ಕೋಟಿ ಚೆನ್ನಯ: ಎರಡು ನಾಟಕಗಳು-ಚಲನಚಿತ್ರ ಒಂದು ತುಲನಾತ್ಮಕ ಅಧ್ಯಯನ
Main Article Content
Abstract
ಆಧುನಿಕ ಸೃಜನಶೀಲ ಸಾಹಿತ್ಯಗಳಾದ ಸಣ್ಣಕತೆ-ಕಾದಂಬರಿಗಳು ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟು ಪಡೆದರೂ ನಂತರ ತೊಂಬತ್ತರ ದಶಕದವರೆಗೆ ಅದು ನಿಂತ ನೀರಾಗಿತ್ತು. ಆದರೆ ತುಳು ರಂಗಭೂಮಿ ಸದಾ ಕ್ರಿಯಾಶೀಲವಾಗಿತ್ತು. ಹಲವು ನಾಟಕಕಾರರು, ಕಲಾವಿದರು ಗುರುತಿಸಿಕೊಳ್ಳತೊಡಗಿದರು. ತುಳು ನಾಟಕದ ಜನಪ್ರಿಯತೆ ತುಳು ಚಲನಚಿತ್ರಗಳನ್ನು ನಿರ್ಮಿಸಲೂ ಕಾರಣವಾಯಿತು.
ತುಳು ಜನಪದೀಯ ಕಥೆಯೊಂದನ್ನಾಧರಿಸಿ ರಚನೆಯಾಗಿ ರಂಗಪ್ರಯೋಗ ಕಂಡ ಮೊದಲ ಚಾರಿತ್ರಿಕ ನಾಟಕ ‘ಕೋಟಿ ಚೆನ್ನಯ’. ಹಾಗೆಯೇ ವಿಶುಕುಮಾರರ ನಿರ್ದೇಶನದಲ್ಲಿ ‘ಕೋಟಿ ಚೆನ್ನಯ’ ಸಿನೆಮಾ 1973ರಲ್ಲಿ ಬಿಡುಗಡೆಗೊಂಡಿತು. ಯಕ್ಷಗಾನದಲ್ಲಿ ಅದಾಗಲೇ ದೊಡ್ಡ ಮಟ್ಟದ ಕಲಾಪ್ರೇಮಿಗಳನ್ನು ಸೃಷ್ಟಿಸಿದ್ದ ಈ ಕಥೆಯು ನಾಟಕ ರಂಗ ಮತ್ತು ಚಿತ್ರರಂಗಗಳೆರಡರಲ್ಲೂ ಜಯಭೇರಿ ಕಂಡಿತು. ಜೊತೆಗೆ ಹತ್ತು ವರ್ಷಗಳ ನಂತರ ಸೀತಾನದಿ ಗಣಪಯ್ಯ ಶೆಟ್ಟಿ ಅವರಿಂದ ಇದೇ ಕಥೆ ಮತ್ತೆ ನಾಟಕ ರೂಪ ಪಡೆಯಿತು. ಇವು ಮೂರನ್ನು ತೌಲನಿಕ ಅಧ್ಯಯನಕ್ಕೆ ಒಳಪಡಿಸಿದ್ದೇನೆ.
