ಯಶಸ್ಸಿನ ದುಂದುಭಿ-‘ಫ್ರೀಡಮ್’ ಕಾದಂಬರಿ
Main Article Content
Abstract
ಡಾ. ಈರಣ್ಣ ಇಂಜಗನೇರಿ ಅವರ ‘ಫ್ರೀಡಮ್’ ಕಾದಂಬರಿಯು ಸ್ತ್ರೀ ಸಂವೇದನೆ ಹಾಗೂ ಮಹಿಳಾ ಸಬಲೀಕರಣದ ಅತ್ಯುತ್ತಮ ನಿದರ್ಶನವಾಗಿದೆ. ಜಾನಕಿ ಎಂಬ ನಾಯಕಿಯ ಸುತ್ತ ಹೆಣೆದಿರುವ ಈ ಕಥೆಯು, ಪುರುಷ ಪ್ರಧಾನ ಸಮಾಜದ ತಡೆಗೋಡೆಗಳನ್ನು ಒಡೆದು ತನ್ನದೇ ಆದ ವಿಶಿಷ್ಟ ಅಸ್ಮಿತೆಯನ್ನು ಕಂಡುಕೊಳ್ಳುವ ದಿಟ್ಟ ಮಹಿಳೆಯ ಯಶೋಗಾಥೆಯನ್ನು ಕಟ್ಟಿಕೊಡುತ್ತದೆ. ಕೌಟುಂಬಿಕ ದಬ್ಬಾಳಿಕೆ, ಕಾರ್ಪೊರೇಟ್ ವಂಚನೆ ಹಾಗೂ ರಾಜಕೀಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಜಾನಕಿಯು ಯಶಸ್ವಿ ಉದ್ಯಮಿಯಾಗಿ, ನಟಿಯಾಗಿ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿ ಬೆಳೆಯುವ ಪರಿಯನ್ನು ಕಾದಂಬರಿಕಾರರು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಯಜಮಾನ್ಯ ಸಂಸ್ಕೃತಿಯನ್ನು ದಿಕ್ಕರಿಸಿ, ಹೆಣ್ಣು ಕೇವಲ ಭೋಗದ ವಸ್ತುವಲ್ಲ; ಆಕೆಗೂ ಅಪಾರ ಜ್ಞಾನ, ಪ್ರತಿಭೆ ಮತ್ತು ಶಕ್ತಿ ಇದೆ ಎಂಬುದನ್ನು ಈ ಕೃತಿ ದೃಢವಾಗಿ ಸಾರುತ್ತದೆ. ಸಮಕಾಲೀನ ಸಮಾಜದ ವ್ಯವಸ್ಥೆಯ ಡೋಂಗಿತನವನ್ನು ವಿಮರ್ಶಿಸುತ್ತಲೇ, ಮಹಿಳಾ ಹೋರಾಟದ ನೈಜ ಚಿತ್ರಣವನ್ನು ಹಾಗೂ ಸ್ತ್ರೀವಾದಿ ನೆಲೆಗಳನ್ನು ಕಟ್ಟಿಕೊಡುವ ಪ್ರಯತ್ನವನ್ನು ವಿಮರ್ಶಕರು ಇಲ್ಲಿ ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದ್ದಾರೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.