ಕನ್ನಡದ ಪ್ರಮುಖ ನಾಟಕಕಾರರು ಮತ್ತು ಅವರ ಕೊಡುಗೆ

Main Article Content

ವಸಂತ್

Abstract

ಕನ್ನಡ ಸಾಹಿತ್ಯದಲ್ಲಿ ನಾಟಕವು ದೃಶ್ಯ-ಶ್ರವ್ಯ ಮಾಧ್ಯಮವಾಗಿ ಕೇವಲ ಮನರಂಜನೆಯಷ್ಟೇ ಅಲ್ಲದೆ, ಸಮಾಜಮುಖಿ ಚಿಂತನೆಗಳನ್ನು ಬಿತ್ತುವ ಪ್ರಬಲ ಅಸ್ತ್ರವಾಗಿ ಬೆಳೆದಿದೆ. ಟಿ.ಪಿ. ಕೈಲಾಸಂ ಅವರು ಹಾಸ್ಯ ಹಾಗೂ ವಿಡಂಬನೆಗಳ ಮೂಲಕ ಮಧ್ಯಮ ವರ್ಗದ ಬದುಕು ಮತ್ತು ಸ್ತ್ರೀ ಶೋಷಣೆಯನ್ನು ಅನಾವರಣಗೊಳಿಸಿದರೆ, ಶ್ರೀರಂಗರು ರಾಜಕೀಯ, ಆರ್ಥಿಕ ಹಾಗೂ ಕೌಟುಂಬಿಕ ಸಮಸ್ಯೆಗಳನ್ನು ಅತ್ಯಂತ ವಾಸ್ತವಿಕ ನೆಲೆಯಲ್ಲಿ ವಿಶ್ಲೇಷಿಸಿದರು. ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರರು ಪುರಾಣ, ಇತಿಹಾಸ ಹಾಗೂ ಜಾನಪದದ ಅಂಶಗಳನ್ನು ಸಮಕಾಲೀನ ತಲ್ಲಣಗಳಿಗೆ ಅತ್ಯದ್ಭುತವಾಗಿ ಬೆಸೆದು ಕನ್ನಡ ರಂಗಭೂಮಿಗೆ ಅಂತರರಾಷ್ಟ್ರೀಯ ಮನ್ನಣೆ ತಂದುಕೊಟ್ಟರು. ಜೊತೆಗೆ, ಕುವೆಂಪು ಹಾಗೂ ಮಾಸ್ತಿಯವರು ಪೌರಾಣಿಕ ಮತ್ತು ಚಾರಿತ್ರಿಕ ವಸ್ತುಗಳಿಗೆ ಹೊಸ ತಾತ್ವಿಕ ದರ್ಶನವನ್ನು ನೀಡಿ, ಮೌಢ್ಯ ಹಾಗೂ ಸಾಮಾಜಿಕ ಅಸಮಾನತೆಗಳನ್ನು ದಿಟ್ಟವಾಗಿ ಪ್ರಶ್ನಿಸಿದರು. ಹೀಗೆ, ಭಿನ್ನ-ವಿಭಿನ್ನ ನಾಟಕಕಾರರು ತಮ್ಮ ವಿಶಿಷ್ಟ ದೃಷ್ಟಿಕೋನ ಹಾಗೂ ಪ್ರಯೋಗಶೀಲತೆಯ ಮೂಲಕ ಸಮಗ್ರ ಕನ್ನಡ ನಾಟಕ ಪರಂಪರೆಯನ್ನು ಶ್ರೀಮಂತಗೊಳಿಸಿದ ಬಗೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ.

Article Details

Section

Research Articles

Author Biography

ವಸಂತ್

ಸಂಶೋಧನಾ ವಿದ್ಯಾರ್ಥಿ, ಎಸ್.ವಿ.ಪಿ. ಕನ್ನಡ ಅಧ್ಯಯನ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ, ಕೊಣಾಜೆ.

How to Cite

ವಸಂತ್. (2026). ಕನ್ನಡದ ಪ್ರಮುಖ ನಾಟಕಕಾರರು ಮತ್ತು ಅವರ ಕೊಡುಗೆ. ಅಕ್ಷರಸೂರ್ಯ (AKSHARASURYA), 18(01), 106 to 112. https://aksharasurya.com/index.php/latest/article/view/2427

References

ನಾಗರತ್ನಮ್ಮ ಮತ್ತು ಡಾ. ಬಿ. ವೆಂಕಟರಾಮಣ್ಣ (ಸಂ.), (2016), ಕನ್ನಡ ನಾಟಕಾವಲೋಕನ, ಮೈಸೂರು: ಉಷಾ ಪ್ರಕಾಶನ.

ಮರುಳಸಿದ್ದಪ್ಪ ಕೆ., (1996), ಆಧುನಿಕ ಕನ್ನಡ ನಾಟಕ, ಬೆಂಗಳೂರು: ಲಿಪಿ ಪ್ರಕಾಶನ.

ಬಸವರಾಜ ಡೋಣೂರ, (2007), ಕನ್ನಡ ನಾಟಕ ಮತ್ತು ರಂಗಭೂಮಿ, ಧಾರವಾಡ: ನೀಲಪರ್ವತ ಪ್ರಕಾಶನ.

ಮರುಳಸಿದ್ದಪ್ಪ ಕೆ., (1973), ಕನ್ನಡ ನಾಟಕ ವಿಮರ್ಶೆ, ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ.