತ್ಯ ಕೃತಿಗಳನ್ನು ಡಿಜಿಟಲ್ ರಂಗಭೂಮಿಗೆ ಪರಿವರ್ತಿಸಿದ ಯಶಸ್ವಿ ಪ್ರಯೋಗಗಳಾಗಿವೆ. ನಟ ಮತ್ತು ಪ್ರೇಕ್ಷಕರ ನಡುವಿನ ನೇರ ಸಂಪರ್ಕವು ಸಾಂಪ್ರದಾಯಿಕ ರಂಗಭೂಮಿಯ ಜೀವಾಳವಾದರೂ, ಡಿಜಿಟಲ್ ಮಾಧ್ಯಮವು ನಾಟಕಗಳ ಶಾಶ್ವತ ದಾಖಲೀಕರಣ, ಭೌಗೋಳಿಕ ಮಿತಿಗಳ ವಿಸ್ತರಣೆ, ಯುವ ಪ್ರೇಕ್ಷಕರ ಆಕರ್ಷಣೆ ಮತ್ತು ಆರ್ಥಿಕ ಸಾಧ್ಯತೆಗಳನ್ನು ತೆರೆದಿಟ್ಟಿದೆ. ತಂತ್ರಜ್ಞಾನವು ರಂಗಭೂಮಿಯ ಅಂತ್ಯವಲ್ಲ; ಬದಲಾಗಿ ಅದು ಅಭಿವ್ಯಕ್ತಿಯನ್ನು ವಿಸ್ತರಿಸುವ ಪೂರಕ ಸಾಧನವಾಗಿದೆ. ಸಾಂಪ್ರದಾಯಿಕ ಮತ್ತು ಡಿಜಿಟಲ್ ರಂಗಭೂಮಿಗಳೆರಡರ ಸಮನ್ವಯದಿಂದ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಲು ಹಾಗೂ ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಸಾಧ್ಯವಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಅಕ್ಷರ ಕೆ. ವಿ., (2012), ಮಾವಿನ ಮರದಲ್ಲಿ ಬಾಳೆಹಣ್ಣು (ನಾಟಕ ರಂಗಭೂಮಿ ಕುರಿತ ಬರಹಗಳು), ಹೆಗ್ಗೋಡು: ಅಕ್ಷರ ಪ್ರಕಾಶನ.
ಅಕ್ಷರ ಕೆ. ವಿ., (2020), ಎಪಿಕ್ ರಂಗಭೂಮಿ (ಬರ್ಟೋಲ್ಟ್ ಬ್ರೆಖ್ಟ್ ರಂಗಚಿಂತನೆ), ಹೆಗ್ಗೋಡು: ಅಕ್ಷರ ಪ್ರಕಾಶನ.
ಅಶೋಕ ಟಿ. ಪಿ., (2022), ರಿಕ್ತರಂಗಭೂಮಿ, ಹೆಗ್ಗೋಡು: ಅಕ್ಷರ ಪ್ರಕಾಶನ.
ಮಹೇಶ ಚಂದ್ರಗುರು, (2015), ರಂಗಭೂಮಿ ಸಂವಹನ, ಮೈಸೂರು: ಕೆ. ಕೆ. ಐ. ಎಸ್. ಬುಕ್ಸ್.
ಪುಟ್ಟಸ್ವಾಮಯ್ಯ ಬಿ., (1970), ಕನ್ನಡ ರಂಗಭೂಮಿ ನಡೆದುಬಂದ ದಾರಿ, ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ .
ರಂಗನಾಥ್ ಎಚ್. ಕೆ., (2000), ಕರ್ನಾಟಕ ರಂಗಭೂಮಿ, ಬೆಂಗಳೂರು: ಹೇಮಂತ ಸಾಹಿತ್ಯ.