ಕನ್ನಡ ಭಕ್ತಿ ಸಾಹಿತ್ಯ ಮತ್ತು ವರ್ತಮಾನದ ತಲ್ಲಣಗಳು

Main Article Content

ಡಾ. ಅರವಿಂದ ಕೆ. ಪೂಜಾರ

Abstract

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಭಕ್ತಿ ಸಾಹಿತ್ಯವು ಜನಪದರ ಪ್ರಕೃತಿ ಆರಾಧನೆಯಿಂದ ಹಿಡಿದು 12ನೇ ಶತಮಾನದ ವಚನ ಚಳುವಳಿ, ದಾಸ ಸಾಹಿತ್ಯ ಹಾಗೂ ತತ್ವಪದಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ಸೃಷ್ಟಿಸಿದೆ. ಶರಣರ ಕಾಯಕ ನಿಷ್ಠೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳು ಅಂದಿನ ಶ್ರೀಸಾಮಾನ್ಯನಿಗೂ ಆಶಾಕಿರಣವಾಗಿದ್ದವು. ಆದರೆ, ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಬೆಳೆದಿದ್ದರೂ; ಭ್ರಷ್ಟಾಚಾರ, ದೌರ್ಜನ್ಯ, ಜಾತೀಯತೆ ಹಾಗೂ ಯುದ್ಧಗಳಂತಹ ವರ್ತಮಾನದ ತಲ್ಲಣಗಳು ಮಾನವ ಕುಲವನ್ನು ತೀವ್ರವಾಗಿ ಕಾಡುತ್ತಿವೆ. ಮೌಲ್ಯಗಳ ಅಧಃಪತನದಿಂದಾಗಿ ಸಮಾಜವು ಕ್ರೂರತೆಯತ್ತ ಸಾಗುತ್ತಿದೆ. ಇಂತಹ ದೈನಂದಿನ ಆತಂಕಗಳು, ಅಸಮಾನತೆ ಹಾಗೂ ಕ್ಷೋಭೆಗಳಿಂದ ಹೊರಬಂದು ಜಗತ್ತಿನಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸಲು, ನಮ್ಮ ದಾರ್ಶನಿಕರು ಅಂದು ರೂಪಿಸಿದ ಭಕ್ತಿ ಸಾಹಿತ್ಯದ ಮಾನವೀಯ ಮೌಲ್ಯಗಳೊಂದಿಗೆ ಮರು-ಅನುಸಂಧಾನ ನಡೆಸುವುದು ಇಂದಿನ ತುರ್ತು ಅಗತ್ಯವಾಗಿದೆ.

Article Details

Section

Research Articles

Author Biography

ಡಾ. ಅರವಿಂದ ಕೆ. ಪೂಜಾರ

ಮುಖ್ಯಸ್ಥರು, ಕನ್ನಡ ವಿಭಾಗ, ಕೆ.ಎಸ್.ಎಸ್. ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಗದಗ.

How to Cite

ಅರವಿಂದ ಕೆ. ಪೂಜಾರ. (2026). ಕನ್ನಡ ಭಕ್ತಿ ಸಾಹಿತ್ಯ ಮತ್ತು ವರ್ತಮಾನದ ತಲ್ಲಣಗಳು. ಅಕ್ಷರಸೂರ್ಯ (AKSHARASURYA), 16(06), 106 to 112. https://aksharasurya.com/index.php/latest/article/view/2229

References

ಅಮರೇಶ ನುಗಡೋಣಿ (ಸಂಪಾದಕರು), ಬಸವಣ್ಣನ ವಚನಗಳು ಸಾಂಸ್ಕೃತಿಕ ಮುಖಾಮುಖಿ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ನಿಜಲಿಂಗಪ್ಪ ಮಟ್ಟಿಹಾಳ, ವಚನ ಚಳುವಳಿಯ ಬೀಜರೂಪ, ಮಾದರ ಚೆನ್ನಯ್ಯ.

ಅಮರೇಶ ನುಗಡೋಣಿ, ವಚನಗಳ ಅನುಸಂಧಾನ.

ರಾಜೇಂದ್ರ ಚೆನ್ನಿ, ಆಯ್ದ ವಿಮರ್ಶಾ ಲೇಖನಗಳು, ಸಾಗರ: ಅಕ್ಷರ ಪ್ರಕಾಶನ.

ಬಸವರಾಜು ಎಲ್. (ಸಂಪಾದಕರು), (1970), ದೇವರ ದಾಸಿಮಯ್ಯನ ವಚನಗಳು, ಮೈಸೂರು: ಗೀತಾ ಬುಕ್ ಹೌಸ್.