ಸಮಕಾಲೀನ ಭಾರತೀಯ ಸಾಹಿತ್ಯದ ಇತ್ತೀಚಿನ ಪ್ರವೃತ್ತಿಗಳು: ಹೊಸ ತಲೆಮಾರಿನ ತಲ್ಲಣಗಳು

Main Article Content

ಡಾ. ಕಸ್ತೂರಿ ದಳವಾಯಿ

Abstract

ಜಾಗತೀಕರಣ, ತಂತ್ರಜ್ಞಾನದ ಅತಿಯಾದ ವೇಗ ಮತ್ತು ಆರ್ಥಿಕ ಒತ್ತಡಗಳು ಇಂದಿನ ಹೊಸ ತಲೆಮಾರಿನ ಯುವ ಸಾಹಿತಿಗಳಲ್ಲಿ ಹುಟ್ಟುಹಾಕಿರುವ ಗುರುತಿನ ಬಿಕ್ಕಟ್ಟು ಹಾಗೂ ವಿಶಿಷ್ಟ ತಲ್ಲಣಗಳನ್ನು ಇಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ. ಕೃತಕ ಬುದ್ಧಿಮತ್ತೆ (AI) ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಯುವ ಬರಹಗಾರರು ಬರವಣಿಗೆಯ ವಸ್ತುವಿನ ಆಯ್ಕೆಯಲ್ಲಿ ತೀವ್ರ ಗೊಂದಲ ಹಾಗೂ ಹಿಂಜರಿಕೆ ಎದುರಿಸುತ್ತಿದ್ದಾರೆ. ನವೋದಯ, ನವ್ಯ, ದಲಿತ ಹಾಗೂ ಬಂಡಾಯ ಸಾಹಿತ್ಯದ ವಿವಿಧ ಘಟ್ಟಗಳನ್ನು ದಾಟಿಬಂದಿರುವ ಕನ್ನಡ ಸಾಹಿತ್ಯವು, ಇಂದು ಕಾರ್ಪೊರೇಟ್ ಸಂಸ್ಕೃತಿ, ಭ್ರಷ್ಟಾಚಾರ ಹಾಗೂ ಕೋಮುವಾದದಂತಹ ವರ್ತಮಾನದ ಬಿಕ್ಕಟ್ಟುಗಳಿಗೆ ಮುಖಾಮುಖಿಯಾಗಿದೆ. ಮಾರುಕಟ್ಟೆ ಮನೋಧರ್ಮವನ್ನು ದಿಕ್ಕರಿಸಿ, ಪ್ರಜಾಪ್ರಭುತ್ವದ ಮೌಲ್ಯಗಳು, ಸಮಾನತೆ ಮತ್ತು ಜೀವಪರ ಕಾಳಜಿಯನ್ನು ಎತ್ತಿಹಿಡಿಯುವ ‘ಹೊಸ ಬಂಡಾಯ ಸಾಹಿತ್ಯ’ದ ತುರ್ತು ಅಗತ್ಯವನ್ನು ಬಲವಾಗಿ ಪ್ರತಿಪಾದಿಸಲಾಗಿದೆ. ಸಮಕಾಲೀನ ಸವಾಲುಗಳಿಗೆ ಸ್ಪಂದಿಸುತ್ತಾ, ಮಾನವೀಯ ಸಂವೇದನೆ ಮತ್ತು ವೈಚಾರಿಕತೆಯ ತಳಹದಿಯ ಮೇಲೆ ಆರೋಗ್ಯಕರ ಸಮಾಜವನ್ನು ಕಟ್ಟುವಲ್ಲಿ ಯುವ ಬರಹಗಾರರ ಜವಾಬ್ದಾರಿಯನ್ನು ಮಾರ್ಮಿಕವಾಗಿ ಕಟ್ಟಿಕೊಡಲಾಗಿದೆ.

Article Details

Section

Research Articles

Author Biography

ಡಾ. ಕಸ್ತೂರಿ ದಳವಾಯಿ

ಕನ್ನಡ ಸಹ ಪ್ರಾಧ್ಯಾಪಕರು, ಮುಖ್ಯಸ್ಥರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಗದಗ.

How to Cite

ಕಸ್ತೂರಿ ದಳವಾಯಿ. (2026). ಸಮಕಾಲೀನ ಭಾರತೀಯ ಸಾಹಿತ್ಯದ ಇತ್ತೀಚಿನ ಪ್ರವೃತ್ತಿಗಳು: ಹೊಸ ತಲೆಮಾರಿನ ತಲ್ಲಣಗಳು. ಅಕ್ಷರಸೂರ್ಯ (AKSHARASURYA), 16(06), 102 to 105. https://aksharasurya.com/index.php/latest/article/view/2228

References

ಬರಗೂರು ರಾಮಚಂದ್ರಪ್ಪ, (2001), ಬಂಡಾಯ ಸಾಹಿತ್ಯ ಮೀಮಾಂಸೆ, ಬೆಂಗಳೂರು: ನವಕರ್ನಾಟಕ ಪ್ರಕಾಶನ.

ನಾಗರಾಜ್ ಡಿ.ಆರ್., (1999), ಸಾಹಿತ್ಯ ಕಥನ, ಹೆಗ್ಗೋಡು: ಅಕ್ಷರ ಪ್ರಕಾಶನ.

ರಹಮತ್ ತರೀಕೆರೆ, (2008), ಮತ್ತೆ ಮತ್ತೆ ಬಂಡಾಯ, ಬೆಂಗಳೂರು: ಅಭಿನವ ಪ್ರಕಾಶನ.

ಶಿವಾನಂದ ಕುರುಬತ್ತಿ, (2012), ಜಾಗತೀಕರಣ ಮತ್ತು ಕನ್ನಡ ಸಾಹಿತ್ಯ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.

ರಾಘವೇಂದ್ರ ರಾವ್ ಎಚ್.ಎಸ್., (2005), ವಿಸ್ತಾರ: ಸಮಕಾಲೀನ ಸಾಹಿತ್ಯ ವಿಮರ್ಶೆ, ಬೆಂಗಳೂರು: ಅಂಕಿತ ಪುಸ್ತಕ.