ರಂಗಭೂಮಿ ಮತ್ತು ಸಮಾಜ ಸುಧಾರಣೆ
Main Article Content
Abstract
ಮಾನವನ ಬದುಕಿನ ಏರಿಳಿತಗಳನ್ನು ಹಾಗೂ ಸಮಾಜದ ಅಂಕುಡೊಂಕುಗಳನ್ನು ಕನ್ನಡಿಯಂತೆ ಪ್ರತಿಬಿಂಬಿಸುವ ರಂಗಭೂಮಿಯು ಕೇವಲ ಮನರಂಜನೆಯ ವೇದಿಕೆಯಾಗಿರದೆ, ಪ್ರಬಲ ಲೋಕಶಿಕ್ಷಣದ ಮಾಧ್ಯಮವಾಗಿದೆ. ಪ್ರಾಚೀನ ನಾಟ್ಯಶಾಸ್ತ್ರದ ತಳಹದಿಯಿಂದ ಬೆಳೆದುಬಂದ ಯಕ್ಷಗಾನ, ಬಯಲಾಟ ಮತ್ತು ಬೀದಿನಾಟಕಗಳಂತಹ ಪ್ರಕಾರಗಳು ಕಾಲಕಾಲಕ್ಕೆ ಸಮಾಜದ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸುತ್ತಲೇ ಬಂದಿವೆ. ವಿಶೇಷವಾಗಿ ಇಂದಿನ ಯುವಜನತೆಗೆ, ಕೇವಲ ಪಠ್ಯದ ಓದಿಗಿಂತ ರಂಗಕಲೆಯ ಪ್ರಾಯೋಗಿಕ ಒಡನಾಟವು ಸಾಮಾಜಿಕ ಜವಾಬ್ದಾರಿ, ನೈತಿಕ ಮೌಲ್ಯ ಮತ್ತು ಮಾನವೀಯತೆಯನ್ನು ಅತ್ಯಂತ ಆಳವಾಗಿ ಕಲಿಸುತ್ತದೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇಂದಿನ ಪರಿಸರ ಸಂರಕ್ಷಣೆ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣದವರೆಗೆ ರಂಗಭೂಮಿಯ ಕೊಡುಗೆ ಅಪಾರ. ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿರುವ ‘ಜೆನ್-ಝೀ’ ಪೀಳಿಗೆಯು ಸುಸ್ಥಿರ ಹಾಗೂ ಸ್ವಸ್ಥ ಸಮಾಜವನ್ನು ಕಟ್ಟಲು, ಅವರಲ್ಲಿ ಆತ್ಮವಿಶ್ವಾಸ ತುಂಬಿ ಸಕಾರಾತ್ಮಕ ಬದಲಾವಣೆ ತರುವ ಅತ್ಯುತ್ತಮ ಜ್ಞಾನದ ಕೊಂಡಿಯಾಗಿ ರಂಗಭೂಮಿ ಕಾರ್ಯನಿರ್ವಹಿಸುತ್ತಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಮರುಳಸಿದ್ಧಪ್ಪ ಕೆ., (2003), ಒಡನಾಟ, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.