ತುಳು ನವ್ಯ ರಂಗಭೂಮಿಯ ಪ್ರವರ್ತಕ ಮನು ಇಡ್ಯಾ
Main Article Content
Abstract
ತುಳು ರಂಗಭೂಮಿಯು ಕೇವಲ ಮನರಂಜನೆ, ಹಾಸ್ಯ ಹಾಗೂ ಪೌರಾಣಿಕ ಕಥೆಗಳಿಗೆ ಸೀಮಿತವಾಗಿದ್ದ ಕಾಲದಲ್ಲಿ, ಅದಕ್ಕೆ ‘ನವ್ಯ’ ಸ್ಪರ್ಶ ನೀಡಿದ ಶ್ರೇಯಸ್ಸು ಮನು ಇಡ್ಯಾ ಅವರಿಗೆ ಸಲ್ಲುತ್ತದೆ. ಅವರು ತಮ್ಮ ‘ಮಾರಿ ಗಿಡಪ್ಪುಲೆ’, ‘ತಿರ್ಸಂಕು’, ಮತ್ತು ‘ಬಲಿ’ಯಂತಹ ನಾಟಕಗಳ ಮೂಲಕ ಸಮಾಜದ ಮೂಢನಂಬಿಕೆ, ಜಾತಿ ತಾರತಮ್ಯ ಹಾಗೂ ಶೋಷಣೆಯನ್ನು ಅತ್ಯಂತ ತೀಕ್ಷ್ಣವಾಗಿ ಪ್ರಶ್ನಿಸಿದರು. ಅದ್ದೂರಿ ರಂಗಸಜ್ಜಿಕೆಯ ಬದಲು ಬೆಳಕು-ನೆರಳಿನ ತಂತ್ರ, ಕಾವ್ಯಾತ್ಮಕ ಹಾಗೂ ಹರಿತವಾದ ಭಾಷೆ ಮತ್ತು ಪ್ರಬಲ ರೂಪಕಗಳನ್ನು ಬಳಸುವ ಮೂಲಕ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚಿದರು. ಕೇವಲ ಬಾಹ್ಯ ಸನ್ನಿವೇಶಗಳಿಗಿಂತ ಮನುಷ್ಯನ ಅಂತರಂಗದ ಸಂಘರ್ಷಗಳನ್ನು ಹಾಗೂ ಬಂಡಾಯದ ಧ್ವನಿಯನ್ನು ರಂಗದ ಮೇಲೆ ತಂದ ಇವರು, ತುಳು ನಾಟಕ ಕ್ಷೇತ್ರವನ್ನು ಸಾಂಪ್ರದಾಯಿಕತೆಯಿಂದ ಬಿಡಿಸಿ ವೈಚಾರಿಕ ಎತ್ತರಕ್ಕೆ ಕೊಂಡೊಯ್ದರು. ಈ ಅದ್ಭುತ ಪ್ರಯೋಗಶೀಲತೆಯಿಂದಾಗಿಯೇ ಅವರನ್ನು ತುಳು ನವ್ಯ ರಂಗಭೂಮಿಯ ಪ್ರವರ್ತಕರೆಂದು ಗುರುತಿಸಲಾಗುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಮನು ಇಡ್ಯಾ, (2016), ಮಾರಿ ಗಿಡಪ್ಪುಲೆ (ತುಳು ನಾಟಕ), ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ.
ಮನು ಇಡ್ಯಾ, (1992), ತಿರ್ಸಂಕು (ತುಳು ನಾಟಕ), ಸುರತ್ಕಲ್: ಸಿಂಗಾರ ಸುರತ್ಕಲ್ ಪ್ರಕಾಶನ.
ಮುದ್ದು ಮೂಡುಬೆಳ್ಳೆ, (2005), ತುಳು ರಂಗಭೂಮಿ, ಮಂಗಳೂರು: ಸಾಹಿತ್ಯ ಸಂಸ್ಕೃತಿ ವೇದಿಕೆ.
ಮಹಾಲಿಂಗ ಭಟ್ ಕೆ., (2007), ಮುದ್ರಿತ ತುಳು ನಾಟಕಗಳು (ಸಂ: ಡಾ. ಬಿ. ಎ. ವಿವೇಕ ರೈ, ‘ತುಳು ಸಾಹಿತ್ಯ ಚರಿತ್ರೆ’ ಕೃತಿಯಲ್ಲಿ), ಹಂಪಿ: ಕನ್ನಡ ವಿಶ್ವವಿದ್ಯಾಲಯ.
ಬೊಳುವಾರು ಐ. ಕೆ., (1989), ತುಳು ನಾಟಕೊಲು - ನಾಲ್ ಪಾತೆರೊ (ಸಂ: ಡಾ. ಕೆ. ಚಿನ್ನಪ್ಪ ಗೌಡ, ‘ಪನಿಯಾರ’ ಕೃತಿಯಲ್ಲಿ), ಮಂಗಳೂರು: ತುಳುಕೂಟ (ರಿ).
ಮುದ್ದು ಮೂಡುಬೆಳ್ಳೆ, (2016), ತುಳು ರಂಗಭೂಮಿ (ಸಂ: ಡಾ. ಬಿ. ಎ. ವಿವೇಕ ರೈ, ‘ಮಂಗಳೂರು ದರ್ಶನ - ಸಂಪುಟ 1’ ಕೃತಿಯಲ್ಲಿ), ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ.