ಕನ್ನಡ ಸಾಹಿತ್ಯ ಮತ್ತು ಪಾಶ್ಚಾತ್ಯ ಸ್ತ್ರೀವಾದಿ ಚಿಂತನೆಗಳು

Main Article Content

ಸಂಗೀತಾ ವಣಗೇರಿ

Abstract

ಮಹಿಳೆಯರ ಸಾಮಾಜಿಕ ಸ್ಥಿತಿ, ಸಮಾನತೆ ಮತ್ತು ಹಕ್ಕುಗಳ ಕುರಿತಾದ ಪಾಶ್ಚಾತ್ಯ ಸ್ತ್ರೀವಾದಿ ಚಿಂತನೆಗಳು ಹಾಗೂ ಕನ್ನಡ ಸಾಹಿತ್ಯದಲ್ಲಿನ ಸ್ತ್ರೀವಾದದ ಅಭಿವ್ಯಕ್ತಿಗಳ ತುಲನಾತ್ಮಕ ವಿಶ್ಲೇಷಣೆಯನ್ನು ಇಲ್ಲಿ ಮಂಡಿಸಲಾಗಿದೆ. ಪಾಶ್ಚಾತ್ಯ ಜಗತ್ತಿನಲ್ಲಿ ಸ್ತ್ರೀವಾದವು ಹಕ್ಕುಗಳಿಗಾಗಿ ನಡೆದ ಮೂರು ಪ್ರಮುಖ ಹಂತಗಳ ರಾಜಕೀಯ ಮತ್ತು ಸೈದ್ಧಾಂತಿಕ ಚಳುವಳಿಯಾಗಿ ಬೆಳೆದರೆ, ಕನ್ನಡ ಸಾಹಿತ್ಯದಲ್ಲಿ ಅದು ಭಕ್ತಿಕಾಲದ ವಚನಗಳು, ನವೋದಯ ಮತ್ತು ಸಮಕಾಲೀನ ಬರಹಗಳ ಮೂಲಕ ಸ್ಥಳೀಯ ಸಂಸ್ಕೃತಿ, ಕೌಟುಂಬಿಕ ವ್ಯವಸ್ಥೆ ಹಾಗೂ ಒಳತೋಟಿಯ ಸೂಕ್ಷ್ಮ ಅನುಭವಗಳ ಪ್ರತೀಕವಾಗಿ ಹೊರಹೊಮ್ಮಿದೆ. ಪಾಶ್ಚಾತ್ಯ ಚಿಂತನೆಗಳು ವ್ಯಕ್ತಿಸ್ವಾತಂತ್ರ್ಯ ಮತ್ತು ಸಾಂಸ್ಥಿಕ ವಿಮರ್ಶೆಯ ಮೇಲೆ ನಿಂತಿದ್ದರೆ, ಕನ್ನಡದ ಸ್ತ್ರೀವಾದವು ಮೌನ, ಪ್ರತಿರೋಧ ಮತ್ತು ಸಹನೆಗಳ ಮೂಲಕ ಮಹಿಳೆಯ ಅಸ್ಮಿತೆಯನ್ನು ಕಟ್ಟಿಕೊಡುತ್ತದೆ. ಅಕ್ಕಮಹಾದೇವಿ, ತ್ರಿವೇಣಿ, ವೈದೇಹಿಯವರಂತಹ ಲೇಖಕಿಯರ ಬರಹಗಳನ್ನು ಪಾಶ್ಚಿಮಾತ್ಯ ಚಿಂತಕರ ತಾತ್ವಿಕತೆಯೊಂದಿಗೆ ಮುಖಾಮುಖಿಯಾಗಿಸಿ, ಭಿನ್ನ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಸ್ತ್ರೀ ಸಂವೇದನೆಯು ಹೇಗೆ ರೂಪುಗೊಂಡಿದೆ ಎಂಬುದನ್ನು ನಿರೂಪಿಸಲಾಗಿದೆ.

Article Details

Section

Research Articles

Author Biography

ಸಂಗೀತಾ ವಣಗೇರಿ

ಉಪನ್ಯಾಸಕರು, ಕೆ.ಎಲ್.ಇ. ಸಂಸ್ಥೆಯ ಜೆ.ಟಿ. ಕಾಲೇಜು, ಗದಗ.

How to Cite

ಸಂಗೀತಾ ವಣಗೇರಿ. (2026). ಕನ್ನಡ ಸಾಹಿತ್ಯ ಮತ್ತು ಪಾಶ್ಚಾತ್ಯ ಸ್ತ್ರೀವಾದಿ ಚಿಂತನೆಗಳು. ಅಕ್ಷರಸೂರ್ಯ (AKSHARASURYA), 16(06), 113 to 120. https://aksharasurya.com/index.php/latest/article/view/2230

References

ವಿಜಯಾ ದಬ್ಬೆ, ಸ್ತ್ರೀವಾದ - ಒಂದು ಪರಿಚಯ,

ಕಮಲಾ ಹಂಪನಾ, ಸ್ತ್ರೀವಾದಿ ಸಾಹಿತ್ಯ ವಿಮರ್ಶೆ, ಬೆಂಗಳೂರು: ಸಿ.ವಿ.ಜಿ. ಪಬ್ಲಿಕೇಷನ್ಸ್.

ಶ್ರೀಮತಿ ಎಚ್.ಎಸ್., ಸ್ತ್ರೀ ಅಸ್ತಿತ್ವ ಮತ್ತು ಸಾಹಿತ್ಯ, ಬೆಂಗಳೂರು: ನವಕರ್ನಾಟಕ ಪ್ರಕಾಶನ.

ರಾಮಚಂದ್ರನ್ ಸಿ.ಎನ್., ಸಾಹಿತ್ಯ ವಿಮರ್ಶೆ, ಬೆಂಗಳೂರು: ನವಕರ್ನಾಟಕ ಪ್ರಕಾಶನ.

ಬೆಲ್ ಹೂಕ್ಸ್, (2000), ಫೆಮಿನಿಸಂ ಇಸ್ ಫಾರ್ ಎವೆರಿಬಾಡಿ, ನ್ಯೂಯಾರ್ಕ್: ಸೌತ್ ಎಂಡ್ ಪ್ರೆಸ್.