ಕುವೆಂಪು ನಾಟಕಗಳಲ್ಲಿ ಪರಂಪರೆ ಮತ್ತು ಪ್ರತಿರೋಧದ ನೆಲೆಗಳು: ಒಂದು ಅಧ್ಯಯನ
Main Article Content
Abstract
ರಾಷ್ಟ್ರಕವಿ ಕುವೆಂಪು ಅವರು ಶ್ರೇಣೀಕೃತ ಸಮಾಜದ ಪುರೋಹಿತಶಾಹಿ ಯಾಜಮಾನ್ಯವನ್ನು ಧಿಕ್ಕರಿಸಿ, ತಮ್ಮ ನಾಟಕಗಳ ಮೂಲಕ ಪ್ರಬಲವಾದ ಸಾಂಸ್ಕೃತಿಕ ಪ್ರತಿರೋಧವನ್ನು ಒಡ್ಡಿದ್ದಾರೆ. ‘ಜಲಗಾರ’, ‘ಶೂದ್ರತಪಸ್ವಿ’ ಹಾಗೂ ‘ಬೆರಳ್ಗೆ ಕೊರಳ್’ ನಾಟಕಗಳು ಕೇವಲ ಪೌರಾಣಿಕ ಮರುಸೃಷ್ಟಿಯಲ್ಲ; ಬದಲಾಗಿ ತಳಸಮುದಾಯಗಳ ಅಸ್ಮಿತೆಯ ತೀಕ್ಷ್ಣ ಅಭಿವ್ಯಕ್ತಿಗಳಾಗಿವೆ. ‘ಜಲಗಾರ’ದಲ್ಲಿ ದೇವಾಲಯ ಕೇಂದ್ರಿತ ವೈದಿಕ ಪರಂಪರೆಯನ್ನು ನಿರಾಕರಿಸಿ, ಕಾಯಕ ತತ್ವವನ್ನು ಎತ್ತಿಹಿಡಿಯಲಾಗಿದೆ. ‘ಶೂದ್ರತಪಸ್ವಿ’ಯಲ್ಲಿ ಶಂಬೂಕನ ಸಾಧನೆಯನ್ನು ಸಮರ್ಥಿಸಿ, ವರ್ಣಾಶ್ರಮದ ಕರಾಳತೆಯನ್ನು ವೈಚಾರಿಕವಾಗಿ ಪ್ರಶ್ನಿಸಲಾಗಿದೆ. ಅಂತೆಯೇ ‘ಬೆರಳ್ಗೆ ಕೊರಳ್’ ನಾಟಕದಲ್ಲಿ ಏಕಲವ್ಯನ ಕಥೆಯ ಮೂಲಕ ವಿದ್ಯೆಯ ಮೇಲಿನ ಪಟ್ಟಭದ್ರರ ಏಕಸ್ವಾಮ್ಯ ಹಾಗೂ ಶೋಷಣೆಯನ್ನು ಅನಾವರಣಗೊಳಿಸಲಾಗಿದೆ. ಒಟ್ಟಾರೆಯಾಗಿ, ಜಾತಿ ಮತ್ತು ಹುಟ್ಟಿನ ಆಧಾರಿತ ತಾರತಮ್ಯಗಳನ್ನು ಬೇರುಸಹಿತ ಕಿತ್ತೊಗೆದು, ಪ್ರತಿಭೆ, ಶ್ರದ್ಧೆ ಮತ್ತು ಮಾನವೀಯತೆಗೆ ಮನ್ನಣೆ ನೀಡುವ ‘ಸರ್ವರಿಗೂ ಸಮಬಾಳು’ ಎಂಬ ಸಮಸಮಾಜದ ಹೊಸ ದಾರ್ಶನಿಕತೆಯನ್ನು ಕುವೆಂಪು ಇಲ್ಲಿ ಅತ್ಯಂತ ಸೃಜನಶೀಲವಾಗಿ ಕಟ್ಟಿಕೊಟ್ಟಿದ್ದಾರೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕುವೆಂಪು, (2002), ಜಲಗಾರ, ಮೈಸೂರು: ಉದಯರವಿ ಪ್ರಕಾಶನ.
ಕುವೆಂಪು, (1997), ಶೂದ್ರತಪಸ್ವಿ, ಮೈಸೂರು: ಉದಯರವಿ ಪ್ರಕಾಶನ.
ಕುವೆಂಪು, (1994), ಬೆರಳ್ಗೆ ಕೊರಳ್, ಮೈಸೂರು: ಉದಯರವಿ ಪ್ರಕಾಶನ.
ನರಹಳ್ಳಿ ಬಾಲಸುಬ್ರಹ್ಮಣ್ಯ, (2002), ಕುವೆಂಪು ನಾಟಕಗಳ ಅಧ್ಯಯನ, ಬೆಂಗಳೂರು: ಅಂಕಿತ ಪುಸ್ತಕ.
ಸಿ. ಪಿ. ಕೆ., (2010), ಕನ್ನಡ ಕೋಶ, ಮೈಸೂರು: ಚೇತನ ಬುಕ್ ಹೌಸ್.
ಮರುಳಸಿದ್ದಪ್ಪ ಕೆ., (1987), ಆಧುನಿಕ ಕನ್ನಡ ನಾಟಕ, ಬೆಂಗಳೂರು: ಅಂಕಿತ ಪುಸ್ತಕ.