ನಾಟಕ ಸಾಹಿತ್ಯ ಮತ್ತು ರಂಗಪ್ರಯೋಗ
Main Article Content
Abstract
ಭಾರತೀಯ ನಾಟ್ಯಶಾಸ್ತ್ರದ ತಳಹದಿಯ ಮೇಲೆ ಬೆಳೆದ ಕನ್ನಡ ನಾಟಕ ಪರಂಪರೆಯು ಮರಾಠಿ ಹಾಗೂ ಪಾರ್ಸಿ ಕಂಪನಿಗಳ ಪ್ರಭಾವದೊಂದಿಗೆ ವೃತ್ತಿ ರಂಗಭೂಮಿಯಾಗಿ ರೂಪುಗೊಂಡಿತು. ಶಾಂತಕವಿಗಳ ನಾಟಕ ಮಂಡಳಿ ಮತ್ತು ಗುಬ್ಬಿ ಕಂಪನಿಗಳು ಈ ಹಾದಿಯಲ್ಲಿ ಭದ್ರ ಬುನಾದಿ ಹಾಕಿದವು. ಆರಂಭಿಕ ಅನುವಾದಗಳಾಚೆಗೆ, ಕೈಲಾಸಂ, ಸಂಸ, ಶ್ರೀರಂಗ, ಕುವೆಂಪು ಮುಂತಾದವರಿಂದ ಸ್ವತಂತ್ರ ಹಾಗೂ ವೈಚಾರಿಕ ನಾಟಕಗಳು ಸೃಷ್ಟಿಯಾದವು. ನವ್ಯ ಕಾಲಘಟ್ಟದಲ್ಲಿ ಗಿರೀಶ್ ಕಾರ್ನಾಡ್, ಕಂಬಾರ ಹಾಗೂ ಲಂಕೇಶ್‌ರಂತಹ ದಿಗ್ಗಜರು ಪುರಾಣ, ಜಾನಪದ ಮತ್ತು ಚರಿತ್ರೆಗಳನ್ನು ಸಮಕಾಲೀನ ತಲ್ಲಣಗಳಿಗೆ ಮುಖಾಮುಖಿಯಾಗಿಸಿದರು. ಕೇವಲ ಸಾಹಿತ್ಯಕ ಪಠ್ಯವಾಗಿದ್ದ ನಾಟಕಗಳನ್ನು ಬಿ.ವಿ. ಕಾರಂತ, ಪ್ರಸನ್ನ, ಸಿ.ಜಿ.ಕೆ ಹಾಗೂ ಸಿ. ಬಸವಲಿಂಗಯ್ಯ ಅವರಂತಹ ನಿರ್ದೇಶಕರು ತಮ್ಮ ವಿನೂತನ ರಂಗತಂತ್ರಗಳ ಮೂಲಕ ಜೀವಂತಗೊಳಿಸಿದರು. ಕೇವಲ ಮನರಂಜನೆಯ ಸಾಧನವಾಗಿದ್ದ ರಂಗಭೂಮಿ, ದಲಿತ-ಬಂಡಾಯ ಕಾಲಘಟ್ಟದಲ್ಲಿ ಸಾಮಾಜಿಕ ಜಾಗೃತಿಯ ಪ್ರಬಲ ಅಸ್ತ್ರವಾಗಿ ವಿಕಸನಗೊಂಡ ಬಗೆ ಇಲ್ಲಿ ಅನಾವರಣಗೊಂಡಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಮರುಳಸಿದ್ದಪ್ಪ ಕೆ., (2013), ಆಧುನಿಕ ಕನ್ನಡ ನಾಟಕ, ಬೆಂಗಳೂರು: ಅಂಕಿತ ಪುಸ್ತಕ.
ಲಿಂಗದೇವರು ಹಳೆಮನೆ, (2009), ರಂಗ ರೂಪ, ಮೈಸೂರು: ನಿರಂತರ ಪ್ರಕಾಶನ.
ಸಿಂಧುವಳ್ಳಿ ಅನಂತಮೂರ್ತಿ, (1973), ಗುಬ್ಬಿ ಕಂಪನಿ, ಮೈಸೂರು: ಮೈಸೂರು ಪ್ರಿಂಟ್ ಅಂಡ್ ಪಬ್ಲಿಕೇಶನ್ ಹೌಸ್.
ಹನುಮಂತಯ್ಯ ಎಲ್. (ಸಂ.), (1996), ರಂಗಭೂಮಿ ಅಂತರಂಗ, ಬೆಂಗಳೂರು: ಹಂದರ ಪ್ರಕಾಶನ.
ರಂಗನಾಥ ಎಸ್. ಕೆ., (1978), ಕರ್ನಾಟಕ ರಂಗಭೂಮಿ, ಮೈಸೂರು: ಸುರುಚಿ ಪ್ರಕಾಶನ.
ಅಕ್ಷರ ಕೆ. ವಿ., (2010), ರಂಗ ಪ್ರಪಂಚ, ಹೆಗ್ಗೋಡು: ಅಕ್ಷರ ಪ್ರಕಾಶನ.
ಅಕ್ಷರ ಕೆ. ವಿ., (2012), ರಂಗ ಪ್ರಯೋಗ, ಹೆಗ್ಗೋಡು: ಅಕ್ಷರ ಪ್ರಕಾಶನ.