ತಂತ್ರಜ್ಞಾನ ಮತ್ತು ಕನ್ನಡ ಸವಾಲು ಮತ್ತು ಸಾಧ್ಯತೆಗಳು

Main Article Content

ಡಾ. ಎಂ.ಎನ್. ಹಾರೋಗೇರಿ

Abstract

ಜಾಗತೀಕರಣ ಮತ್ತು ಡಿಜಿಟಲ್ ಯುಗದಲ್ಲಿ ಕನ್ನಡ ಭಾಷೆಯ ಉಳಿವು ಹಾಗೂ ನಿರಂತರ ಬೆಳವಣಿಗೆಗೆ ತಂತ್ರಜ್ಞಾನದ ಅಳವಡಿಕೆ ಅತ್ಯಂತ ಅನಿವಾರ್ಯವಾಗಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಗಣಕೀಕರಣದ ಇತಿಹಾಸವು ಕೆ.ಪಿ. ರಾವ್‌ ಅವರ ಆರಂಭಿಕ ಕೊಡುಗೆಗಳಿಂದ ಹಿಡಿದು ಇಂದಿನ ಯೂನಿಕೋಡ್‌, ಮೊಬೈಲ್ ತಂತ್ರಾಂಶಗಳು ಮತ್ತು ಇ-ಆಡಳಿತದ ವಿಸ್ತಾರದವರೆಗೆ ಬೆಳೆದುಬಂದಿದೆ. ಆದರೂ, ಭಾಷಾ ತಂತ್ರಾಂಶಗಳ ಅಭಿವೃದ್ಧಿಯಲ್ಲಿ ಸಮನ್ವಯದ ಕೊರತೆ, ಏಕೀಕೃತ ಮಾನದಂಡಗಳಿಲ್ಲದಿರುವುದು, ದತ್ತಸಂಚಯ ಹಾಗೂ ಮುಕ್ತ ಸಂಪನ್ಮೂಲಗಳ ಅಲಭ್ಯತೆಯಂತಹ ಹಲವು ಗಂಭೀರ ಸವಾಲುಗಳನ್ನು ಕನ್ನಡ ಎದುರಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಇಂಗ್ಲಿಷ್‌ಗೆ ಸರಿಸಮಾನವಾಗಿ ಕನ್ನಡವನ್ನು ಜ್ಞಾನ, ಆಡಳಿತ ಮತ್ತು ಉದ್ಯೋಗದ ಭಾಷೆಯಾಗಿ ಬೆಳೆಸಲು ಯಂತ್ರಾನುವಾದ, ಧ್ವನಿ-ಪಠ್ಯ ತಂತ್ರಜ್ಞಾನ ಮತ್ತು ಸಮುದಾಯ ಆಧಾರಿತ ತಾಂತ್ರಿಕ ಸಂಶೋಧನೆಗಳು ತುರ್ತಾಗಿ ಆಗಬೇಕಿದೆ. ಸರ್ಕಾರ, ಸಾಫ್ಟ್‌ವೇರ್ ತಂತ್ರಜ್ಞರು ಮತ್ತು ಭಾಷಾ ತಜ್ಞರು ಒಗ್ಗೂಡಿ ಶ್ರಮಿಸಿದರೆ ಮಾತ್ರ ಭವಿಷ್ಯದಲ್ಲಿ ಕನ್ನಡವನ್ನು ಅತ್ಯಾಧುನಿಕ ಡಿಜಿಟಲ್ ವೇದಿಕೆಗಳಲ್ಲಿ ಸ್ಪರ್ಧಾತ್ಮಕವಾಗಿ ಉಳಿಸಿ, ಬೆಳೆಸಲು ಸಾಧ್ಯವಾಗುತ್ತದೆ.

Article Details

Section

Research Articles

Author Biography

ಡಾ. ಎಂ.ಎನ್. ಹಾರೋಗೇರಿ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಶ್ರೀ ಶಂಕರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ‌ನವಲಗುಂದ.

How to Cite

ಎಂ.ಎನ್. ಹಾರೋಗೇರಿ. (2026). ತಂತ್ರಜ್ಞಾನ ಮತ್ತು ಕನ್ನಡ ಸವಾಲು ಮತ್ತು ಸಾಧ್ಯತೆಗಳು. ಅಕ್ಷರಸೂರ್ಯ (AKSHARASURYA), 16(06), 159 to 171. https://aksharasurya.com/index.php/latest/article/view/2238

References

ಪವನಜ ಯು. ಬಿ., ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ ಬೆಳೆದು ಬಂದ ದಾರಿ, ಬೆಂಗಳೂರು.

ಕರ್ನಾಟಕ ಸರ್ಕಾರ, (2010), ಕನ್ನಡ ತಂತ್ರಾಂಶ ಅಭಿವೃದ್ಧಿ: ಸಮಗ್ರ ವರದಿ, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

ಮಲ್ಲಪ್ಪ ಎನ್. ಬಂಡಿ, ಕನ್ನಡಪರ ತಂತ್ರಜ್ಞಾನ ರೂಪಿಸುವ ಸವಾಲು ಮತ್ತು ಸಾಧ್ಯತೆ, ಕನ್ನಡ ಭಾರತಿ.

ಟಿ. ಜಿ. ಶ್ರೀನಿಧಿ, ಕನ್ನಡ ತಂತ್ರಜ್ಞಾನ ಇಂದು ನಿನ್ನೆ ನಾಳೆ, ಬೆಂಗಳೂರು.