ವಚನ ಸಾಹಿತ್ಯಕ್ಕೆ ಮಹಿಳಾ ವಚನಕಾರರ ಕೊಡುಗೆ

Main Article Content

ಪ್ರೊ. ಶಿವಾನಂದ ಕೊರವರ

Abstract

ಹನ್ನೆರಡನೆಯ ಶತಮಾನದ ಶರಣ ಚಳುವಳಿಯು ಕನ್ನಡ ಸಾಹಿತ್ಯಕ್ಕೆ ನೀಡಿದ ಅಪೂರ್ವ ಕೊಡುಗೆಯೇ ವಚನ ಸಾಹಿತ್ಯ. ಅಂದಿನ ಪುರುಷಪ್ರಧಾನ ಸಮಾಜದಲ್ಲಿ ಅಂಚಿಗೆ ತಳ್ಳಲ್ಪಟ್ಟಿದ್ದ ಮಹಿಳೆಯರು ಸ್ವತಂತ್ರವಾಗಿ ತಮ್ಮ ಅಭಿವ್ಯಕ್ತಿಯನ್ನು ತೋರಲು ಈ ಸಾಹಿತ್ಯ ಪ್ರಕಾರವು ಭದ್ರ ವೇದಿಕೆಯೊದಗಿಸಿತು. ಅಕ್ಕಮಹಾದೇವಿ, ಮುಕ್ತಾಯಕ್ಕ, ನೀಲಮ್ಮ, ಆಯ್ದಕ್ಕಿ ಲಕ್ಕಮ್ಮ, ಅಮುಗೆ ರಾಯಮ್ಮ ಮುಂತಾದ ಶಿವಶರಣೆಯರು ಭಕ್ತಿ, ಕಾಯಕ, ದಾಸೋಹ ಮತ್ತು ಜೀವನ ಮೌಲ್ಯಗಳನ್ನು ತಮ್ಮ ವಚನಗಳ ಮೂಲಕ ಅತ್ಯಂತ ನಿಷ್ಠುರವಾಗಿ ಹಾಗೂ ಸಮರ್ಥವಾಗಿ ಪ್ರತಿಪಾದಿಸಿದ್ದಾರೆ. ಸಮಾಜದಲ್ಲಿದ್ದ ಡಾಂಭಿಕ ಭಕ್ತಿ ಹಾಗೂ ಮೌಢ್ಯಗಳನ್ನು ಖಂಡಿಸಿ, ಸಮಾನತೆ ಹಾಗೂ ಸ್ತ್ರೀ ಸ್ವಾತಂತ್ರ್ಯವನ್ನು ಸ್ಥಾಪಿಸುವಲ್ಲಿ ಇವರ ಕೊಡುಗೆ ಅನನ್ಯವಾದುದು. ಜಗತ್ತಿನ ಸಾಹಿತ್ಯ ಚರಿತ್ರೆಯಲ್ಲಿಯೇ ಮಹಿಳೆಯರು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಾಹಿತ್ಯ ಕೃಷಿ ಮಾಡಿರುವ ಹಾಗೂ ಕ್ರಾಂತಿಯಲ್ಲಿ ಪಾಲ್ಗೊಂಡಿರುವ ಈ ಕಾಲಘಟ್ಟವು ಮಹಿಳಾ ಸಬಲೀಕರಣದ ಮತ್ತು ಅಧ್ಯಾತ್ಮದ ಸುವರ್ಣಯುಗವೆಂದು ಪರಿಗಣಿಸಲ್ಪಟ್ಟಿದೆ.

Article Details

Section

Research Articles

Author Biography

ಪ್ರೊ. ಶಿವಾನಂದ ಕೊರವರ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಕೆ.ಎಸ್.ಎಸ್. ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಗದಗ.

How to Cite

ಶಿವಾನಂದ ಕೊರವರ. (2026). ವಚನ ಸಾಹಿತ್ಯಕ್ಕೆ ಮಹಿಳಾ ವಚನಕಾರರ ಕೊಡುಗೆ. ಅಕ್ಷರಸೂರ್ಯ (AKSHARASURYA), 16(06), 143 to 149. https://aksharasurya.com/index.php/latest/article/view/2235

References

ಮರುಳಸಿದ್ದಪ್ಪ ಕೆ. ಮತ್ತು ನಾಗರಾಜ ಕಿ.ರಂ. (ಸಂ.), (1980), ವಚನ ಕಮ್ಮಟ, ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.

ಬಸವರಾಜು ಎಲ್., (1966), ಅಕ್ಕನ ವಚನಗಳು, ಮೈಸೂರು: ಗೀತಾ ಬುಕ್ ಹೌಸ್.

ಭೂಸನೂರಮಠ ಸಂ.ಶಿ. (ಸಂ.), (1969), ವಚನ ಸಾಹಿತ್ಯ ಸಂಗ್ರಹ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ಶ್ರೀನಿವಾಸಮೂರ್ತಿ ಎಂ.ಆರ್., (1931), ವಚನ ಧರ್ಮಸಾರ, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.

ವೀರಣ್ಣ ರಾಜೂರು (ಸಂ.), (2001), ಶಿವಶರಣೆಯ ವಚನ ಸಂಪುಟ - 5, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.

ಚಿದಾನಂದಮೂರ್ತಿ ಎಂ., (1975), ವಚನ ಸಾಹಿತ್ಯ, ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.