ಜನಪದ ಸಿದ್ಧ ಕತೆಯೊಂದು ಇದ್ದರೂ ಸೃಜನಶೀಲ ಸಾಹಿತ್ಯಕ್ಕೆ ತರುವಾಗ ಅದರಲ್ಲಿನ ಒಳನೋಟಗಳು ಭಿನ್ನತೆಯನ್ನು ಪಡೆದುಕೊಳ್ಳುತ್ತವೆ. ಬರಹಗಾರನ ಬದುಕು, ಆ ಕಾಲಘಟ್ಟದ ರಾಜಕೀಯ-ಸಾಮಾಜಿಕ ಸಂಗತಿಗಳು, ಪ್ರಾದೇಶಿಕ ಅನನ್ಯತೆಗಳು ಬರಹದ ಮೇಲೆ ಬರಹಗಾರನಿಗೆ ಅರಿವಿಲ್ಲದೆಯೂ ಪ್ರಭಾವ ಬೀರಿರುತ್ತವೆ. ʼಕೋಟಿ ಚೆನ್ನಯʼ ಕಥೆಯು ತುಳುನಾಡಿನಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿರುವ ಬಿಲ್ಲವ ಸಮುದಾಯದ ಅಸ್ಮಿತೆಯ ಸಂಕೇತವಾಗಿ ಮೂಡಿ ಬಂದಿರುವಂತೆಯೇ ಹಿಂದಿನ ತುಳುನಾಡಿನಲ್ಲಿ ಆ ಸಮುದಾಯದ ಸಾಮಾಜಿಕ ಸ್ಥಿತಿಗತಿಗಳು ಬರಹಗಾರನ ಕಾಲಕ್ಕೆ-ಸಮಾಜಕ್ಕೆ ಪೂರಕವಾಗಿ ಅಭಿವ್ಯಕ್ತಗೊಳ್ಳುತ್ತಾ ಹೋಗುತ್ತವೆ. ಇದನ್ನು ಈ ಲೇಖನದಲ್ಲಿ ವಿಶ್ಲೇಷಿಸುವ ಪ್ರಯತ್ನವನ್ನು ಮಾಡಿದ್ದೇನೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ವಿಶುಕುಮಾರ್, (1967), ಕೋಟಿ ಚೆನ್ನಯ - ತುಳು ಚಾರಿತ್ರಿಕ ನಾಟಕ, ಮಂಗಳೂರು: ಕೆನರಾ ಪ್ರಿಂಟಿಂಗ್ ವರ್ಕ್ಸ್.
ಸೀತಾನದಿ ಗಣಪಯ್ಯ ಶೆಟ್ಟಿ, (1981), ಕೋಟಿ ಚೆನ್ನಯ - ತುಳು ನಾಟಕ, ಹಿರಿಯಡಕ (ದ.ಕ.): ಸುಬೋಧ ಸಾಹಿತ್ಯ ಭಂಡಾರ.
ಗೋವಿಂದ ರಾವ್ ಜಿ. ಕೆ., (2003), ಶೇಕ್ಸ್‌ಪಿಯರ್ - ಎರಡು ನಾಟಕಗಳ ಅಧ್ಯಯನ, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ಮುದ್ದು ಮೂಡುಬೆಳ್ಳೆ, (2005), ತುಳು ರಂಗಭೂಮಿ, ಮಂಗಳೂರು (ಉರ್ವ): ಸಾಹಿತ್ಯ ಸಂಸ್ಕೃತಿ ವೇದಿಕೆ.
ಮಾಧವ ಎಂ. ಕೆ., (2021), ಬೊಳ್ಳಿ ಸಂಬ್ರಮೊ - ಉಪನ್ಯಾಸ ಮಾಲೆ, ಮಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ಮಂಗಳೂರು ವಿಶ್ವವಿದ್ಯಾನಿಲಯ.
ವಿವೇಕ್ ರೈ ಬಿ. ಎ., (2007), ತುಳು ಸಾಹಿತ್ಯ ಚರಿತ್ರೆ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ.
ವಿಶುಕುಮಾರ್, (1973), ಕೋಟಿ ಚೆನ್ನಯ ತುಳು ಸಿನೆಮಾ, ಪ್ರಜಾಫಿಲಂಸ್ ಬ್ಯಾನರ್ಸ್.
ಶಿವರಾಮ ಶಿಶಿಲ, (1987), ಕೋಟಿ ಚೆನ್ನಯ ಮಕ್ಕಳ ನಾಟಕ, ಕಿನ್ನಿಗೋಳಿ: ಯುಗಪುರುಷ ಪ್ರಕಟಣಾಲಯ.
ಕದ್ರಿ ನವನೀತ ಶೆಟ್ಟಿ, (2014), ಬಿರ್ದೌದ ಬೀರೆರ್ ಕೋಟಿ ಚೆನ್ನಯೇರ, ಮಂಗಳೂರು: ಗುತ್ತು ಪ್ರಕಾಶನ.