ಜನಪದ ಆರಾಧನಾ ರಂಗಭೂಮಿ ಮತ್ತು ಅದರ ಸಾಮಾಜಿಕ ಪ್ರಭಾವ

Main Article Content

ಜಯಲಕ್ಷ್ಮಿ ಆರ್. ಶೆಟ್ಟಿ

Abstract

ಜನಪದ ಆರಾಧನಾ ರಂಗಭೂಮಿಯು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಸಮುದಾಯದ ಸಂಸ್ಕೃತಿ, ನಂಬಿಕೆ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಕಾಯ್ದುಕೊಳ್ಳುವ ಪ್ರಭಾವಶಾಲಿ ದೇಶಿ ಮಾಧ್ಯಮವಾಗಿದೆ. ದೈವಾರಾಧನೆ, ನಾಗಾರಾಧನೆ, ಬಯಲಾಟ ಹಾಗೂ ಯಕ್ಷಗಾನದಂತಹ ಕಲಾಪ್ರಕಾರಗಳು ಪೂಜಾಸಂಕಲ್ಪ, ಕಥಾನಕ ಮತ್ತು ಅಭಿನಯಗಳ ಸಮ್ಮಿಲನದಿಂದ ಜನಪದರ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಅಗತ್ಯಗಳನ್ನು ಪೂರೈಸುತ್ತಾ ಬಂದಿದೆ. ಈ ಸಂಶೋಧನಾ ಪ್ರಬಂಧವು ಆರಾಧನಾ ರಂಗಕಲೆಯ ಸಾಂಸ್ಕೃತಿಕ ಸ್ವರೂಪ ಮತ್ತು ಅದು ಸಮಾಜದ ಮೇಲೆ ಬೀರುವ ವೈವಿಧ್ಯಮಯ ಪ್ರಭಾವಗಳನ್ನು ವಿಶ್ಲೇಷಿಸುತ್ತದೆ.
ಈ ರಂಗಭೂಮಿಯು ಸಮಾಜದಲ್ಲಿ ಧರ್ಮ, ನ್ಯಾಯ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಜೊತೆಗೆ ಸಮುದಾಯಗಳಲ್ಲಿ ಸಾಮರಸ್ಯ ಮತ್ತು ಐಕ್ಯತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರಾಧನಾ ವೇದಿಕೆಗಳಲ್ಲಿ ನಡೆಯುವ ನ್ಯಾಯತೀರ್ಮಾನಗಳು ಮತ್ತು ವಿಭಿನ್ನ ಸಮುದಾಯಗಳ ಸಕ್ರಿಯ ಭಾಗಿತ್ವವು ಸಾಮಾಜಿಕ ಸಮಾನತೆ ಹಾಗೂ ಸಹಬಾಳ್ವೆಗೆ ದಾರಿಯಾಗಿದೆ. ಅಲ್ಲದೆ ಮೌಖಿಕ ಪರಂಪರೆ, ಜನಪದ ಕಾವ್ಯ, ನೃತ್ಯ ಮತ್ತು ಸಂಗೀತವನ್ನು ತಲೆಮಾರಿನಿಂದ ತಲೆಮಾರಿಗೆ ತಲುಪಿಸುವ ಜೀವಂತ ಸೇತುವೆಯಾಗಿ ಇದು ಕಾರ್ಯನಿರ್ವಹಿಸುತ್ತದೆ.

Article Details

Section

Research Articles

Author Biography

ಜಯಲಕ್ಷ್ಮಿ ಆರ್. ಶೆಟ್ಟಿ

ಉಪನ್ಯಾಸಕಿ, ತುಳು ಸ್ನಾತಕೋತ್ತರ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು (ಸಂಧ್ಯಾ ಕಾರ್ಯಕ್ರಮ), ಮಂಗಳೂರು.

How to Cite

ಜಯಲಕ್ಷ್ಮಿ ಆರ್. ಶೆಟ್ಟಿ. (2026). ಜನಪದ ಆರಾಧನಾ ರಂಗಭೂಮಿ ಮತ್ತು ಅದರ ಸಾಮಾಜಿಕ ಪ್ರಭಾವ. ಅಕ್ಷರಸೂರ್ಯ (AKSHARASURYA), 18(01), 124 to 128. https://aksharasurya.com/index.php/latest/article/view/2430

References

ಮಲ್ಲೇಪುರಂ ಜಿ. ವೆಂಕಟೇಶ, (2007), ತುಳು ಸಾಹಿತ್ಯ ಚರಿತ್ರೆ, ಹಂಪಿ: ಕನ್ನಡ ವಿಶ್ವವಿದ್ಯಾನಿಲಯ.

ಅಮೃತ ಸೋಮೇಶ್ವರ, (1997), ತುಳು ಪಾಡ್ಡನ ಸಂಪುಟ, ಹಂಪಿ: ಕನ್ನಡ ವಿಶ್ವವಿದ್ಯಾನಿಲಯ.

ರಾಘವ ನಂಬಿಯಾರ್ ಕೆ. ಎಂ., (2018), ಪಡವುದಪ್ಪೆನ ಪಾರ್ದನ, ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ.