ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ
Main Article Content
Abstract
ವ್ಯಕ್ತಿ ಮತ್ತು ಸಮಾಜದ ನಡುವಿನ ಸಾಮರಸ್ಯವೇ ಆರೋಗ್ಯಕರ ಬದುಕಿನ ಆಧಾರ ಎಂಬುದನ್ನು ಬಸವಣ್ಣನವರ ವಚನಗಳು ಮಾರ್ಮಿಕವಾಗಿ ನಿರೂಪಿಸಿವೆ. ಹನ್ನೆರಡನೇ ಶತಮಾನದ ಶರಣ ಚಳುವಳಿಯು ಮೇಲು-ಕೀಳು ಎಂಬ ಕೃತಕ ವರ್ಣವ್ಯವಸ್ಥೆಯನ್ನು ದಿಟ್ಟವಾಗಿ ಧಿಕ್ಕರಿಸಿತು; ಮನುಷ್ಯನ ಯೋಗ್ಯತೆಯು ಹುಟ್ಟಿನಿಂದಲ್ಲ, ಗುಣಕರ್ಮಗಳಿಂದ ನಿರ್ಧಾರವಾಗುತ್ತದೆ ಎಂದು ಸಾರಿತು. ಅಸ್ಪೃಶ್ಯತೆ ನಿವಾರಣೆ ಹಾಗೂ ಅಂತರ್ಜಾತೀಯ ವಿವಾಹದಂತಹ ಕ್ರಾಂತಿಕಾರಿ ಹೆಜ್ಜೆಗಳ ಮೂಲಕ ಸರ್ವಸಮಾನತೆಯ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ಭದ್ರ ಬುನಾದಿ ಹಾಕಿದರು. ‘ಕಾಯಕ’ದ ಕಲ್ಪನೆಯು ಶ್ರಮದಾನ, ವೃತ್ತಿಗೌರವ ಮತ್ತು ಆರ್ಥಿಕ ಸುಭದ್ರತೆಯ ಮಹತ್ವವನ್ನು ಸಮಾಜಕ್ಕೆ ಮನದಟ್ಟು ಮಾಡಿದರೆ, ‘ಅನುಭವ ಮಂಟಪ’ವು ಎಲ್ಲ ವರ್ಗದವರಿಗೂ, ಸ್ತ್ರೀಯರಿಗೂ ಮುಕ್ತವಾದ ಪ್ರಜಾಪ್ರಭುತ್ವದ ನೈಜ ಸಂಕೇತವಾಗಿ ರೂಪುಗೊಂಡಿತು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ದಯೆಯಂತಹ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ, ಡಾಂಭಿಕತೆ ಹಾಗೂ ಶೋಷಣೆಮುಕ್ತವಾದ ಸರ್ವೋದಯ ಸಮಾಜವನ್ನು ಕಟ್ಟುವಲ್ಲಿ ವಚನ ಸಾಹಿತ್ಯದ ತಾತ್ವಿಕ ನಿಲುವುಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಹೊಂದಿವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಹಿರೇಮಠ ಆರ್. ಸಿ. (ಸಂ.), (1968), ಬಸವಣ್ಣನವರ ವಚನಗಳು, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ.
ತಿಪ್ಪೇರುದ್ರಸ್ವಾಮಿ ಎಚ್., (1975), ಶೂನ್ಯ ಸಂಪಾದನೆ: ವಿವರಣಾತ್ಮಕ ಪರಿಚಯ, ಮೈಸೂರು: ಡಿ. ವಿ. ಕೆ. ಮೂರ್ತಿ ಪ್ರಕಾಶನ.
ಮರುಳಸಿದ್ದಪ್ಪ ಕೆ. (ಸಂ.), (1980), ವಚನ ಕಮ್ಮಟ, ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾನಿಲಯ.
ಸಂಗಮೇಶ ಸವದತ್ತಿಮಠ (ಸಂ.), (2001), ವಿಷಯ ವಚನ ಸಂಪುಟಗಳು-ಸಂ.8, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, (1998), ಬಸವ ಪರುಷ, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.
ಬಸವರಾಜ ಜಿ. ಅಮ್ಮಣಗಿ, (2000), ವಿಶ್ವಪ್ರವಾದಿ ಬಸವಣ್ಣನವರು, ಮೈಸೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು.
ತಿಪ್ಪೇರುದ್ರಸ್ವಾಮಿ ಎಚ್., (1963), ಶರಣರ ಅನುಭಾವ ಸಾಹಿತ್ಯ, ಮೈಸೂರು: ಡಿ. ವಿ. ಕೆ. ಮೂರ್ತಿ ಪ್ರಕಾಶನ.
ನಾಗಭೂಷಣ ಓ. ಎಲ್. (ಸಂ.), (2004), ವಚನ ಸಾವಿರ, ಬೆಂಗಳೂರು: ಅಭಿನವ ಪ್ರಕಾಶನ.
ಹೆಂಡಿ ಬಿ. ಬಿ. (ಸಂ.), (1980), ಬಸವೇಶ್ವರ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.